IPL; ಮುಂಬೈಗೆ ನಿರಾಶಾದಾಯಕ ಅಂತ್ಯ: ಲಕ್ನೋಗೆ ಜಯ

ರೋಹಿತ್ ಶರ್ಮ ಕೊನೆಯ ಪಂದ್ಯ ಎನ್ನಲಾಗುತ್ತಿದೆ...

Team Udayavani, May 18, 2024, 12:44 AM IST

1-weewqe

ಮುಂಬಯಿ: ಇಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ತಂಡ 18 ರನ್ ಗಳ ಜಯ ಸಾಧಿಸಿದೆ.

ನಿಕೋಲಸ್‌ ಪೂರಣ್‌ ಅವರ ಬ್ಯಾಟಿಂಗ್‌ ಅಬ್ಬರ ಹಾಗೂ ನಾಯಕ ಕೆ.ಎಲ್‌. ರಾಹುಲ್‌ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಮುಂಬೈ ವಿರುದ್ಧದ ಅಂತಿಮ ಲೀಗ್‌ ಪಂದ್ಯದಲ್ಲಿ ಲಕ್ನೋ 6 ವಿಕೆಟಿಗೆ 214 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಮುಂಬೈ ರೋಹಿತ್ ಶರ್ಮ ಮತ್ತು ನಮನ್ ಧೀರ್ ಹೋರಾಡಿದರೂ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ 18 ರನ್ ಗಳ ಸೋಲು ಅನುಭವಿಸಿತು.

ರೋಹಿತ್ ಶರ್ಮ ಕೊನೆಯ ಪಂದ್ಯ?
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮ38 ಎಸೆತಗಳಲ್ಲಿ 68 ರನ್ ಗಳಿಸಿ ಜವಾಬ್ದಾರಿಯುತ ಆಟವಾಡಿ ಔಟಾದರು. ರವಿ ಬಿಷ್ಣೋಯ್ ಎಸೆದ ಚೆಂಡನ್ನು ಮೊಹ್ಸಿನ್ ಖಾನ್ ಕೈಗೆ ನೀಡಿ ರೋಹಿತ್ ಗೆ ನಿರ್ಗಮಿಸಿದರು. ಇದು ಮುಂಬೈ ಇಂಡಿಯನ್ಸ್ ಪರ ರೋಹಿತ್ ಆಡಿರುವ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ. ರೋಹಿತ್ ಔಟಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ತೋರಿದರು.ವಾಂಖೆಡೆಯಲ್ಲಿ ಮುಂಬೈ ತಂಡದ ಅಭಿಮಾನಿಗಳು ಪುಳಕಿತರಾದರು.

ನಮನ್ ಧೀರ್ ಕೊನೆಯಲ್ಲಿ ಹೋರಾಡಿದರು.28 ಎಸೆತಗಳಲ್ಲಿ 62 ರನ್ ಗಳಿಸಿದರು. ಬ್ರೆವಿಸ್ 23 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಗಟ್ಟಿ ಆಟವಾಡಲು ವಿಫಲರಾದರು.

ಮುಂಬೈ ತಂಡ 14 ಪಂದ್ಯಗಳಲ್ಲಿ 10 ನೇ ಸೋಲು ಅನುಭವಿಸಿ ಅತ್ಯಂತ ನಿರಾಶಾದಾಯಕವಾಗಿ ಈ ಬಾರಿಯ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತು. ಅಂಕಪಟ್ಟಿಯಲ್ಲಿ ಕೊನೆಯ ಸಥನದಲ್ಲಿಯೇ ಉಳಿಯಿತು. 14 ಪಂದ್ಯಗಳಲ್ಲಿ 7 ಸೋತಿರುವ ಲಕ್ನೋಗೆ ಪ್ಲೇ ಆಫ್ ಸಾಧ್ಯತೆ ರನ್ ರೇಟ್ ಆಧಾರದ ಮೇಲೆ ಕಷ್ಟ. ನಾಳೆ ನಡೆಯಲಿರುವ ಚೆನ್ನೈ ಮತ್ತು ಆರ್ ಸಿಬಿ ನಡುವಿನ ಪಂದ್ಯ ನಿರ್ಣಾಯಕ ರೋಚಕ ಪಂದ್ಯವಾಗಿದೆ.

