ರಾಜ್ಯದಲ್ಲಿ ಬರ, ಮಹಾರಾಷ್ಟ್ರಕ್ಕೆ “ಭರ’ಪೂರ ನೀರು

Team Udayavani, Mar 3, 2017, 11:03 AM IST

dam.jpg

ವಿಜಯಪುರ: ಯಾದಗಿರಿ ಜಿಲ್ಲೆಯ ನಾರಾಯಣಪುರ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯದಿಂದ ಮಹಾರಾಷ್ಟ್ರದ ಬ್ಯಾರೇಜ್‌ ತುಂಬಿಸಲು ಭೀಮಾ ನದಿಗೆ ಸದ್ದಿಲ್ಲದೇ ನೀರು ಹರಿಸಲಾಗುತ್ತಿದೆ. ರಾಜ್ಯದ ಹಿತ ಬಲಿ ಕೊಟ್ಟು ನೆರೆಯ ರಾಜ್ಯಕ್ಕೆ ನೀರು ಹರಿಸಲು ಕೆಬಿಜೆಎನ್‌ ಎಲ್‌ ವ್ಯವಸ್ಥಾಪಕರು ಜಲಾಶಯಗಳ ಸಿಇಗೆ ಆದೇಶಿಸಿದ್ದಾರೆಂಬುದು ಇದೀಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ಹಾಗೂ ಗಂಭೀರ ಚರ್ಚೆಗೆ ಕಾರಣವಾಗಿದೆ.

ಮಹಾರಾಷ್ಟ್ರದ ಸೋಲಾಪುರ ಕಾಡಾ ಸದಸ್ಯ ಕಾರ್ಯದರ್ಶಿ ಹಾಗೂ ಎಸ್‌ಇ ಅವರು ತಮ್ಮ ರಾಜ್ಯದ ಔಜ್‌, ಚಿತಪುರ, ಖಾನಾಪುರ ಹಾಗೂ ಹಿಳ್ಳಿ ಬ್ಯಾರೇಜುಗಳಿಗೆ ನೀರು ತುಂಬಿಸುವಂತೆ ಫೆ. 6ರಂದು ಕೆಬಿಜೆಎಲ್‌ಎಲ್‌ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ಈ ಕೋರಿಕೆ ಮೇರೆಗೆ ನಾರಾಯಣಪುರ
ಹಾಗೂ ರಾಂಪುರ ಕಾಲುವೆ ವಿಭಾಗದ ಮುಖ್ಯ ಅಭಿಯಂತರರಿಗೆ ಫೆ.16ರಂದು ಪತ್ರ ಬರೆಯಲಾಗಿದೆ. ಕೆಬಿಜೆಎನ್‌ಎಲ್‌ ವ್ಯವಸ್ಥಾಪಕರು ರಾಜ್ಯದ ನಾರಾಯಣಪುರ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಮಾರ್ಗವಾಗಿ ಅಗತ್ಯ ಬಿದ್ದಲ್ಲಿ ಪೊಲೀಸ್‌ ಭದ್ರತೆಯಲ್ಲಿ ನೀರು ಹರಿಸುವಂತೆ ಸೂಚಿಸಿದ್ದಾರೆ. ಭೀಮಾ ನದಿಗೆ ಗಡಿ ಭಾಗದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ತಲಾ 4 ಬ್ಯಾರೇಜು
ನಿರ್ಮಿಸಿವೆ. ಭೀಮಾ ನದಿಗೆ ಹರಿಯುವ ನೀರನ್ನು ಕರ್ನಾಟಕದ 4 ಬ್ಯಾರೇಜುಗಳಲ್ಲಿ ಸಂಗ್ರಹಿಸದೆ, ತೂಬುಗಳನ್ನು ತೆರೆದು ಮಹಾರಾಷ್ಟ್ರದ ಬ್ಯಾರೇಜಿಗೆ ಹರಿಸಲು ಸೂಚಿಸಲಾಗಿದೆ.

