ಘಲ್ಲು ಘಲ್ಲೆನುತಾವ್‌ ಒಡವೆ, ಗೆಜ್ಜೆ ಮಾತಾಡುತಾವೋ, ಮೈಯೆಲ್ಲಾ!

Team Udayavani, Oct 14, 2020, 6:00 PM IST

pjimage (8).jpg

“ಗೆಜ್ಜೆ ಗೆಜ್ಜೆ ಮಾತಾಡು ..’ ಅಂತ ಗೆಜ್ಜೆ ಹಾಕ್ಕೊಂಡು ಲಜ್ಜೆಯಿಂದ ನಿಂತ ಪೋರಿಯನ್ನು ಮಾತನಾಡಿಸಿದೋರು ನಮ್ಮ ಜನ. ಈಗ ಗೆಜ್ಜೆ ದೇಸಿ ಟ್ರೆಂಡ್‌ ಆಗಿ ಹುಡುಗೀರ ಫೇವರೆಟ್‌ ಆಕ್ಸೆಸರಿ ಲೀಸ್ಟ್‌ನಲ್ಲಿ ಸೇರ್ಕೊಂಡಿದೆ. ಕಾಲ್ಗೆಜ್ಜೆ ವಿಷ್ಯ ಹೇಳ್ತಿಲ್ಲ, ಅವಳ ಮೂಗುತಿ ಮೇಲೆ, ಕಿವಿಯೋಲೆಯಾಗಿ, ಕೈ ಬೆರಳ ಉಂಗುರವಾಗಿ ಕಿಣಿ ಕಿಣಿ ನಾದ ಹೊಮ್ಮಿಸೋ ಮೂಗುತಿ ಕತೆ ಇದು.
*
ಗೆಜ್ಜೆ ಅಂದರೆ ಅವಳು, ಗೆಜ್ಜೆಯನ್ನು ಮಾತನಾಡಿಸುವ ನೆವದಲ್ಲಿ ಅವಳ ಕುಶಲ ವಿಚಾರಿಸುತ್ತಾನೆ ಹುಡುಗ. ಅವಳ ದನಿ ಕೆಲವೊಮ್ಮೆ ಅವನಿಗೆ ಗೆಜ್ಜೆಯಂತೆ ಕೇಳಿಸೋದಿದೆ, ನಗುವಂತೂ ಥೇಟ್‌ ಗೆಜ್ಜೆಯ ಝಲ್‌ ಝಲ್‌ ನಾದವೇ.

