OPS ಮರುಜಾರಿ ಬೇಡ- ರಾಜ್ಯಗಳಿಗೆ ಆರ್‌ಬಿಐ ಸೂಚನೆ

Team Udayavani, Dec 12, 2023, 8:39 PM IST

rbi

ನವದೆಹಲಿ: ಹಳೆಯ ಪಿಂಚಣಿ ವ್ಯವಸ್ಥೆ(ಒಪಿಎಸ್‌) ಮರುಜಾರಿ ನಿರ್ಧಾರ ಕೈಗೊಳ್ಳುವುದರ ವಿರುದ್ಧ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಎಚ್ಚರಿಕೆ ಸಂದೇಶ ರವಾನಿಸಿದೆ.
ಇಂಥ ನಿರ್ಧಾರಗಳು ವೆಚ್ಚವನ್ನು ಹೆಚ್ಚಿಸಿ, ಅಭಿವೃದ್ಧಿಗೆ ಕಡಿವಾಣ ಹಾಕಲಿದೆ. ಅಲ್ಲದೆ, ನಾವು ಹಿಮ್ಮುಖವಾಗಿ ಹೆಜ್ಜೆಯಿಟ್ಟಂತಾಗಲಿದೆ ಎಂದೂ ಹೇಳಿದೆ. ಹಲವು ರಾಜ್ಯಗಳು ಒಪಿಎಸ್‌ ಮರುಜಾರಿ ಮಾಡುವ ಕುರಿತು ಘೋಷಿಸುತ್ತಿರುವ ಹಾಗೂ ಆಶ್ವಾಸನೆಗಳನ್ನು ನೀಡುತ್ತಿರುವಂತೆಯೇ ಆರ್‌ಬಿಐನಿಂದ ಇಂಥ ಸಂದೇಶ ಹೊರಬಿದ್ದಿದೆ.

ಎಲ್ಲ ರಾಜ್ಯಗಳೂ ಹೊಸ ಪಿಂಚಣಿ ವ್ಯವಸ್ಥೆಯಿಂದ ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳಿದರೆ, ಸಂಚಿತ ಹಣಕಾಸಿನ ಹೊರೆ ಎನ್‌ಪಿಎಸ್‌ಗಿಂತ 4.5 ಪಟ್ಟು ಹೆಚ್ಚಳವಾಗಲಿದೆ. ಜೊತೆಗೆ, 2060ರ ವೇಳೆಗೆ ಹೆಚ್ಚುವರಿ ಹೊರೆಯು ವಾರ್ಷಿಕವಾಗಿ ಜಿಡಿಪಿಯ ಶೇ.0.9ಕ್ಕೆ ತಲುಪಲಿದೆ. ಇದು 2040ರ ದಶಕದ ಆರಂಭದಲ್ಲಿ ನಿವೃತ್ತರಾಗುವವರ ಹಿರಿಯ ಒಪಿಎಸ್‌ ಪಿಂಚಣಿದಾರರ ಪಿಂಚಣಿ ಹೊರೆಯನ್ನೂ ಹೆಚ್ಚಿಸುತ್ತದೆ ಎಂದು ಹೇಳಿದೆ. ಇದೇ ವೇಳೆ, ಜನರಿಗೆ ಅನಗತ್ಯ ಸಬ್ಸಿಡಿ ಒದಗಿಸುವುದರಿಂದಲೂ ದೂರವಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದೆ.

2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಗಳ ಹಣಕಾಸು ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ವರದಿ ಪ್ರಕಟಗೊಂಡಿದ್ದು, ಸ್ಟಾಂಪ್‌ ಶುಲ್ಕ, ನೋಂದಣಿ ಶುಲ್ಕ ಹೆಚ್ಚಳದಂಥ ಕ್ರಮಗಳ ಮೂಲಕ ರಾಜ್ಯಗಳು ತಮ್ಮ ಸ್ವಂತ ತೆರಿಗೆ ಆದಾಯವನ್ನು ಹೆಚ್ಚಳ ಮಾಡಬೇಕು. ಜತೆಗೆ, ಇತರೆ ಶುಲ್ಕಗಳನ್ನು ಹೆಚ್ಚಳ ಮಾಡಿ ತೆರಿಗೆಯೇತರ ಆದಾಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಆರ್‌ಬಿಐ ಸಲಹೆ ನೀಡಿದೆ.

