ಯುಪಿ ಬಿಜೆಪಿ ಶಾಸಕನ ಬೆಂಬಲಿಗರಿಂದ ಪೊಲೀಸರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ
Team Udayavani, Mar 9, 2017, 11:37 AM IST
ಶಹಜಾನ್ಪುರ : ಅಘಾತಕಾರಿ ವಿದ್ಯಮಾನವೊಂದರಲ್ಲಿ ಬಿಜೆಪಿ ಶಾಸಕನೊಬ್ಬನ ಬೆಂಬಲಿಗರ ಗುಂಪೊಂದು ಕರ್ತವ್ಯ ನಿರತ ಪೊಲೀಸರ ಮೇಲೆಯೆ ಗುರುವಾರ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದನ್ನು ಪ್ರಶ್ನಿಸಿದ ಪೊಲೀಸರ ತಂಡದ ಮೇಲೆ ಗನ್ ತೋರಿಸಿ ಹೆದರಿಸಿ , ಬಡಿಗೆಗಳನ್ನು ಬೀಸಲಾಗಿದ್ದು, ಮಹಿಳಾ ಇನ್ಸ್ಪೆಕ್ಟರ್ ಸುಷ್ಮಾ ಯಾದವ್ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಜೆಪಿ ಧ್ವಜಗಳನ್ನು ಹಲ್ಲೆಕೋರರು ಕೈಯಲ್ಲಿ ಹಿಡಿದುಕೊಂಡಿದ್ದರು ಎಂದು ಸುಷ್ಮಾ ಯಾದವ್ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.