ಭಾರತೀಯ ಚಿತ್ರರಂಗದಲ್ಲಿ ದಾಖಲೆಯ 35 ನ್ಯಾಷನಲ್‌ ಅವಾರ್ಡ್‌ ಪಡೆದ ವ್ಯಕ್ತಿ ಇವರು…ಯಾರೀವರು?

ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಇತರ ನಟರು ಯಾರು?

ನಾಗೇಂದ್ರ ತ್ರಾಸಿ, Aug 30, 2023, 6:32 PM IST

ಭಾರತೀಯ ಚಿತ್ರರಂಗದಲ್ಲಿ ದಾಖಲೆಯ 35 ನ್ಯಾಷನಲ್‌ ಅವಾರ್ಡ್‌ ಪಡೆದ ವ್ಯಕ್ತಿ ಇವರು…ಯಾರೀವರು?

ಇತ್ತೀಚೆಗಷ್ಟೇ 2021ನೇ ಸಾಲಿನ ಭಾರತೀಯ ಸಿನಿಮಾರಂಗದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ರಾಕೆಟ್ರಿ:ದಿ ನಂಬಿ ಎಫೆಕ್ಟ್‌, ಆರ್‌ ಆರ್‌ ಆರ್‌, ಶೇರ್ಷಾ, ದಿ ಕಾಶ್ಮೀರ್‌ ಫೈಲ್ಸ್‌, ಸ್ಯಾಂಡಲ್‌ ವುಡ್‌ ನ ಚಾರ್ಲಿ 777 ಸಿನಿಮಾ ಪ್ರಶಸ್ತಿಗೆ ಭಾಜನವಾಗಿದ್ದವು. ಸಿನಿಮಾ ರಂಗದಲ್ಲಿ ನ್ಯಾಷನಲ್‌ ಅವಾರ್ಡ್‌, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಹೆಚ್ಚಿನ ಮಹತ್ವವಿದೆ. ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಈವರೆಗೆ ಒಟ್ಟು ಏಳು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ ಕುತೂಹಲದ ಸಂಗತಿ ಎಂದರೆ ಭಾರತೀಯ ಚಿತ್ರರಂಗದಲ್ಲಿ 35 ನ್ಯಾಷನಲ್‌ ಅವಾರ್ಡ್ಸ್‌ ಗಳನ್ನು ಪಡೆದ ಏಕೈಕ ವ್ಯಕ್ತಿ ಇದ್ದಾರೆ ಅವರು ಯಾರು ಗೊತ್ತಾ?

ಅತೀ ಹೆಚ್ಚು ನ್ಯಾಷನಲ್‌ ಅವಾರ್ಡ್‌ ಪಡೆದ ವ್ಯಕ್ತಿ ಇವರು…

ಭಾರತೀಯ ಚಿತ್ರರಂಗದಲ್ಲಿ ದಂತಕಥೆ, ಶ್ರೇಷ್ಠ ನಿರ್ದೇಶಕ ಸತ್ಯಜಿತ್‌ ರೇ ಅವರು ಬರೋಬ್ಬರಿ 35 ನ್ಯಾಷನಲ್‌ ಅವಾರ್ಡ್ಸ್‌ ಗಳನ್ನು ಪಡೆದುಕೊಂಡ ಏಕೈಕ ವ್ಯಕ್ತಿಯಾಗಿದ್ದಾರೆ. ಅತ್ಯುತ್ತಮ ಸಿನಿಮಾಗಳನ್ನು ನೀಡುವ ಮೂಲಕ ಸತ್ಯಜಿತ್‌ ರೇ ಅವರು ಭಾರತೀಯ ಸಿನಿಮಾವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿರುವ ಹೆಗ್ಗಳಿಕೆ ಅವರದಾಗಿದೆ.