ಹಾದಿತಪ್ಪಿಸುವ ಜಾಹೀರಾತು ಬಗ್ಗೆ ಎಚ್ಚರ
ಸಾಲ ಮನ್ನಾದ ಆಶ್ವಾಸನೆ ನೀಡುತ್ತೇವೆಂದು ಹಾದಿತಪ್ಪಿಸುವಂಥ ಜಾಹೀರಾತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಆರ್‌ಬಿಐ ಸೂಚನೆ ನೀಡಿದೆ. ಈ ರೀತಿಯ ಜಾಹೀರಾತು ನೀಡುವ ಸಂಸ್ಥೆಗಳು, ನೀವು ಬ್ಯಾಂಕುಗಳಿಗೆ ಬಾಕಿ ಪಾವತಿಸಬೇಕಾದ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತವೆ. ಇಂಥ ಚಟುವಟಿಕೆಗಳು ಹಣಕಾಸು ಸಂಸ್ಥೆಗಳ ಸ್ಥಿರತೆಯನ್ನು ಮತ್ತು ಠೇವಣಿದಾರರ ಹಿತಾಸಕ್ತಿಯನ್ನು ದುರ್ಬಲಗೊಳಿಸುತ್ತದೆ. ಈ ಸಂಸ್ಥೆಗಳ ಜಾಹೀರಾತುಗಳಿಗೆ ಮಾರುಹೋದರೆ ನೇರ ಆರ್ಥಿಕ ನಷ್ಟಕ್ಕೆ ಸಿಲುಕುತ್ತೀರಿ ಎಂದೂ ಆರ್‌ಬಿಐ ಹೇಳಿದೆ.

ಟಾಪ್ ನ್ಯೂಸ್

HD Revanna ಕೋರ್ಟ್‌ ಮೇಲೆ ನಂಬಿಕೆ ಇದೆ ನಿರ್ದೋಷಿಯಾಗುವೆ

HD Revanna ಕೋರ್ಟ್‌ ಮೇಲೆ ನಂಬಿಕೆ ಇದೆ ನಿರ್ದೋಷಿಯಾಗುವೆ

ಪ್ರಕೃತಿ ವಿಕೋಪ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಉಭಯ ಜಿಲ್ಲಾಧಿಕಾರಿಗಳ ಸೂಚನೆ

ಪ್ರಕೃತಿ ವಿಕೋಪ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಉಭಯ ಜಿಲ್ಲಾಧಿಕಾರಿಗಳ ಸೂಚನೆ

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್‌ ಚಟುವಟಿಕೆ ಸ್ಥಗಿತ

Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್‌ ಚಟುವಟಿಕೆ ಸ್ಥಗಿತ

Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು

Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kangana ranaut

Kangana Ranaut ಬಳಿ 4.5 ಕೋಟಿ ಮೌಲ್ಯದ 50 ಪಾಲಿಸಿ: ಅಫಿದವಿತ್‌

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ:  ಸುಪ್ರೀಂ

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

Mumbai; ಉದ್ಧವ್‌ ಬಣದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ?

Mumbai; ಉದ್ಧವ್‌ ಬಣದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ?

Why Ganga river is not clean despite spending Rs 20000 crore: Congress

Varanasi; 20000 ಕೋಟಿ ರೂ. ವ್ಯಯಿಸಿದರೂ ಗಂಗಾ ನದಿ ಏಕೆ ಶುದ್ಧವಾಗಿಲ್ಲ: ಕಾಂಗ್ರೆಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

HD Revanna ಕೋರ್ಟ್‌ ಮೇಲೆ ನಂಬಿಕೆ ಇದೆ ನಿರ್ದೋಷಿಯಾಗುವೆ

HD Revanna ಕೋರ್ಟ್‌ ಮೇಲೆ ನಂಬಿಕೆ ಇದೆ ನಿರ್ದೋಷಿಯಾಗುವೆ

ಪ್ರಕೃತಿ ವಿಕೋಪ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಉಭಯ ಜಿಲ್ಲಾಧಿಕಾರಿಗಳ ಸೂಚನೆ

ಪ್ರಕೃತಿ ವಿಕೋಪ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಉಭಯ ಜಿಲ್ಲಾಧಿಕಾರಿಗಳ ಸೂಚನೆ

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Rain Alert: ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.