ಬಹಳ ಹಿಂದಿನಿಂದಲೇ ಗೆಜ್ಜೆಗೊಂದು ರೊಮ್ಯಾಂಟಿಕ್‌ ಕಲ್ಪನೆ ಇದೆ. ಗೆಜ್ಜೆ ಅಂದರೆ ಸಾಕು, ಮನಃಪಟಲದಲ್ಲಿ ಗೆಜ್ಜೆ ತೊಟ್ಟ ಲಂಗದಾವಣಿಯ ಹಳ್ಳಿ ಹುಡುಗಿ ಇಣುಕುತ್ತಾಳೆ. ಮಾಡರ್ನ್ ಹುಡುಗಿಯರು ಗೆಜ್ಜೆ ಹಾಕ್ಕೊಳ್ಳೋದೆ ಇಲ್ವಲ್ಲಾ? ಅಂತ ಗೊಣಗೋ ಹಾಗಿಲ್ಲ. ಈ ಜನರೇಶನ್‌ ಹೆಣ್ಮಕ್ಕಳು ಕಾಲಿಗೆ ಗೆಜ್ಜೆ ತೊಡುತ್ತಾರೋ ಇಲ್ಲವೋ ಬೇರೆ ಮಾತು, ಆದರೆ ಗೆಜ್ಜೆ ಪ್ರೀತಿ ಹೆಣ್ಮನಸ್ಸಿಂದ ದೂರ ಸರಿದಿಲ್ಲ ಅನ್ನೋದು ಇತ್ತಿತ್ತೀಚೆಗೆ ಸ್ಪಷ್ಟವಾಗ್ತಿದೆ. ಈ ಕಾಲದ ಹುಡುಗೀರು ಹಳತರಲ್ಲೇನೋ ಹೊಸತು ಹುಡುಕುವ ಜಾಯಮಾನದವರು. ಹಳೆಯ ಗೆಜ್ಜೆಯನ್ನು ಹಳಬರ ಹಾಗೆ ಕಾಲಿಗೆ ಕಟ್ಟಿಕೊಂಡು ಓಡಾಡುವುದರಲ್ಲಿ ಅವರಿಗೆ ಅಂಥ ಖುಷಿ ಏನಾಗಲ್ಲ, ಹಾಗಂತ ಗೆಜ್ಜೆಯ ಕಿಣಿ ಕಿಣಿ ನಾದದಿಂದ ಹಿಂದೋಡಲು ಮನಸ್ಸು ಕೇಳಲ್ಲ. ಅದಕ್ಕೆ ಗೆಜ್ಜೆಯಲ್ಲಿ ಹೊಸ ಹೊಸ ಸ್ಟೈಲ್‌ಗ‌ಳ ಬಗ್ಗೆ ಅವರು ಯೋಚಿಸ್ತಾರೆ. ಇಂಥ ಕ್ರಿಯೇಟಿವ್‌ ಥಿಂಕಿಂಗ್‌ನಲ್ಲಿ ಹೊಳೆದದ್ದೇ, ಗೆಜ್ಜೆಯ ಮೂಗುತಿ, ಗೆಜ್ಜೆಯ ಯಿಯರ್‌ ರಿಂಗ್‌, ಗೆಜ್ಜೆಯ ಕೈ ಬಳೆ, ಗೆಜ್ಜೆಯ ಸರ ..ಹೀಗೆ.

ಇಂಥ ಸೊಗಸುಗಾರ್ತಿ ಪುಟ್ಟಮ್ಮಂದಿರಿಗೆ ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳೋದು ಕಷ್ಟ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೇ ನೋಡೋ ಸ್ವಭಾವ. ಇದಕ್ಕೊಂದು ಕ್ರಿಯೇಟಿವ್‌ ಛಾಯೆಯೂ ಇರೋ ಕಾರಣ ಗೆಜ್ಜೆಯ ವೈವಿಧ್ಯಮಯ ರೂಪಗಳ ಆವಿಷ್ಕಾರವಾಗಿದೆ.

ಮೊನ್ನೆ ಮೊನ್ನೆ ಎಂ.ಜಿ ರೋಡ್‌ನ‌ಲ್ಲಿ ಕಾಲೇಜ್‌ ಹುಡುಗಿಯೊಬ್ಬಳು ತನ್ನ ವಿಭಿನ್ನ ಡ್ರೆಸಿಂಗ್‌ ಸ್ಟೈಲ್‌ನಿಂದಲೇ ಇತರರ ಗಮನ ಸೆಳೆಯುತ್ತಿದ್ದಳು. ಅವಳ ಉಡುಗೆಯಲ್ಲೆಲ್ಲ ದೇಸಿತನ ಎದ್ದುಕಾಣುತ್ತಿತ್ತು. ಬೆಳ್ಳನೆಯ ಮಂಜಿನಂತ ಟಾಪು, ಅದಕ್ಕೊಂದು ದೊಗಲೆ ಪ್ಯಾಂಟ್‌. ಗಾಳಿಗೆ ಮನಸೋ ಇಚ್ಛೆ ಹಾರಾಡ್ತಿದ್ದ ಕೂದಲು, ಇದೆಲ್ಲಕ್ಕಿಂತ ಗಮನಸೆಳೆದದ್ದು ಸಂಸ್ಕೃತದ ಶಬ್ಧವಿದ್ದ ಬೆಳ್ಳಿಯ ಬ್ಯಾಡ್ಜ್, ಅದರ ತುದಿಯಲ್ಲೆರಡು ಗೆಜ್ಜೆ, ಹೌದೋ ಅಲ್ಲವೋ ಎಂಬಹಾಗೆ ಶಬ್ಧ ಮಾಡುತ್ತಿದ್ದವು. ಆಕೆಯ ಕಾಲಿನ ಕಡೆ ನೋಡಿದರೆ ಅವು ಗೆಜ್ಜೆಗಳಿಲ್ಲದೆ ಬೋಳಾಗಿದ್ದವು.

