ಮಲಪ್ಪುರಂ: ಮುಸ್ಲಿಂ ಲೀಗ್‌ ಜಯಭೇರಿ


Team Udayavani, Apr 18, 2017, 3:12 PM IST

18-KASRGOD-1.jpg

ಮಲಪ್ಪುರಂ: ಮಲಪ್ಪುರಂ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆಯ ಮುಸ್ಲಿಂ ಲೀಗ್‌ ಅಭ್ಯರ್ಥಿ ಪಿ. ಕೆ. ಕುಂಞಾnಲಿಕುಟ್ಟಿ ಭಾರೀ ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ನೇರ ಹಣಾಹಣಿ ಉಂಟಾಗಿತ್ತು. ಎಲ್‌ಡಿಎಫ್ ಅಭ್ಯರ್ಥಿ ಎಂ. ಬಿ. ಫೈಸಲ್‌ ಅವರನ್ನು ಕುಂಞಾnಲಿಕುಟ್ಟಿ 1.7 ಲಕ್ಷ ಮತಗಳಿಂದ ಪರಾಭವಗೊಳಿಸಿದ್ದಾರೆ. 

ಮಲಪ್ಪುರಂ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೊಂಡೊಟ್ಟಿ, ಮಂಜೇರಿ, ಪೆರಿಂತಲಮಣ್ಣ, ಮಂಕಡ , ಮಲಪ್ಪುರಂ, ವೆಂಗರ ಮತ್ತು ವಲ್ಲಿಕುನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಕುಂಞಾಲಿಕುಟ್ಟಿ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎನ್‌. ಶ್ರೀಪ್ರಕಾಶ್‌ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. 

ಮಾಜಿ ಕೇಂದ್ರ ಸಚಿವರೂ ಆಗಿದ್ದ ಮುಸ್ಲಿಂ ಲೀಗ್‌ ನಾಯಕ ಇ. ಅಹ್ಮದ್‌ ಅವರ ನಿಧನದಿಂದಾಗಿ ಮಲಪ್ಪುರಂ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಉಪಚುನಾವಣೆಯಲ್ಲಿ ಶೇ. 71.33 ಮತ ಚಲಾವಣೆಯಾಗಿತ್ತು. ವಿಶೇಷವೆಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಚಲಾವಣೆಯಾದ ಮತಕ್ಕಿಂತ ಉಪ ಚುನಾವಣೆಯಲ್ಲಿ ಚಲಾವಣೆಯಾದ ಮತ ಹೆಚ್ಚಿತ್ತು. (2014ರಲ್ಲಿ )  71.11 ಮತ ಚಲಾವಣೆಯಾಗಿತ್ತು. 

ಕ್ಷೇತ್ರದಲ್ಲಿ ಒಟ್ಟು 13,12,693 ಮತಗಳಿವೆ. ಈ ಪೈಕಿ 9,36,315 ಪುರುಷರು ಮತ್ತು 4,93,433 ಮಹಿಳೆಯರು ಮತ ಚಲಾಯಿಸಿದ್ದಾರೆ. ಆದರೆ 2014ರ ಚುನಾವಣೆಗೆ ಹೋಲಿಸಿದರೆ ಕುಂಞಾnಲಿಕುಟ್ಟಿಯ ಗೆಲುವಿನ ಅಂತರ ತುಸು ಕುಸಿದಿದೆ. 2014ರಲ್ಲಿ ಇ.ಅಹ್ಮದ್‌ 1,94,739 ಮತಗಳ ಅಂತರದಿಂದ ಗೆದ್ದಿದ್ದರು.

ಚೊಚ್ಚಲ ಸಂಸತ್ತು ಪ್ರವೇಶ
ಮಾಜಿ ಸಚಿವರೂ ಆಗಿರುವ ಕುಂಞಾnಲಿಕುಟ್ಟಿ ಸಂಸದರಾಗಿ ಇದೇ ಮೊದಲ ಬಾರಿ ಸಂಸತ್ತು ಪ್ರವೇಶಿಸಲಿದ್ದಾರೆ. ಮಲ್ಲಪ್ಪುರಂ ವ್ಯಾಪ್ತಿಯಲ್ಲಿರುವ ವೆಂಗರ ವಿಧಾನಸಭೆ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಮಲಪ್ಪುರಂ ಹಿಂದಿನಿಂದಲೂ ಮುಸ್ಲಿಂ ಲೀಗ್‌ನ ಭದ್ರಕೋಟೆಯಾಗಿತ್ತು. ಇಲ್ಲಿ ಗೆಲ್ಲುವುದು ಯಾರೆಂಬ ಕುತೂಹಲ ಇರುವುದಿಲ್ಲ. ಮತಗಳ ಅಂತರ ಮಾತ್ರ ಕುತೂಹಲ ಹುಟ್ಟಿಸುತ್ತದೆ. ಇ.ಅಹ್ಮದ್‌ ಅಕಾಲಿಕ ನಿಧನದಿಂದಾಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಬೀಸಿದ್ದರೂ ಕುಂಞಾಲಿಕುಟ್ಟಿ ಗೆಲುವಿನ ಅಂತರ ಕಡಿಮೆಯಾಗಿರುವುದು ಆಶ್ಚರ್ಯವುಂಟು ಮಾಡಿದೆ. 