ಸತ್ಯಜಿತ್‌ ರೇ ನಿರ್ದೇಶನದ ಪಥೇರ್‌ ಪಾಂಚಾಲಿ ಎರಡು ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲಿಂದ ಸುಮಾರು 40 ವರ್ಷಗಳ ಕಾಲ ಸತತವಾಗಿ ಸತ್ಯಜಿತ್‌ ರೇ ನ್ಯಾಷನಲ್‌ ಅವಾರ್ಡ್ಸ್‌ ಗಳಿಗೆ ಭಾಜನರಾಗಿದ್ದರು. 1994ರಲ್ಲಿ ರೇ ಅವರು ತಮ್ಮ ಉತ್ತೋರಾನ್‌ ಚಿತ್ರದ ಅತ್ಯುತ್ತಮ ಚಿತ್ರಕಥೆಗಾಗಿ ಕೊನೆಯದಾಗಿ ನ್ಯಾಷನಲ್‌ ಅವಾರ್ಡ್‌ ಪಡೆದಿದ್ದರು.

ನಿರ್ದೇಶಕ ಸತ್ಯಜಿತ್‌ ರೇ ಅವರು ಪಡೆದ 35 ನ್ಯಾಷನಲ್‌ ಅವಾರ್ಡ್‌ ಗಳಲ್ಲಿ, ಉತ್ತಮ ನಿರ್ದೇಶನಕ್ಕಾಗಿ ಆರು ಹಾಗೂ ಇನ್ನುಳಿದಂತೆ ಉತ್ತಮ ಚಿತ್ರ, ಚಿತ್ರಕಥೆ, ಎಡಿಟಿಂಗ್‌ ಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. 1974ರಲ್ಲಿ ತೆರೆಕಂಡಿದ್ದ ರೇ ಅವರ ಸೋನಾರ್‌ ಕೆಲ್ಲಾ ಸಿನಿಮಾ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಉತ್ತಮ ನಿರ್ದೇಶಕ, ಉತ್ತಮ ಚಿತ್ರಕಥೆ ಮತ್ತು ಉತ್ತಮ ಬೆಂಗಾಲಿ ಫೀಚರ್‌ ಚಿತ್ರ ಸೇರಿದಂತೆ ಆರು ರಾಷ್ಟ್ರಪ್ರಶಸ್ತಿ ಪಡೆದಿತ್ತು. ರೇ ಅವರ 9 ಚಿತ್ರಗಳು ಬೆಂಗಾಲಿಯಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದಿತ್ತು. ಅಲ್ಲದೇ ಆರು ಸಿನಿಮಾ ಉತ್ತಮ ಫೀಚರ್‌ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದ್ದವು. 1978ರಲ್ಲಿ ಬಿಡುಗಡೆಯಾಗಿದ್ದ ಮಕ್ಕಳ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಹಾಗೂ 1972ರಲ್ಲಿ ತೆರೆ ಕಂಡಿದ್ದ ಇನ್ನರ್‌ ಐ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

 ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಇತರ ನಟರು ಯಾರು?

ಬಾಲಿವುಡ್‌ ನ ಶಬಾನಾ ಅಜ್ಮಿ ಐದು ರಾಷ್ಟ್ರಪ್ರಶಸ್ತಿ ಪಡೆದಿದ್ದು, ಖ್ಯಾತ ನಟರಾದ ಮೋಹನ್‌ ಲಾಲ್‌, ಅಮಿತಾಬ್‌ ಬಚ್ಚನ್‌ ಮತ್ತು ಕಂಗನಾ ರಣಾವತ್‌ ತಲಾ ನಾಲ್ಕು ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಟ ಮಮ್ಮುಟ್ಟಿ 3 ರಾಷ್ಟ್ರ ಪ್ರಶಸ್ತಿ,  ಪ್ರಸಿದ್ಧ ಗಾಯಕ ಯೇಸುದಾದ್‌ ಅವರು ಹಿನ್ನೆಲೆ ಗಾಯನಕ್ಕಾಗಿ ಆರು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಆದರೆ ನಿರ್ದೇಶಕ ಸತ್ಯಜಿತ್‌ ರೇ ನಂತರ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್‌ ಅವರು 17 ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಟಾಪ್ ನ್ಯೂಸ್

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Cannes‌ Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌  ʼಬಾರ್ಡರ್‌ -2ʼ ರಿಲೀಸ್?‌

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌ ʼಬಾರ್ಡರ್‌ -2ʼ ರಿಲೀಸ್?‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.