ಪೂರಣ್‌, ರಾಹುಲ್‌ ಇಬ್ಬರೂ ಅರ್ಧ ಶತಕ ಬಾರಿಸುವ ಜತೆಗೆ 4ನೇ ವಿಕೆಟಿಗೆ 44 ಎಸೆತಗಳಿಂದ 109 ರನ್‌ ರಾಶಿ ಹಾಕಿದರು. ಇದರಲ್ಲಿ ಪೂರಣ್‌ ಗಳಿಕೆ 29 ಎಸೆತಗಳಿಂದ 75 ರನ್‌. ಸಿಡಿಸಿದ್ದು 8 ಸಿಕ್ಸರ್‌, 5 ಬೌಂಡರಿ. ರಾಹುಲ್‌ 41 ಎಸೆತಗಳಿಂದ 55 ರನ್‌ ಹೊಡೆದರು (3 ಬೌಂಡರಿ, 3 ಸಿಕ್ಸರ್‌).
ಡಿ ಕಾಕ್‌ ಬದಲು ಆರಂಭಿಕನಾಗಿ ಇಳಿದ ದೇವದತ್ತ ಪಡಿಕ್ಕಲ್‌ ಅವರನ್ನು 3ನೇ ಎಸೆತದಲ್ಲೇ ಲೆಗ್‌ ಬಿಫೋರ್‌ ಮೂಲಕ ಔಟ್‌ ಮಾಡಿದ ನುವಾನ್‌ ತುಷಾರ ಲಕ್ನೋ ಮೇಲೆ ಒತ್ತಡ ಹೇರಿದರು. ಪಡಿಕ್ಕಲ್‌ ಅವರದು ಗೋಲ್ಡನ್‌ ಡಕ್‌ ಸಂಕಟವಾಗಿತ್ತು. ಇದರೊಂದಿಗೆ 2024ರ 7 ಪಂದ್ಯಗಳಲ್ಲಿ ಪಡಿಕ್ಕಲ್‌ ಗಳಿಕೆ 35 ರನ್ನಿಗೆ ನಿಂತಿತು.

ವನ್‌ಡೌನ್‌ನಲ್ಲಿ ಬಂದ ಸ್ಟೋಯಿನಿಸ್‌ ಮುನ್ನುಗ್ಗಿ ಬೀಸತೊಡಗಿದರೂ ಪವರ್‌ ಪ್ಲೇ ಮುಗಿಯಿತು ಎನ್ನುವಾಗ ಚಾವ್ಲಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಸಂಕಟಕ್ಕೆ ಸಿಲುಕಿದರು. ಸ್ಟೋಯಿನಿಸ್‌ ಗಳಿಕೆ 22 ಎಸೆತಗಳಿಂದ 28 ರನ್‌ (5 ಬೌಂಡರಿ). 6 ಓವರ್‌ ಅಂತ್ಯಕ್ಕೆ ಲಕ್ನೋ 2 ವಿಕೆಟಿಗೆ 49 ರನ್‌ ಗಳಿಸಿತ್ತು.

ದೀಪಕ್‌ ಹೂಡಾ (11) ಹೆಚ್ಚು ನಿಲ್ಲಲಿಲ್ಲ. ಅರ್ಧ ಹಾದಿ ಪೂರ್ತಿಗೊಳಿಸುವ ಹೊತ್ತಿಗೆ ಸರಿಯಾಗಿ ಪೆವಿಲಿಯನ್‌ ಸೇರಿಕೊಂಡರು. 10 ಓವರ್‌ ಅಂತ್ಯಕ್ಕೆ ಲಕ್ನೋ ಸ್ಕೋರ್‌ 3 ವಿಕೆಟಿಗೆ ಬರೀ 69 ರನ್‌.

ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ನಾಯಕ ಕೆ.ಎಲ್‌. ರಾಹುಲ್‌ ನಿಧಾನ ಗತಿಯಲ್ಲಿ ಇನ್ನಿಂಗ್ಸ್‌ ಬೆಳೆಸತೊಡಗಿದರು. 4ನೇ ವಿಕೆಟಿಗೆ ಪೂರಣ್‌ ಜತೆಯಾದರು. ರನ್‌ಗತಿಯಲ್ಲಿ ಏರಿಕೆ ಕಂಡುಬಂತು.

ಬುಮ್ರಾ ಬದಲು ತೆಂಡುಲ್ಕರ್‌
ಈ ಪಂದ್ಯಕ್ಕಾಗಿ ಮುಂಬೈ ಮಹತ್ತರ ಬದಲಾವಣೆಯೊಂದನ್ನು ಮಾಡಿಕೊಂಡಿತು. ಜಸ್‌ಪ್ರೀತ್‌ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿ ಅರ್ಜುನ್‌ ತೆಂಡುಲ್ಕರ್‌ ಅವರನ್ನು ಆಡಿಸಿತು. ಗಾಯಾಳು ತಿಲಕ್‌ ವರ್ಮ ಬದಲು ಡಿವಾಲ್ಡ್‌ ಬ್ರೇವಿಸ್‌ ಅವಕಾಶ ಪಡೆದರು. ಲಕ್ನೋ ತಂಡದಲ್ಲಿ ಕ್ವಿಂಟನ್‌ ಡಿ ಕಾಕ್‌ ಬದಲು ದೇವದತ್ತ ಪಡಿಕ್ಕಲ್‌ ಆಡಲಿಳಿದರು.

ಟಾಪ್ ನ್ಯೂಸ್

ಬಕ್ರೀದ್‌: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

Bakrid: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

ಶಿಕ್ಷಣದ ಮೂಲಕ ಕೌಶಲಪೂರ್ಣ ವ್ಯಕ್ತಿತ್ವ ನಿರ್ಮಾಣ: ಥಾವರ್‌ಚಂದ್‌ ಗೆಹ್ಲೋಟ್

ಶಿಕ್ಷಣದ ಮೂಲಕ ಕೌಶಲಪೂರ್ಣ ವ್ಯಕ್ತಿತ್ವ ನಿರ್ಮಾಣ: ಥಾವರ್‌ಚಂದ್‌ ಗೆಹ್ಲೋಟ್

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

1-asdsadsa

Kuwait ಅಗ್ನಿ ದುರಂತ; ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ನೆರವು: NBTC MD


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TT

TT: ಭಾರತ ವನಿತೆಯರಿಗೆ ಕಂಚು

Trent Boult confirms “This is my last T20I World Cup

T20 WorldCup; ಕ್ರಿಕೆಟ್ ವಿಶ್ವಕ್ಕೆ ಶಾಕ್ ನೀಡಿದ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್ ನಿರ್ಧಾರ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

1-a-sasa

ಬಿಲ್ಗಾರಿಕೆ: ಉಕ್ರೇನ್‌ ಎದುರು ಭಾರತಕ್ಕೆ 3-5 ಸೋಲು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

TT

TT: ಭಾರತ ವನಿತೆಯರಿಗೆ ಕಂಚು

ಬಕ್ರೀದ್‌: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

Bakrid: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

ಶಿಕ್ಷಣದ ಮೂಲಕ ಕೌಶಲಪೂರ್ಣ ವ್ಯಕ್ತಿತ್ವ ನಿರ್ಮಾಣ: ಥಾವರ್‌ಚಂದ್‌ ಗೆಹ್ಲೋಟ್

ಶಿಕ್ಷಣದ ಮೂಲಕ ಕೌಶಲಪೂರ್ಣ ವ್ಯಕ್ತಿತ್ವ ನಿರ್ಮಾಣ: ಥಾವರ್‌ಚಂದ್‌ ಗೆಹ್ಲೋಟ್

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.