1600 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದಲ್ಲಿ 8 ಕ್ರಿಕೆಟ್ ಮೈದಾನ
Team Udayavani, Feb 3, 2017, 3:45 AM IST
ನ್ಯೂಯಾರ್ಕ್: ಕ್ರಿಕೆಟ್ಗೆ ವಿಶ್ವದೆಲ್ಲೆಡೆ ವಾಸವಾಗಿರುವ ಅನಿವಾಸಿ ಭಾರತೀಯರು ಗರಿಷ್ಠ ಆದಾಯ ಬರಲು ಕಾರಣವಾಗಿದ್ದಾರೆ.
ಅದರಲ್ಲೂ ಅಮೆರಿಕದಲ್ಲಿ ವಾಸವಾಗಿರುವ ಭಾರತೀಯರು ಅಲ್ಲಿ ನಡೆದ ಯಾವುದೇ ಪಂದ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ
ಕೂಟ ಯಶಸ್ವಿಯಾಗಲು ಕಾರಣವಾಗಿದ್ದಾರೆ.
ಕಳೆದ ವರ್ಷ ನಡೆದ ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿಯೇ ಇದಕ್ಕೆ ಸಾಕ್ಷಿ. ಅಮೆರಿಕದಲ್ಲಿ ಕ್ರಿಕೆಟ್ಗಿರುವ ಜನಪ್ರಿಯತೆ ಅರಿತಿರುವ ಭಾರತೀಯ ಮೂಲದ ಉದ್ಯಮಿ ಜಿಗ್ನೇಶ್ ಪಾಂಡ್ಯ ಅಲ್ಲಿ 8 ಕ್ರಿಕೆಟ್ ಮೈದಾನ ನಿರ್ಮಿಸಲು ಮುಂದಾಗಿದ್ದಾರೆ. ಅದೂ 1600 ಕೋಟಿ ರೂ. ವೆಚ್ಚದಲ್ಲಿ!
ಅಮೆರಿಕದಲ್ಲಿ ಕ್ರಿಕೆಟ್ ನೋಡಲು ಭಾರೀ ಪ್ರಮಾಣದಲ್ಲಿ ಜನ ಸೇರುತ್ತಾರೆ. ಆದ್ದರಿಂದ ಇಲ್ಲಿ ಕ್ರಿಕೆಟ್ಗೆ ಮಾರುಕಟ್ಟೆಯಿದೆ ಎನ್ನುವುದು ಖಾತ್ರಿ. ಇಲ್ಲಿ ಕ್ರಿಕೆಟ್ ಅಭಿವೃದ್ಧಿಪಡಿಸಬೇಕೆಂಬ ಉದ್ದೇಶ 8 ಮೈದಾನ ನಿರ್ಮಿಸಲು ಮುಂದಾಗಿದ್ದೇನೆ. ಇಲ್ಲಿ ಕ್ರಿಕೆಟ್ ಲೀಗ್ಗಳನ್ನು ನಡೆಸಲಾಗುವುದು ಎಂದು ಜಿಗ್ನೇಶ್ ಹೇಳಿದ್ದಾರೆ.
ಪ್ರತಿ ಮೈದಾನದಲ್ಲಿ 26000 ಮಂದಿ ಕೂರಲು ಅವಕಾಶವಿದೆ. ಈ ಮೈದಾನ ನಿರ್ಮಾಣದಿಂದ 17800 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಜಿಗ್ನೇಶ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