“ನತ್ತು’ ಸಾಂಪ್ರದಾಯಿಕವಾಗಿಯೂ ಚೆಂದ, ಮಾಡರ್ನ್ ಡಿಸೈನ್‌ ಇದ್ರೂ ಅಂದ, ನತ್ತಿನಲ್ಲಿ ಅವಳಿಗಷ್ಟೇ ಕೇಳುವಂತೆ ಗೆಜ್ಜೆ ಇದ್ರೆ ಕ್ಯೂಟ್‌ನೆಸ್‌ ಇನ್ನೂ ಒಂಚೂರು ಹೆಚ್ಚಾಗುತ್ತದೆ. ಇಲ್ಲೊಬ್ಬ ಹೆಣ್ಮಗಳು ಸಂಪಿಗೆ ನಾಸಿಕಕ್ಕೆ ಮೂಗುಬೊಟ್ಟು ಸಿಕ್ಕಿಸಿಕೊಂಡು ಅದಕ್ಕೆರಡು ಗೆಜ್ಜೆಗಳ ಕಿಂಕಿಣಿಯನ್ನೂ ಸೇರಿಸಿದ್ದಾಳೆ.

ಕಿವಿಯೋಲೆಗಳಲ್ಲಿ ಗೆಜ್ಜೆ ಬರೋದು ಅಪರೂಪ ಏನಲ್ಲ. ಸಿಲ್ವರ್‌ ಯಿಯರ್‌ರಿಂಗ್‌ ತಗೊಂಡರೆ ಅದರಲ್ಲಿ  ತರಹೇವಾರಿ ವಿನ್ಯಾಸದ ಗೆಜ್ಜೆಗಳಿರುತ್ತವೆ. ಆದರೆ ಕಿವಿಯ ಮೇಲೆ ಯಿಯರ್‌ಕಫ್ನಲ್ಲಿ ಈಕೆ ಗೆಜ್ಜೆ ತೊಟ್ಟಿದ್ದಾಳೆ. ಇವು ಕಾಲ್ಗೆಜ್ಜೆಗಳಂತೆ ಘಲ್‌ ಘಲ್‌ ಅನ್ನಲಾರವು, ಆದರೆ ಪಕ್ಕದಲ್ಲೇ ಇರೋ ಕಿವಿಗೆ ಅವು ಒಂದಕ್ಕೊಂದು ತಾಗಿದಾಗ ಹೊಮ್ಮುವ ನಾದದ ಅನುಭೂತಿಯಾಗಬಹುದು.

ಇದಲ್ಲದೇ ಕೈ ಬೆರಳಿಗೆ ಉಂಗುರದ ಜೊತೆಗೆ ಗೆಜ್ಜೆ ಪೋಣಿಸಿದ್ದರೆ ಅದೊಂಥರ ಚೆಂದ, ಬ್ರೇಸ್‌ಲೈಟ್‌ಗಳಲ್ಲೂ ಗೆಜ್ಜೆಗಳನ್ನು ಜೋಡಿಸಬಹುದು. ಬ್ರೇಸ್‌ಲೈಟ್‌ಗಳಲ್ಲಿ ಹಳೆಯ ಐದುಪೈಸೆ ನಾಣ್ಯ ಬಳಸಿ ಮಾಡಿದ, ಅಲ್ಲಲ್ಲಿ ಗೆಜ್ಜೆ ಕಟ್ಟಿದ ವಿನ್ಯಾಸಕ್ಕೆ ಎಲ್ಲಿಲ್ಲದ ಜನಪ್ರಿಯತೆ ಇದೆ.

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.