ರಾಜ್ಯಕ್ಕೆ ಮಾರಕ: ಭೀಮಾ ನದಿಯ ನೈಸರ್ಗಿಕ ಹರಿವು ಕಾಯ್ದುಕೊಳ್ಳಲು ಉಜನಿ ಜಲಾಶಯದಿಂದ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ ಆದೇಶವಿದೆ. ಉಜನಿ ಜಲಾಶಯದಲ್ಲಿ ಸದ್ಯ ಬಳಕೆಗೆ ಯೋಗ್ಯವಾದ 90 ಟಿಎಂಸಿ ಹಾಗೂ ಡೆಡ್‌ಸ್ಟೋರೇಜ್‌ 60 ಟಿಎಂಸಿ ಅಡಿ ನೀರು ಸಂಗ್ರಹವಿದೆ.

ಉಜನಿ ಜಲಾಶಯದ ಮೇಲ್ಭಾಗದಲ್ಲಿ ಮಹಾರಾಷ್ಟ್ರದ 25 ಬ್ಯಾರೇಜುಗಳಲ್ಲೂ 90 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಅಲ್ಲಿಂದಲೇ ನೀರು ಹರಿಸಿಕೊಳ್ಳಲು ಅವಕಾಶವಿದೆ. ಕರ್ನಾಟಕದಲ್ಲಿ ಕುಡಿವ ನೀರಿಗೆ ಹಾಹಾಕಾರವಿದೆ. ಬಸವಸಾಗರದಲ್ಲಿ 14.4 ಟಿಎಂಸಿ ಅಡಿ ನೀರಿದೆ. ಇಂಥ ದುಸ್ಥಿತಿಯಲ್ಲಿ ರಾಜ್ಯದ 1.5 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರಕ್ಕೆ ಹರಿಸಲು ಸೂಚಿಸಿರುವ ನಿರ್ಧಾರ ರಾಜ್ಯಕ್ಕೆ ಮಾರಕವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಹಿನ್ನಡೆಗೂ ಕಾರಣ: ಭೀಕರ ಬರದ ನಡುವೆಯೂ ಮಹಾರಾಷ್ಟ್ರಕ್ಕೆ ನೀರು ಹರಿಸಲು ಲಿಖೀತ ಆದೇಶ ನೀಡಿರುವುದು ರಾಜ್ಯಕ್ಕೆ ಕೃಷ್ಣಾ ಕೊಳ್ಳದ ನೀರು ಹಂಚಿಕೆ ಕಾನೂನು ಹೋರಾಟದಲ್ಲಿ ಹಿನ್ನಡೆಗೆ ಕಾರಣವಾಗಲಿದೆ. ಮಹಾರಾಷ್ಟ್ರಕ್ಕೆ ನೀರು ಹರಿಸಿರುವ ಕಾರಣ ಕರ್ನಾಟಕದಲ್ಲಿ ನೀರಿನ ಬರವಿಲ್ಲ. ಹೀಗಾಗಿ ಉಜನಿ ಜಲಾಶಯದಿಂದ ಭೀಮಾ ನದಿ ನೈಸರ್ಗಿಕ ಹರಿವು ಸಂರಕ್ಷಣೆಗೆ ಕರ್ನಾಟಕ ತನ್ನದೇ ಜಲಾಶಯಗಳ ನೀರನ್ನು ಬಳಸಿಕೊಳ್ಳಲಿ ಎಂಬ ವಾದ ಮುಂದಿಡಲು ಈ ಲಿಖೀತ ಆದೇಶ ದಾಖಲೆ ಆಗಲಿದೆಯೆಂಬ ಆತಂಕ ವ್ಯಕ್ತವಾಗಿದೆ ಎನ್ನುತ್ತಾರೆ ಭೀಮಾ ನದಿ ಹಿತ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ.

ಬ್ಯಾರೇಜುಗಳ ವಿವರ: ಉಭಯ ರಾಜ್ಯಗಳ ಗಡಿಯಲ್ಲಿ ನಿರ್ಮಾಣಗೊಂಡಿರುವ ಸಮಾನಾಂತರ 8 ಬ್ಯಾರೇಜುಗಳಲ್ಲಿ ಕ್ರಮ ಸಂಖ್ಯೆಯಲ್ಲಿ 1ನೇ ಗೋವಿಂದಪುರ, 2ನೇ ಉಮರಾಣಿ, 5ನೇ ಚಣೇಗಾಂವ ಹಾಗೂ 6ನೇ ಕ್ರಮ ಸಂಖ್ಯೆಯ ಹಿಂಗಣಿ ಬ್ಯಾರೇಜು ಕರ್ನಾಟಕಕ್ಕೆ ಸೇರಿವೆ. 3ನೇ ಔಜ್‌, 4ನೇ ಚಿತಪುರ, 7ನೇ ಖಾನಾಪುರ ಹಾಗೂ 8ನೇ ಕ್ರಮ ಸಂಖ್ಯೆಯ ಹಿಳ್ಳಿ ಬ್ಯಾರೇಜು ಮಹಾರಾಷ್ಟ್ರಕ್ಕೆ ಸೇರಿವೆ.

ಸಾಲದ ನೀರು
ಕಳೆದ ವರ್ಷ ಕುಡಿವ ನೀರಿಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳು ತಮ್ಮ ಜಲಾಶಯಗಳಿಂದ ನೆರೆಯ ರಾಜ್ಯಗಳಿಗೆ ನದಿಗಳ ಮೂಲಕ ನೀರು ಹರಿಸುವ ಕುರಿತು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ರಾಜ್ಯದಿಂದ ಕಳೆದ ಬಾರಿ ಪೂರ್ಣ ನೀರು ಹರಿಸಲಾಗದ ಕಾರಣ ಈಗ ಸಾಲದ ನೀರು ಹರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಾ| ಎಂ. ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ರಾಜ್ಯದಿಂದ 1.2 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರಕ್ಕೆ ಹರಿಸುವುದು ಬಾಕಿಯಿತ್ತು. ಪ್ರಸಕ್ತ ವರ್ಷ ಹರಿಸುವಂತೆ ಮಹಾರಾಷ್ಟ್ರ ಸರ್ಕಾರ ಕೋರಿದೆ. ಈ ಹಿನ್ನೆಲೆಯಲ್ಲಿ ಈಗ ಭೀಮಾ ನದಿ ಮೂಲಕ ಆ ರಾಜ್ಯದ ಬ್ಯಾರೇಜುಗಳಿಗೆ ನೀರು ಹರಿಸುವುದು ತಪ್ಪಲ್ಲ. ರಾಜ್ಯಕ್ಕೂ ಮಾರಕವಲ್ಲ.
– ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ,
ನೀರಾವರಿ ತಜ್ಞರು

– ಜಿ.ಎಸ್‌.ಕಮತರ

ಟಾಪ್ ನ್ಯೂಸ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Untitled-1

ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ

Untitled-1

Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Kota ಮೇಲ್ಮನೆ ಸ್ಥಾನ ನಳಿನ್‌ ಕುಮಾರ್‌ಗೆ ? ವಿಧಾನಸಭೆ ಮೂಲಕ ಪರಿಷತ್‌ ಪ್ರವೇಶಿಸಲು ಯತ್ನ

Kota ಮೇಲ್ಮನೆ ಸ್ಥಾನ ನಳಿನ್‌ ಕುಮಾರ್‌ಗೆ ? ವಿಧಾನಸಭೆ ಮೂಲಕ ಪರಿಷತ್‌ ಪ್ರವೇಶಿಸಲು ಯತ್ನ

Karnataka ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದೇ ಸರ್ಕಾರದ ಸಾಧನೆ: ಸುರೇಶ್‌ ಕುಮಾರ್‌

Karnataka ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದೇ ಸರ್ಕಾರದ ಸಾಧನೆ: ಸುರೇಶ್‌ ಕುಮಾರ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.