ಸಿಎಂ ಸಂದರ್ಶನ, ಸಂವಾದಕ್ಕೆ ಸ್ಟುಡಿಯೋ ಸಜ್ಜು


Team Udayavani, May 12, 2017, 2:08 AM IST

Varuna-11-5.jpg

ಬೆಂಗಳೂರು: ಮುಖ್ಯಮಂತ್ರಿಯವರು ಮಾಧ್ಯಮಗಳೊಂದಿಗೆ ಸಂವಾದ ನಡೆಸಲು ಹಾಗೂ ದೃಶ್ಯ ಮಾಧ್ಯಮಗಳಿಗೆ ಸಂದರ್ಶನ ನೀಡಲು ಅನುಕೂಲವಾಗುವಂತೆ ಸುಸಜ್ಜಿತವಾಗಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಿರ್ಮಾಣವಾಗಿರುವ ‘ವರುಣ’ ಸ್ಟುಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. ‘ಕೃಷ್ಣಾ’ದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡಲು ಅನನುಕೂಲವಾಗುತ್ತಿತ್ತು. ಹಾಗಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡಲು ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಸ್ಟುಡಿಯೋ ನಿರ್ಮಿಸಲಾಗಿದೆ ಎಂದು ಹೇಳಿದರು.

ಸ್ಟುಡಿಯೋಗೆ ‘ವರುಣ’ ಎಂದು ಹೆಸರಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಇದು ನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಹೆಸರಲ್ಲ. ವರುಣ ಎಂದರೆ ಮಳೆ ದೇವರ ಹೆಸರು. ನಮ್ಮ ಅಧಿಕೃತ ನಿವಾಸದ ಹೆಸರು ಕಾವೇರಿ ಎಂದಿದ್ದು, ಅದೇನು ಮಡಿಕೇರಿಯೇ?’ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಆಪ್ತ ಕಾರ್ಯದರ್ಶಿ ಹೀರಾ ನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಇದ್ದರು.

ಸ್ಟುಡಿಯೋದಲ್ಲಿ ಏನೇನಿದೆ?
ಗೃಹ ಕಚೇರಿ ‘ಕೃಷ್ಣಾ’ದ ಬಲಭಾಗದಲ್ಲಿ ಸುಸಜ್ಜಿತ ‘ವರುಣ’ ಸ್ಟುಡಿಯೋ ನಿರ್ಮಾಣವಾಗಿದೆ. ಸಂದರ್ಶನ, ಸಂವಾದಕ್ಕೆ ಪೂರಕವಾದ ಸಕಲ ಸೌಕರ್ಯವನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದೆ. ಸಂದರ್ಶನಕ್ಕೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಧ್ವನಿ- ಬೆಳಕಿನ ಸೌಲಭ್ಯ, ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದ ಹಿನ್ನೆಲೆ ಪರದೆ, ಟೆಲಿಪ್ರಾಂಪ್ಟರ್‌, ರೆಕಾರ್ಡಿಂಗ್‌ ಸಲಕರಣೆಗಳು, ಕಂಪ್ಯೂಟರ್‌ ಸೇರಿದಂತೆ ಇತರೆ ಸೌಲಭ್ಯವನ್ನು ಸ್ಟುಡಿಯೋ ಒಳಗೊಂಡಿದೆ.

ಇದರಿಂದ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಪ್ರತಿನಿಧಿಗಳು ತಮ್ಮ ಕ್ಯಾಮೆರಾದೊಂದಿಗೆ ತೆರಳಿ ಸ್ಟುಡಿಯೋದಲ್ಲೇ ಸಂಪೂರ್ಣ ಸಂದರ್ಶನ ನಡೆಸಬಹುದು. ಮಾಧ್ಯಮಗಳಿಗೆ ಸಂದರ್ಶನ ನೀಡಲು, ಸಂವಾದ ನಡೆಸುವುದಕ್ಕೆ ಸ್ಟುಡಿಯೋ ಸೀಮಿತವಾಗಿಲ್ಲ. ಮುಖ್ಯಮಂತ್ರಿಗಳು ಆಗಾಗ್ಗೆ ನೀಡುವ ಸಂದೇಶಗಳು, ಹೇಳಿಕೆಗಳ ಧ್ವನಿ ಹಾಗೂ ದೃಶ್ಯ ಚಿತ್ರೀಕರಣವೂ ಸ್ಟುಡಿಯೋದಲ್ಲೇ ನಡೆಯಲಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Fraud: ಉದ್ಯೋಗ ನೆಪದಲ್ಲಿ 2 ಕೋಟಿ ರೂ. ವಂಚನೆ; ಸಿಐಡಿ ಲೇಡಿ ಆಫೀಸರ್‌ ಸೆರೆ

Fraud: ಉದ್ಯೋಗ ನೆಪದಲ್ಲಿ 2 ಕೋಟಿ ರೂ. ವಂಚನೆ; ಸಿಐಡಿ ಲೇಡಿ ಆಫೀಸರ್‌ ಸೆರೆ

Arrested: ಸ್ನೇಹಿತರಿಗೆ ತಿಂಡಿ ಕೊಡಿಸಿದ್ದಕ್ಕೆ 45 ಲಕ್ಷ ಕಳೆದುಕೊಂಡ ಬಾಲಕಿ!

Arrested: ಸ್ನೇಹಿತರಿಗೆ ತಿಂಡಿ ಕೊಡಿಸಿದ್ದಕ್ಕೆ 45 ಲಕ್ಷ ಕಳೆದುಕೊಂಡ ಬಾಲಕಿ!

ayanuru-Manjunath

BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು

1-puttur

Puttur: ಬಸ್ – ಬೈಕ್ ಅಪಘಾತ; ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pen drive case: ತುರ್ತು ವಿಚಾರಣೆಗೆ ಹೈಕೋರ್ಟ್‌ ನಕಾರ

Pen drive case: ತುರ್ತು ವಿಚಾರಣೆಗೆ ಹೈಕೋರ್ಟ್‌ ನಕಾರ

ayanuru-Manjunath

BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು

crime (2)

Hubli: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಭೀಕರ ಹತ್ಯೆ!

HD Revanna ಕೋರ್ಟ್‌ ಮೇಲೆ ನಂಬಿಕೆ ಇದೆ ನಿರ್ದೋಷಿಯಾಗುವೆ

HD Revanna ಕೋರ್ಟ್‌ ಮೇಲೆ ನಂಬಿಕೆ ಇದೆ ನಿರ್ದೋಷಿಯಾಗುವೆ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

1-a-l-1

Art of Living ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

1-aaaa

Udupi; ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿದ ಖ್ಯಾತ ಕ್ರಿಕೆಟಿಗ ರವಿ ಶಾಸ್ತ್ರಿ

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.