ಮೋಡ ನೋಡಿ ಮೋಸ ಹೋದ್ರು ಸ್ವೀಡನ್ ಜನ
Team Udayavani, Jan 30, 2017, 8:44 AM IST
ಭೂಮಿಯಲ್ಲಿ ವಾಸಿಸುವ ಜನರಿಗೆ ಅನ್ಯಗ್ರಹಗಳು, ಅಲ್ಲಿನ ನಿವಾಸಿಗಳ ಬಗ್ಗೆ ತೀರದ ಕುತೂಹಲ. ಆದರೆ ಆ ಬಗ್ಗೆ ಇನ್ನೂಖಚಿತವಾದ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೂ ಅಂತಹದ್ದೇನಾದರೂ ಕಂಡರೆ ಜನರು ಹಿಂದುಮುಂದು ನೋಡದೇ ಸುದ್ದಿ ಮಾಡಿ ಬೇಸ್ತು ಬೀಳುತ್ತಾರೆ. ಅಂತಹದ್ದೇ ಒಂದು ವಿಸ್ಮಯ ಸ್ವೀಡನ್ನಿನ ರೆಸಾರ್ಟ್ವೊಂದರಲ್ಲಿ ನಡೆದಿದೆ. ಒಂದು ಸಂಜೆ ಇದ್ದಕ್ಕಿದ್ದಂತೆ ರೆಸಾರ್ಟ್ನಿಂದ ಸ್ವಲ್ಪ ದೂರದಲ್ಲಿ ವೃತ್ತಾಕಾರದ ವಸ್ತು ತೇಲುತ್ತಿರುವುದು ಪತ್ತೆಯಾಗಿದೆ. ಅದ್ಭುತವಾಗಿದ್ದ ಅದನ್ನು ಅನ್ಯಗ್ರಹದಿಂದ ಬಂದ
ನೌಕೆಯೆಂದೇ ರೆಸಾರ್ಟ್ ಮಂದಿ ಭಾವಿಸಿದ್ದಾರೆ. ಒಬ್ಟಾಕೆ ಅದರ ಚಿತ್ರ ತೆಗೆದು ಸಾಮಾಜಿಕ ತಾಣದಲ್ಲಿ ಲಗತ್ತಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಭಾರೀ ಸುದ್ದಿ. ಆದರೆ ಸ್ಥಳೀಯರು ಮಾತ್ರ ಅದರತ್ತ ಆಸಕ್ತಿಯನ್ನೇ ತೋರಿಲ್ಲ. ಏಕೆ ಗೊತ್ತಾ? ಎತ್ತರದ ಪರ್ವತದ ಮೇಲೆ ಈ ರೀತಿ ಮೋಡಗಳು ಆಗಾಗ ರೂಪುಗೊಳ್ಳುತ್ತವಂತೆ, ಅದೇನೂ ಹೊಸದಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