Padubidri; ವಂಚಿಸಿ ಹಣ ವರ್ಗಾವಣೆ: ವರುಣ್‌ ಹೆಸರಲ್ಲಿ ಅನಾಮಧೇಯನಿಂದ ಕರೆ


Team Udayavani, Feb 20, 2024, 12:01 AM IST

Padubidri; ವಂಚಿಸಿ ಹಣ ವರ್ಗಾವಣೆ: ವರುಣ್‌ ಹೆಸರಲ್ಲಿ ಅನಾಮಧೇಯನಿಂದ ಕರೆ

ಪಡುಬಿದ್ರಿ: ಹೆಜಮಾಡಿಯ ಕೆನರಾ ಬ್ಯಾಂಕ್‌ ಶಾಖೆಯಿಂದ ವಂಚಿಸಿ ಹಣ ಲಪಟಾಯಿಸಿರುವ ಪ್ರಕರಣ ದಲ್ಲಿ ವರುಣ್‌ ಕರ್ಕೇರ ಅವರ ಹೆಸರಲ್ಲಿ ಉತ್ತರ ಪ್ರದೇಶದಿಂದ ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿರುವುದು ಹಾಗೂ ಮೋಸದ ಮನವಿ ಪತ್ರ ಸಲ್ಲಿಸಿ ವಿವಿಧ ನಕಲಿ ಖಾತೆಗಳಿಗೆ ಹಣ ವರ್ಗಾವಣೆಗೊಳಿಸಿರುವುದು ಪೊಲೀಸ್‌ ತನಿಖೆಯಿಂದ ದೃಢಪಟ್ಟಿರುವುದಾಗಿ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ತಿಳಿಸಿದ್ದಾರೆ.

ವಂಚನೆಯ ಈ ಹೊಸ ಜಾಲದ ಮೂಲಕ ಕೆನರಾ ಬ್ಯಾಂಕ್‌ ಹೆಜಮಾಡಿ ಶಾಖೆಯಿಂದ 27.99 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ಕೊಳ್ಳಲಾಗಿತ್ತು. ಈ ಕುರಿತಾಗಿ ಹೆಜಮಾಡಿ ಶಾಖಾ ಇನ್‌ಚಾರ್ಜ್‌ ಪ್ರಬಂಧಕಿ ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಠಾಣಾಧಿಕಾರಿ ಪ್ರಸನ್ನ ಎಂ.ಎಸ್‌., ಇಂತಹ ಸೈಬರ್‌ ಕ್ರೈಮ್‌ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸುವಂತೆಯೂ, ಘಟನೆಗಳು ನಡೆದರೆ ತತ್‌ಕ್ಷಣ 1930 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡುವಂತೆಯೂ ವಿನಂತಿಸಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪ್ರಗತಿ ಯಲ್ಲಿದ್ದು, ನಕಲಿ ಖಾತೆಗಳು ಉತ್ತರಪ್ರದೇಶದ್ದಾಗಿವೆ. ಸದ್ಯಕ್ಕೆ ಮೂರೂ ಖಾತೆಗಳನ್ನು ಸ್ತಬ್ಧಗೊಳಿಸಲು ಹಾಗೂ ದುಷ್ಕರ್ಮಿಗಳ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ. ಮೂವರು ಖಾತೆದಾರರ ಪೈಕಿ ಹರಪಾಲ್‌ ಸಿಂಗ್‌ ಕೆನರಾ ಬ್ಯಾಂಕ್‌ ಖಾತೆಯನ್ನು ಹೊಂದಿದ್ದು, ಆತನ ಹಾಗೂ ಖಾತೆಯ ಸಮಗ್ರ ಮಾಹಿತಿ ಒದಗಿಸಲು ಕೆನರಾ ಬ್ಯಾಂಕ್‌ ಹೆಜಮಾಡಿ ಶಾಖೆಗೆ ತಿಳಿಸಲಾಗಿದೆ.

ವರುಣ್‌ ಕರ್ಕೇರ ಹೆಸರು ದುರ್ಬಳಕೆ
ವರುಣ್‌ ಕರ್ಕೇರ ಹೆಸರು, ನಕಲಿ ಸಿಮ್‌ ಬಳಸಿ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿಯು ಘಾಟ್ಕೆ ಕರ್ಕೇರ ಕಂಪೆನಿಯ ನಕಲಿ ಲೆಟರ್‌ಹೆಡ್‌, ಸೀಲ್‌, ಸಹಿ, ಖಾತಾ ಸಂಖ್ಯೆಗಳನ್ನು ಬಳಸಿಕೊಂಡು 3 ವಿವಿಧ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದನು. ಇದಾದ ಸ್ವಲ್ಪ ಸಮಯದ ಬಳಿಕ ಘಾಟ್ಕೆ ಕರ್ಕೇರ ಕಂಪೆನಿಯ ಮ್ಯಾನೇಜರ್‌ ಬ್ಯಾಂಕ್‌ ಶಾಖೆಗೆ ಕರೆಮಾಡಿ ಕಂಪೆನಿ ಅಕೌಂಟ್‌ನಿಂದ ಹಣ ವರ್ಗಾವಣೆಗೊಂಡ ಬಗ್ಗೆ ಕೇಳಿದಾಗಲೇ ಮೋಸ ಹೋದ ಸಂಗತಿ ಬಯಲಿಗೆ ಬಂತು.

ಈ ಸಂದರ್ಭ ಎಚ್ಚೆತ್ತ ಬ್ಯಾಂಕ್‌ ಸಿಬಂದಿ ಒಂದು ಖಾತೆಗೆ ಹಣ ವರ್ಗಾವಣೆಯಾಗುವುದನ್ನು ಸ್ಥಗಿತ ಗೊಳಿಸಿದ್ದರು. ಉಳಿದೆರಡು ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು.

ಟಾಪ್ ನ್ಯೂಸ್

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Manipal ಗಾಂಜಾ ಸೇವನೆ: ಇಬ್ಬರು ಪೊಲೀಸ್ ವಶಕ್ಕೆ

Manipal ಗಾಂಜಾ ಸೇವನೆ: ಇಬ್ಬರು ಪೊಲೀಸ್ ವಶಕ್ಕೆ

Missing Case ಶಿರ್ವ: ನಾಲ್ವರು ಮದ್ರಸಾ ವಿದ್ಯಾರ್ಥಿಗಳು ನಾಪತ್ತೆ

Missing Case ಶಿರ್ವ: ನಾಲ್ವರು ಮದ್ರಸಾ ವಿದ್ಯಾರ್ಥಿಗಳು ನಾಪತ್ತೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು

ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

1-qeqwqew

Gundlupete: ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತ ದೇಹ ಪತ್ತೆ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.