ಹಿಂದೂಗಳಿಗೆ 20 ವರ್ಷ ಬಳಿಕ ದೊರೆತ ದೇವಸ್ಥಾನ
Team Udayavani, Apr 25, 2017, 3:45 AM IST
ಪೇಶಾವರ: ಪಾಕಿಸ್ತಾನದ ಖೈಬರ್ಅಬೋಟ್ಟಾಬಾದ್ ಜಿಲ್ಲೆಯಲ್ಲಿ ಶಿವ ದೇವಾಲಯವೊಂದಲ್ಲಿ ಹಿಂದೂಗಳು ಪೂಜೆ ಮಾಡಲು ಪಾಕಿಸ್ತಾನದ ಕೋರ್ಟ್ ಕೊನೆಗೂ ಅನುಮತಿ ನೀಡಿದೆ.
20 ವರ್ಷಗಳಿಂದ ಈ ದೇವಾಲಯದಲ್ಲಿ ಪೂಜೆಗೆ ಅನುಮತಿ ನಿರಾಕರಿಸಲಾಗಿತ್ತು. ಸಂವಿಧಾನದ ಪರಿಚ್ಛೇದ 20ರ ಅಡಿ ಪೇಶಾವರ ಹೈಕೋರ್ಟ್ ಅಲ್ಲಿ ಪೂಜೆ ಮಾಡಲು ಅನುಮತಿ ನೀಡಿದೆ. ಆಸ್ತಿ ಕಲಹದಿಂದಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆ ದೇವಾಲಯದಲ್ಲಿ ನಿಷೇಧಿಸಲಾಗಿತ್ತು. 2013ರಲ್ಲಿ ಹಿಂದೂ ಸರ್ಕಾರೇತರ ಸಂಘಟನೆ ತಾನು ಆಸ್ತಿಯ ಮಾಲೀಕರಿಂದ ದೇವಾಲಯವನ್ನು ಗುತ್ತಿಗೆ ತೆಗೆದುಕೊಂಡಿರುವುದಾಗಿ ಕೋರ್ಟ್ ಮೆಟ್ಟಿಲೇರಿತ್ತು.