comparison ; ‘ಕ್ರಿಕೆಟಿಗೆ ಒಬ್ಬರೇ ಧೋನಿ’: ನಾನು ಕೇವಲ ಜುರೆಲ್
Team Udayavani, Mar 16, 2024, 12:21 AM IST
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಕರೆ ಪಡೆದು ಟೆಸ್ಟ್ ಕ್ಯಾಪ್ ಧರಿಸಿ ಮಿಂಚಿದ ಕೀಪರ್ ಧ್ರುವ ಜುರೆಲ್ ಅವರನ್ನು ಕೆಲವರು ಧೋನಿಗೆ ಹೋಲಿಸಿದ್ದಾರೆ. ಬೇರೆ ಯಾರೂ ಅಲ್ಲ, ದಾಖಲೆಗಳ ವೀರ ಸುನೀಲ್ ಗಾವಸ್ಕರ್ ಅವರೇ ಹೀಗೆ ಹೊಗಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಧ್ರುವ ಜುರೆಲ್, “ನನ್ನನ್ನು ಧೋನಿ ಸರ್ಗೆ ಹೋಲಿಸಿದ್ದೀರಿ, ಥ್ಯಾಂಕ್ಯೂ ಗಾವಸ್ಕರ್ ಸರ್. ಆದರೆ ಕ್ರಿಕೆಟಿಗೆ ಎಂದೆಂದಿಗೂ ಒಬ್ಬರೇ ಧೋನಿ. ಅವರೋರ್ವ ಲೆಜೆಂಡ್. ಅವರು ಲೆಜೆಂಡ್ ಆಗಿಯೇ ಉಳಿಯಲಿದ್ದಾರೆ. ನಾನು ಧ್ರುವ ಜುರೆಲ್ ಆಗಿಯೇ ಇರಬಯಸುತ್ತೇನೆ’ ಎಂದಿದ್ದಾರೆ.