ಕಲ್ಲಂಗಡಿ ಮೇಳ ಪ್ರಾರಂಭ


Team Udayavani, Feb 18, 2017, 12:26 PM IST

water-melon.jpg

ಬೆಂಗಳೂರು: ಹಾಪ್‌ಕಾಮ್ಸ್‌ನಿಂದ ಪ್ರಾರಂಭಿಸಲಾಗಿರುವ “ಹಾರ್ಟಿಬಜಾರ್‌’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ  ತಿಳಿಸಿದ್ದಾರೆ. ಕಸ್ತೂರಿ ನಗರದಲ್ಲಿ ಹಾಪ್‌ಕಾಮ್ಸ್‌ ಆರಂಭಿಸಿರುವ ಹಾರ್ಟಿ ಬಜಾರ್‌ ಮಳಿಗೆಯಲ್ಲಿ ಶುಕ್ರವಾರ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಎರಡು ತಿಂಗಳ ಹಿಂದೆ ತೆರೆಯಲಾಗಿರುವ ಹಾರ್ಟಿಬಜಾರ್‌ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಶೀಘ್ರದಲ್ಲೇ ಸದಾಶಿವನಗರ ಹಾಗೂ ಮೈಸೂರು ರಸ್ತೆಯ ಜಾನಪದ ಲೋಕ ಬಳಿ ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ನಗರದಲ್ಲಿ 30 ರಿಂದ 40 ಕಡೆ ಪ್ರಾರಂಭಿಸುವ ಯೋಜನೆಯಿದೆ ಎಂದು ಹೇಳಿದರು. ಹಾರ್ಟಿಬಜಾರ್‌ನಲ್ಲಿ ಹಣ್ಣು, ತರಕಾರಿ, ಪಾನೀಯ, ಐಸ್‌ಕ್ರೀಂ , ಹಾಲಿನ ಉತ್ಪನ್ನ, ದ್ರಾಕ್ಷಾ ರಸ, ಸಿರಿಧಾನ್ಯಗಳು, ಕ್ಯಾಂಪ್ಕೋ ಉತ್ಪನ್ನಗಳು ಸಿಗಲಿದ್ದು,  ದಿನಕ್ಕೆ 40ರಿಂದ 50 ಸಾವಿರ ರೂ. ವರೆಗೆ ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದರು.

ಹಾರ್ಟಿ ಬಜಾರ್‌ನಿಂದ ಬರುವ ಆದಾಯದಲ್ಲಿ ಶೇ.3ರಿಂದ 5ರಷ್ಟು ಕಟ್ಟಡ ಮಾಲೀಕರಿಗೆ ನೀಡಲಾಗುವುದು. ಕಸ್ತೂರಿ ನಗರದ ಮಾಲೀಕರಿಗೆ ತಿಂಗಳಿಗೆ 45ರಿಂದ 50 ಸಾವಿರ ರೂ. ಬಾಡಿಗೆ ಸಿಗುತ್ತಿದೆ. ಹಾಪ್‌ಕಾಮ್ಸ್‌ ಸಹಭಾಗಿತ್ವದೊಂದಿಗೆ ಹಾರ್ಟಿ ಬಜಾರ್‌ ಮಳಿಗೆಯನ್ನು ಪ್ರಾರಂಭಿಸಲು ಬಯಸುವವರು ಹಾಪ್‌ಕಾಮ್ಸ್‌ ಕಚೇರಿಯನ್ನು ಸಂಪರ್ಕಿಸಬಹುದು. 800 ರಿಂದ 1 ಸಾವಿರ ಚದರಡಿಯಷ್ಟು ವಿಸ್ತೀರ್ಣದ ಜಾಗ ಇದಕ್ಕೆ ಸಾಕು ಎಂದು ಹೇಳಿದರು.

ಪಾಲಿಕೆ ಸದಸ್ಯೆ ಮೀನಾಕ್ಷ್ಮಿ ಲಕ್ಷ್ಮೀಪತಿ, ಹಾಪ್‌ಕಾಮ್ಸ್‌ ತನ್ನ ಮಾರುಕಟ್ಟೆ ಜಾಲವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಹಾರ್ಟಿ ಬಜಾರ್‌ ಪರಿಕಲ್ಪನೆ ಅತ್ಯಂತ ಯಶಸ್ವಿ ಹೆಜ್ಜೆ ಎಂದು ಶ್ಲಾ ಸಿದರು. ಹಾಪ್‌ಕಾಮ್ಸ್‌ನಲ್ಲಿ ರೈತರಿಂದ ನೇರವಾಗಿ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ, ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಅಂಗ ಸಂಸ್ಥೆಯೊಂದು ರೈತ ಮತ್ತು ಗ್ರಾಹಕರ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಪ್ರಶಂಸನೀಯ.

ಯಾವುದೇ ರಾಸಾಯನಿಕ ಬಳಸದೆ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಒದಗಿಸುತ್ತಿರುವುದರಿಂದ ಆರೋಗ್ಯದ ದೃಷ್ಠಿಯಿಂದಲೂ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಹಾರ್ಟಿ ಬಜಾರ್‌ ಮಾರುಕಟ್ಟೆ ವ್ಯವಸ್ಥೆಯನ್ನು ನಗರದೆಲ್ಲೆಡೆ ವಿಸ್ತರಿಸುವ ಕಾರ್ಯವಾಗಬೇಕು. ಪ್ರತಿ 5 ಕಿ.ಮೀ.ಗೆ ಒಂದರಂತೆ ಇಂತಹ ಮಳಿಗೆಗಳು ಇರಬೇಕು.

ಸಾಧ್ಯವಾದರೆ ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಹಣ್ಣು, ತರಕಾರಿ ತಲುಪಿಸುವ ಸೇವೆ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹಾಪ್‌ಕಾಮ್ಸ್‌ ಅಧಿಕಾರಿಗಳು ಚಿಂತನೆ ನಡೆಸಬೇಕು. ಇದರಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು. ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸನ್‌, ಉಪನಿರ್ದೇಶಕ ಪ್ರಶಾಂತ್‌ ಉಪಸ್ಥಿತರಿದ್ದರು.

ಮಾರ್ಚ್‌ ಅಂತ್ಯದವರೆಗೆ ಮೇಳ
ಹಾರ್ಟಿ ಬಜಾರ್‌ನಲ್ಲಿ ಪ್ರಾರಂಭವಾಗಿರುವ ದ್ರಾಕ್ಷಿ, ಕಲ್ಲಂಗಡಿ ಮೇಳ ಮಾರ್ಚ್‌ ಅಂತ್ಯದವರೆಗೆ ನಡೆಯಲಿದೆ. ಶೇ.10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳು ಸಿಗಲಿವೆ. 

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

7-ಬನಗ

Bengaluru: ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ

6-bng-crime

Drugs ಮಾರಾಟ: ಮೂವರು ವಿದೇಶಿ ಪ್ರಜೆಗಳು ಸೇರಿ 8 ಮಂದಿ ಬಂಧನ ‌

5-bng-crime-1

Bengaluru Crime: ಮನೆ ಮಾಲಕಿಯ ಕೊಂದು ಚಿನ್ನ ದೋಚಿದಳು!

E-bus: ಚಾಲಕರ ಧರಣಿ: ರಸ್ತೆಗಿಳಿಯದ 113 ಇ-ಬಸ್‌

E-bus: ಚಾಲಕರ ಧರಣಿ: ರಸ್ತೆಗಿಳಿಯದ 113 ಇ-ಬಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.