ಕಾಡಂಬಳ: ಕನ್ನಡ ಶಾಲೆಗೆ ಬೇಕಿದೆ ಶಿಕ್ಷಕರ ಬಲ!

ಓರ್ವ ಅತಿಥಿ ಶಿಕ್ಷಕಿ, ಖಾಯಂ ಶಿಕ್ಷಕರಿಗೆ ಊರವರ ಆಗ್ರಹ

Team Udayavani, Jun 16, 2023, 3:19 PM IST

ಕಾಡಂಬಳ: ಕನ್ನಡ ಶಾಲೆಗೆ ಬೇಕಿದೆ ಶಿಕ್ಷಕರ ಬಲ!

ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ನಾರು ಗ್ರಾ.ಪಂ. ವ್ಯಾಪ್ತಿಯ ದುರ್ಗ ಗ್ರಾಮದ ಕಾಡಂಬಳ ಸ.ಹಿ. ಪ್ರಾ. ಶಾಲೆಯನ್ನು ಅವಗಣಿಸಲಾಗುತ್ತಿದೆ ಎನ್ನುವ ಅಸಮಾಧಾನ ಸ್ಥಳೀಯರಿಂದ ವ್ಯಕ್ತವಾಗಿದೆ. ಈ ಸರಕಾರಿ ಶಾಲೆ ಪರಿಸರದ ಅದೆಷ್ಟೋ ಮಕ್ಕಳಿಗೆ ವಿದ್ಯೆ ನೀಡಿದೆ. ಈ ಶಾಲೆಯ ಪರಿಸ್ಥಿತಿ ಕಳೆದ ಎಂಟು ವರ್ಷಗಳಿಂದ ಈಚೆಗೆ ಶೋಚನೀಯ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಈ ಶಾಲೆಗೆ ಖಾಯಂ ಶಿಕ್ಷಕರನ್ನು ದೀರ್ಘಾವಧಿ ವರೆಗೂ ನೇಮಕ ಮಾಡದೆ ಇರುವುದು.

ಈ ಶಾಲೆಯಲ್ಲಿ ಇತ್ತೀಚಿನ ವರ್ಷದ ವರೆಗೂ ಉತ್ತಮ ಮಕ್ಕಳ ಹಾಜರಾತಿ ಇತ್ತು. ಕಳೆದ ವರ್ಷ 18 ಮಂದಿ ಮಕ್ಕಳಿದ್ದರು. ಇಬ್ಬರು ಮಕ್ಕಳು ಉತ್ತೀರ್ಣಗೊಂಡು ತೆರಳಿದ್ದಾರೆ. ಇನ್ನು ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ. ಕಳೆದ ವರ್ಷ ಇಬ್ಬರು ಅತಿಥಿ ಶಿಕ್ಷಕರಿದ್ದರು. ಈಗ ಓರ್ವ ಗೌರವ ಅತಿಥಿ ಶಿಕ್ಷಕಿಯಷ್ಟೆ ಕರ್ತವ್ಯದಲ್ಲಿದ್ದಾರೆ. ಖಾಯಂ ಶಿಕ್ಷಕರನ್ನು ಕೊಟ್ಟಿಲ್ಲ ಎಂದು 6 ಮಂದಿ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಬೇರೆಡೆ ಸೇರಿಸಿದ್ದಾರೆ. ಈಗ 8 ಮಕ್ಕಳು ಮಾತ್ರವೇ ಶಾಲೆಯಲ್ಲಿ ಉಳಿದುಕೊಂಡಿದ್ದಾರೆ.

ಶಾಲೆಯಲ್ಲಿ 1ನೇ ತರಗತಿಯಲ್ಲಿ ಶೂನ್ಯ, 2ನೇ ತರಗತಿಯಲ್ಲಿ 2 ಮಂದಿ, 3ನೇ ಮತ್ತು 4ನೇ ತರಗತಿಯಲ್ಲಿ ತಲಾ ಒಬ್ಬರು, 5ನೇ ತರಗತಿಯಲ್ಲಿ ಓರ್ವ, 6ನೇ ತರಗತಿಯಲ್ಲಿ 2 ಮಂದಿ, 7ನೇ ತರಗತಿಯಲ್ಲಿ ಓರ್ವ ವಿದ್ಯಾರ್ಥಿ ಇದ್ದು ಖಾಯಂ ಶಿಕ್ಷಕರನ್ನು ನೀಡದೆ ಇದ್ದಲ್ಲಿ ಮಕ್ಕಳ ಕೊರತೆಯಿಂದ ಮುಂದಿನ ವರ್ಷದಲ್ಲಿ ಶಾಲೆ ಮುಚ್ಚುವ ಭೀತಿ ಸ್ಥಳೀಯರನ್ನು ಕಾಡಿದೆ.

ಸರ್ವ ಸೌಕರ್ಯ ಇಲ್ಲಿದೆ
ದಟ್ಟ ಕಾಡಿನೊಳಗಿನ ಈ ಶಾಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ತರಗತಿ ನಡೆಸಲು ಸಾಧ್ಯವಾಗುವಷ್ಟು ಕೊಠಡಿಗಳಿವೆ. ಶಾಲಾ ಕಟ್ಟಡ, ನಲಿಕಲಿ, ಬಿಸಿಯೂಟ, ಆಟದ ಮೈದಾನ, ಸುಸಜ್ಜಿತ ಶಾಲಾ ಆವರಣ ಗೋಡೆ ಹೀಗೇ ಸರ್ವವಿಧದ ಸೌಕರ್ಯ ಶಾಲೆಯಲ್ಲಿದೆ. ಪರಿಸರದಲ್ಲಿ ಪರಿಶಿಷ್ಟ-ಜಾತಿ ಪಂಗಡದ ಮನೆಗಳು ಅಧಿಕವಿದೆ. ಉಳಿದಂತೆ ಇತರ ಸಮುದಾಯದವರಿದ್ದಾರೆ. ಇಲ್ಲಿನ ಶಾಲೆ ಭವಿಷ್ಯದ ದಿನಗಳಲ್ಲಿ ಮುಚ್ಚಿದರೆ ಪರಿಸರದ ಮಕ್ಕಳಿಗೆ ಶಾಲೆಗಳು ದೂರವಾಗಿ ತೊಂದರೆ ಯಾಗಲಿದೆ.

ದೂರದ ಊರಿನ ಮಕ್ಕಳಿಗೆ ಸಮಸ್ಯೆ
ಕಾಡಂಬಳ ಪರಿಸರದಲ್ಲಿ ವಾಹನ ಸಂಚಾರ ಕಮ್ಮಿ ಇರುವುದರಿಂದ ಇತರೆಡೆಯ ಶಾಲೆಗೆ ಇಲ್ಲಿಯ ಮಕ್ಕಳಿಗೆ ಹೋಗಿಬರಲು ತೊಂದರೆ ಎದುರಾಗಿದೆ. ಖಾಯಂ ಶಿಕ್ಷಕರನ್ನು ಇಲ್ಲಿ ನೀಡಿದಲ್ಲಿ ಸ್ಥಳೀಯ ಮಕ್ಕಳಿಗೆ ಕಾಲು ಬುಡದಲ್ಲೆ ಶಿಕ್ಷಣ ದೊರೆಯುತ್ತದೆ. ಈ ಶಾಲೆಯ ಉಳಿವು ಇಲ್ಲಿನವರಿಗೆ ಮುಖ್ಯವೆನಿಸಿದ್ದು ಶಿಕ್ಷಣ ಇಲಾಖೆ ಮೇಲೆ ಖಾಯಂ ಶಿಕ್ಷಕರಿಗಾಗಿ ಒತ್ತಡ ಹೇರುತ್ತಿದ್ದಾರೆ.

ಶಾಲೆಯ ಉಳಿವಿಗೆ ಹರಸಾಹಸ
ಖಾಯಂ ಶಿಕ್ಷಕರನ್ನು ಕಳೆದ ಎಂಟು ವರ್ಷಗಳಿಂದಲೂ ಶಾಲೆಗೆ ನೀಡಿಲ್ಲ ಎಂದು ಬೇಸತ್ತ ಹೆತ್ತವರು ಇಲ್ಲಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಅನ್ಯ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇನ್ನು ಇದ್ದ ಮಕ್ಕಳನ್ನು ಶಾಲೆಯಲ್ಲೆ ಉಳಿಸಿಕೊಳ್ಳಲು ಪಣತೊಟ್ಟ ಊರಿನವರು ಶಾಲೆಗೆ ಶಿಕ್ಷಕರನ್ನು ಕೊಡಿ ಎಂದು ಮೊರೆಯಿಟ್ಟಿದ್ದಾರೆ. ಪೋಷಕರು ಶಾಲೆಯ ಸಮಸ್ಯೆಯನ್ನು ಶಿಕ್ಷಣ ಇಲಾಖೆ ಅಧಿಕಾರಿ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದು, ಶಾಲೆಯ ಉಳಿವಿಗೆ ಹರಸಾಹಸಪಡುತ್ತಿದ್ದಾರೆ.

ವಾರದೊಳಗೆ
ನೇಮಕಕ್ಕೆ ಕ್ರಮ
ಶಾಲೆಗಳ ದಾಖಲಾತಿ, ಮಕ್ಕಳ ಸಂಖ್ಯೆ, ಶಿಕ್ಷಕರ ಲಭ್ಯತೆ ಆಧಾರಿಸಿ ಹೊಂದಾಣಿಕೆ ಮಾಡಿ ಶಿಕ್ಷಕರನ್ನು ಹಂಚಿಕೆ ಮಾಡುತ್ತಿ ದ್ದೇವೆ. ಅಲ್ಲಿ ಈಗ ಅತಿಥಿ ಶಿಕ್ಷಕ ರೊಬ್ಬರಿದ್ದಾರೆ. ಮುಂದಿನ ಒಂದೆರಡು ದಿನದಲ್ಲಿ ಅಲ್ಲಿಗೆ ಡೆಪ್ಯುಟೇಶನ್‌ ಶಿಕ್ಷಕರನ್ನು ನಿಯೋಜಿಸಲಾಗುವುದು.
-ಚಂದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

ಶಿಕ್ಷಕರ ನೇಮಕಾತಿಯ ಭರವಸೆಯಲ್ಲಿ ಇದ್ದೇವೆ
ಖಾಯಂ ಶಿಕ್ಷಕರನ್ನು ನೀಡುವಂತೆ ಇಲಾಖೆಗೆ ಒತ್ತಾಯಿಸುತ್ತಲೇ ಬಂದಿ ದ್ದೇವೆ. ಇದುವರೆಗೂ ಪ್ರಯೋಜನ ಆಗಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ಶಿಕ್ಷಕರ ನೇಮಕಾತಿ ಕುರಿತು ಭರವಸೆಯಲ್ಲಿ ಇದ್ದೇವೆ. ಈಡೇರದಿದ್ದಲ್ಲಿ ಮುಂದೆ ನಾವು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಇಳಿಯುತ್ತೇವೆ.
-ಅಣ್ಣು , ಎಸ್‌ಡಿಎಂಸಿ ಅಧ್ಯಕ್ಷರು.

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.