ಜಾತ್ಯತೀತ ನಿಲುವಿನ ಗೆಲುವು ಮಲಪ್ಪುರಂ: ಕುಂಞಾಲಿ
ಕುಟ್ಟಿ ಮಲಪ್ಪುರಂ ಉಪಚುನಾವಣೆಯಲ್ಲಿ ತನಗೆ ದಕ್ಕಿದ ಅಭೂತಪೂರ್ವ ಗೆಲುವನ್ನು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ನ ಜಾತ್ಯತೀತ ನಿಲುವಿಗೆ ಅರ್ಪಿಸಿದ್ದಾರೆ. ಜನರು ಯುಡಿಎಫ್ನ ಜಾತ್ಯತೀತ ನಿಲುವನ್ನು ಒಪ್ಪಿಕೊಂಡು ಮತ ಹಾಕಿದ್ದಾರೆ. ಎಲ್‌ಡಿಎಫ್ ಪಾಲಿಗೆ ಭಾರೀ ಹಿನ್ನಡೆ. ಆಡಳಿತದಲ್ಲಿರುವ ಹೊರತಾಗಿಯೂ ಅದಕ್ಕೆ ನಿರೀಕ್ಷಿತ ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ  ಎಂದು ಪ್ರತಿಕ್ರಿಯಿಸಿದ್ದಾರೆ. 

ಗೆಲುವಿನ ಅಂತರ ನಾವು ನಿರೀಕ್ಷಿಸಿರುವುದಕ್ಕಿಂತ ತುಸು ಕಡಿಮೆಯಾಗಿದೆ. ಆದರೆ ಜನರು ಮುಸ್ಲಿಂ ಲೀಗ್‌ ಮೇಲಿಟ್ಟ ವಿಶ್ವಾಸಕ್ಕೆ ಆಭಾರಿಯಾಗಿರುತ್ತೇವೆ ಎಂದು ಮುಸ್ಲಿಂ ಲೀಗ್‌ ಪ್ರಧಾನ ಕಾರ್ಯದರ್ಶಿ ಕೆಪಿಎ ಮಜೀದ್‌ ಹೇಳಿದ್ದಾರೆ. 2 ಲಕ್ಷಕ್ಕೂ ಅಧಿಕ ಮತದಿಂದ ಕುಂಞಾnಲಿಕುಟ್ಟಿ ಗೆಲ್ಲುತ್ತಾರೆಂದು ಮಜೀದ್‌ ಭವಿಷ್ಯ ಹೇಳಿದ್ದರು. 

ಸರಕಾರದ ಮೌಲ್ಯಮಾಪನವಲ್ಲ: ಸಿಎಂ
ತಿರುವನಂತಪುರ: ಮಲಪ್ಪುರಂ ಲೋಕಸಭಾ ಕ್ಷೇತ್ರ ಉಪಚುನಾವಣೆಯ ಫ‌ಲಿತಾಂಶ ಸರಕಾರದ ಸಾಧನೆಯ ಮೌಲ್ಯಮಾಪನವಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಭಿಪ್ರಾಯಪಟ್ಟಿದ್ದಾರೆ. ಕ್ಷೇತ್ರದಲ್ಲಿ ಅನುಕಂಪದ ಅಲೆ ಇದ್ದ ಕಾರಣ ಯುಡಿಎಫ್ ಮತಗಳಿಕೆ ಪ್ರಮಾಣ ಹೆಚ್ಚಾಗಿದೆಯೇ ಹೊರತು ಸರಕಾರವನ್ನು ಜನರು ತಿರಸ್ಕರಿಸಿದ್ದಾರೆ ಎನ್ನುವುದು ಸರಿಯಲ್ಲ. ಹಾಗೇ ನೋಡಿದರೆ ಬಿಜೆಪಿಯ ಮತಗಳಿಕೆಯೂ ಕುಸಿದಿದೆ. ಉಪಚುನಾವಣೆಯ ಫ‌ಲಿತಾಂಶವನ್ನು ದಿಕ್ಸೂಚಿ ಎಂದು ಪರಿಗಣಿಸುವುದಿಲ್ಲ ಎಂದಿದ್ದಾರೆ.

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.