ಪಿರಿಯಾಪಟ್ಟಣದಲ್ಲಿ ಹುಚ್ಚು ನಾಯಿ ದಾಳಿ: ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಗಾಯ


Team Udayavani, Jul 4, 2023, 8:45 PM IST

ಪಿರಿಯಾಪಟ್ಟಣದಲ್ಲಿ ಹುಚ್ಚು ನಾಯಿ ದಾಳಿ: ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಗಾಯ

ಪಿರಿಯಾಪಟ್ಟಣ: ಹುಚ್ಚು ನಾಯಿಯೊಂದು ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಕಚ್ಚಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಿರಿಯಾಪಟ್ಟಣದ ಈಡಿಗರ ಬೀದಿಯ ಬಳಿ ಈ ಘಟನೆ ನಡೆದಿದ್ದು ಪಟ್ಟಣದ ನಿವಾಸಿ ಇಬಾದುಲ್ಲಾ ಖಾನ್ ಮಗ ಫರಾನ್ ಎಂಬ 9 ವರ್ಷದ ಮಗುವಿಗೆ ಮೊದಲು ಹುಚ್ಚುನಾಯಿ ಕಚ್ಚಿದ್ದು ಈ ಬಗ್ಗೆ ಇಬಾದುಲ್ಲಾ ಖಾನ್ ಪಟ್ಟಣ ಪಂಚಾಯಿತಿಗೂ ಮಾಹಿತಿ ನೀಡಿದ್ಧಾರೆ. ಈ ಮಾಹಿತಿ ನಿರ್ಲಕ್ಷಿಸಿದ ಪುರಸಭೆಯವರು ಯಾವುದೆ ಕ್ರಮವಹಿಸಿಲ್ಲ.

8 ಮಂದಿಗೆ ಕಡಿತ
ಇದೇ ನಾಯಿ ಸಂಜೆಯ ವೇಳೆಗೆ ವರ್ಧನ್ ಆರ್ಯ ಎಂಬ 10 ವರ್ಷದ ಮಗುವಿನ ಮೇಲೆ ಮಾರಣಾಂತಿಕವಾಗಿ ಕಚ್ಚಿದ್ದು ತೊಡೆಯ ಭಾಗ, ಕಾಲುಗಳಿಗೆ ಕಚ್ಚಿ ಗಾಯಗೊಳಿಸಿದೆ. ಇದಾದ ನಂತರ ಜುಬೇರ್ ಶರೀಫ್, ದರ್ಶನ್, ಸುಯೇಬ್‌ಶರೀಫ್, ಇಬಾದುಲ್ಲಾಖಾನ್ ರನ್ನು ಕಡಿದಿರುವ ನಾಯಿ ಒಂದೆ ದಿನ 7 ಮಂದಿಗೆ ಕಚ್ಚಿದೆ. ಮಗುವಿಗೆ ಜಬೀರ್ ಶರೀಫ್, ರಂಗಮ್ಮ ಎಂಬ ಮಹಿಳೆಗೆ ತೀವ್ರವಾಗಿ ಗಾಯಗೊಳಿಸಿರುವ ನಾಯಿ ತೊಂದರೆ ಉಂಟು ಮಾಡಿದೆ.

ಮೈಸೂರಿಗೆ ರವಾನೆ
ನಾಯಿಕಡಿತದಿಂದ ದಾಖಲಾದ ಇಬ್ಬರಿಗೆ ಬೆಳಿಗ್ಗೆ ರ್‍ಯಾಡೀಸ್ ಇಮನೋಗೋಬಿನ್ ಎಂಬ ಇಂಜೆಕ್ಷನ್ ನೀಡಲಾಗಿತ್ತು. ತದ ನಂತರ ಬಂದ 8 ಮಂದಿಗೆ ಇಂಜೆಕ್ಷನ್ ಇಲ್ಲವಾದ ಕಾರಣ ಎಲ್ಲರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಇವರ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳು ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸುವ ಸಂಬಂಧ ಕ್ರಮವಹಿಸಲಿದ್ದಾರೆ. ಇದಲ್ಲದೆ ಬೀದಿ ನಾಯಿಗಳ ಹಾವಳಿಯ ಬಗ್ಗೆ ಘಟನೆಯಲ್ಲಿ ಹುಚ್ಚುನಾಯಿ ಕಡಿತಕ್ಕೆ ಒಳಗಾದವರ ಬಗ್ಗೆ ಕ್ರಮವಹಿಸುವಂತೆ ಪತ್ರಬರೆದು ಗಮನಕ್ಕೆ ತರಲಾಗುವುದು ಎಂದು ನಾಯಿ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಪ್ರಮೋದ್ ತಿಳಿಸಿದ್ದಾರೆ.

ಬೀದಿನಾಯಿಗಳ ಹಾವಳಿ
ಪಿರಿಯಾಪಟ್ಟಣದ ತುಂಬೆಲ್ಲಾ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸುವ ಸಂಬಂಧ ಪುರಸಭೆ ಕ್ರಮವಹಿಸಬೇಕು. ಈ ಮೂಲಕ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಹೀಗೆ ನಾಯಿಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಯಾರಾದರೂ ಹುಚ್ಚುನಾಯಿ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ತಕ್ಷಣ ಪುರಸಭೆವತಿಯಿಂದ ಸ್ಪಂಧಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ನಾಯಿ ಹುಚ್ಚು ಹಿಡಿದಿದ್ದು ನನ್ನ ಮಗ ಸೇರಿದಂತೆ ಇಬ್ಬರು ಮಕ್ಕಳಿಗೆ ಕಡಿದಿರುವ ಬಗ್ಗೆ ಪುರಸಬೆ ಕಚೇರಿಗೆ ಹೋಗಿ ತಿಳಿಸಿದ್ದೇನೆ ಆದರೆ ಯಾವ ಅಧಿಕಾರಿಯೂ ಕ್ರಮವಹಿಸಿಲ್ಲ ಇವರ ನಿರ್ಲಕ್ಷದಿಂದ 8 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ಧಾರೆ. ಇಬಾದುಲ್ಲಾಖಾನ್ ಕುಂಬಾರ ಬೀದಿ ನಿವಾಸಿ.

ಹುಚ್ಚುನಾಯಿ ದಾಳಿಮಾಡಿ ಕಚ್ಚಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು ಶೀಘ್ರದಲ್ಲಿ ಕ್ರಮವಹಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದುವರಿದ ಮಳೆಯ ಆರ್ಭಟ: ಜು.5 ರಂದು ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ಟಾಪ್ ನ್ಯೂಸ್

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

1-weewqe

IPL; ಮುಂಬೈಗೆ ನಿರಾಶಾದಾಯಕ ಅಂತ್ಯ: ಲಕ್ನೋಗೆ ಜಯ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Kundapura ರಾಟೆಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

1-weewqe

IPL; ಮುಂಬೈಗೆ ನಿರಾಶಾದಾಯಕ ಅಂತ್ಯ: ಲಕ್ನೋಗೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.