ಅಮೆರಿಕ ಇನ್ಫೋಸಿಸ್ ಅಧ್ಯಕ್ಷ ರಾಜೀನಾಮೆ; ಸಿಕ್ಕಾ ಗೆ ಭಾರೀ ಹಿನ್ನಡೆ
Team Udayavani, Jun 16, 2017, 12:10 PM IST
ಬೆಂಗಳೂರು : ಇನ್ಪೋಸಿಸ್ನ ಅಮೆರಿಕ ಘಟಕದ ಮುಖ್ಯಸ್ಥ ಹಾಗೂ ಜಾಗತಿಕ ಉತ್ಪಾದನೆ ಮತ್ತು ಸಗಟು ವಹಿವಾಟುಗಳ ಮುಖ್ಯಸ್ಥರಾಗಿರುವ ಸಂದೀಪ್ ದದ್ಲಾನಿ ಅವರು ತಮ್ಮ ಹುದ್ದೆಗೆ ನಿನ್ನೆ ಗುರುವಾರ ಹಠಾತ್ ರಾಜೀನಾಮೆ ನೀಡಿದ್ದಾರೆ. ಕಂಪೆನಿಯ ಸಿಇಓ ವಿಶಾಲ್ ಸಿಕ್ಕಾ ಅವರಿಗೆ ಇದೊಂದು ಭಾರೀ ದೊಡ್ಡ ಹಿನ್ನಡೆ ಎಂದು ತಿಳಿಯಲಾಗಿದೆ.
ನಿನ್ನೆ ಗುರುವಾರದ ಈ ದಿಢೀರ್ ಬೆಳವಣಿಗೆಯನ್ನು ಅನುಸರಿಸಿ ನಿನ್ನೆ ರಾತ್ರಿಯೇ ದದ್ಲಾನಿ ಅವರ ಸ್ಥಾನಕ್ಕೆ ಇಬ್ಬರು ಎಕ್ಸಿಕ್ಯುಟಿವ್ಗಳನ್ನು ಕಂಪೆನಿಯು ನೇಮಿಸಿದೆ. ಅವರೆಂದರೆ ಕರ್ಮೇಶ್ ವಾಸ್ವಾನಿ (ಗ್ಲೋಬಲ್ ಹೆಡ್ ಫಾರ್ ರೀಟೇಲ್, ಸಿಪಿಜಿ ಆ್ಯಂಡ್ ಲಾಜಿಸ್ಟಿಕ್ಸ್ (ಆರ್ಸಿಎಲ್) ಹಾಗೂ ನಿತೇಶ್ ಬಂಗಾ (ಗ್ಲೋಬಲ್ ಹೆಡ್ ಫಾರ್ ಮೆನ್ಯುಫ್ಯಾಕ್ಚರಿಂಗ್).
ದದ್ಲಾನಿ ಅವರು ಇನ್ಫೋಸಿಸ್ನ ನಾಲ್ಕು ಅಧ್ಯಕ್ಷರಲ್ಲಿ ಒಬ್ಬರಾಗಿದ್ದರು. ಇನ್ಫೋಸಿಸ್ನ ಮೂರನೇ ಒಂದಂಶ ಆದಾಯಕ್ಕೆ ಇವರೇ ಕಾರಣೀಭೂತರಾಗಿದ್ದರು. ಇನ್ಫೋಸಿಸ್ ತನ್ನ ಒಟ್ಟು ಆದಾಯದ ಶೇ.65ರಷ್ಟನ್ನು ಅಮೆರಿಕ ಒಂದರಿಂದಲೇ ಗಳಿಸುತ್ತಿರುವುದು ಗಮನಾರ್ಹವಾಗಿದೆ.
ಎರಡನೇ ಅತೀ ದೊಡ್ಡ ತಂತ್ರಾಂಶ ರಫ್ತುದಾರ ಸಂಸ್ಥೆಯಾಗಿರುವ ಇನ್ಫೋಸಿಸ್ನ ಸಾಗರೋತ್ತರ ವಹಿವಾಟುಗಳನ್ನು ನಿಭಾಯಿಸಲು ವಿಶಾಲ್ ಸಿಕ್ಕಾ ತೀವ್ರ ಹೆಣಗಾಟ ನಡೆಸುತ್ತಿರುವ ಈ ಸಂದರ್ಭದಲ್ಲೇ ದದ್ಲಾನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಇದು ಸಿಕ್ಕಾ ಅವರಿಗೆ ಭಾರೀ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿರುವುದಾಗಿ ತಿಳಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು