ಮಾನಸಿಕ ಅಸ್ವಸ್ಥೆ ಮೇಲೆ ತುಮಕೂರು ಎಎಸ್ಐಯಿಂದಲೇ ರೇಪ್, ಅರೆಸ್ಟ್
Team Udayavani, Jan 16, 2017, 12:23 PM IST
ಬೆಂಗಳೂರು : ತುಮಕೂರು ಜಿಲ್ಲೆಯಲ್ಲಿ ದಿವ್ಯಾಂಗ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 50 ವರ್ಷ ಪ್ರಾಯದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಓರ್ವರನ್ನು ಇಂದು ಸೋಮವಾರ ಬಂಧಿಸಲಾಗಿದೆ.
ಚಿತ್ತ ವೈಕಲ್ಯ ಹೊಂದಿದ್ದ ಮಹಿಳೆಯು ನಿನ್ನೆ ಭಾನುವಾರ ತನ್ನ ಮನೆಯಿಂದ ಹೊರಗೆ ಹೋಗಿದ್ದು ಹಾದಿ ತಪ್ಪಿದ ಕಾರಣ ಮನೆಗೆ ವಾಪಸ್ ಬರಲು ಆಕೆಗೆ ಸಾಧ್ಯವಾಗಿರಲಿಲ್ಲ. ಆಕೆಯನ್ನು ಮನೆಗೆ ತಲುಪಿಸುವುದಾಗಿ ಹೇಳಿ ತಮ್ಮ ವಾಹನ ಹತ್ತಿಸಿಕೊಂಡಿದ್ದ ಎಎಸ್ಐ ರಮೇಶ್ ಅವರು ತಮ್ಮ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಆರೋಪಿಸಲಾಗಿದೆ.
ರೇಪ್ ಸಂತ್ರಸ್ತೆಯು ಆರೋಪಿ ರಮೇಶ್ ಅವರನ್ನು ಗುರುತಿಸಿರುವ ಹಿನ್ನೆಲೆಯಲ್ಲಿ ಆತನನ್ನು ಅನಂತರ ತುಮಕೂರಿನಲ್ಲಿ ಬಂಧಿಸಲಾಯಿತು. ಆತನನ್ನು ಈಗ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಎಎಸ್ಐ ರಮೇಶ್ ಅವರ ಕಾರಿನ ಚಾಲಕನನ್ನು ಕೂಡ ಬಂಧಿಸಲಾಗಿದೆ ಎಂದು ಕರ್ನಾಟಕ ಸೆಂಟ್ರಲ್ ರೇಂಜ್ ಐಜಿಪಿ ಸೀಮಂತ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್