ಟ್ರಂಪ್‌ಗೆ ಆತ್ಮೀಯತೆ ಕೊಟ್ಟ ಆಲಿಂಗನ


Team Udayavani, Jun 28, 2017, 3:45 AM IST

lingana.jpg

ವಾಷಿಂಗ್ಟನ್‌: ಅವರೇನೂ ತೀರಾ ಆಪ್ತ ಮಿತ್ರರಾಗಿದ್ದು, ಬಹುಕಾಲದ ಬಳಿಕ ಭೇಟಿಯಾದವರೇನೂ ಅಲ್ಲ. ಆದರೂ ಮೂರು ಬಾರಿ ಆತ್ಮೀಯ ಆಲಿಂಗನ, ಹಲವು ಬಾರಿ ಕೈಕುಲುಕುವಿಕೆ…ಶ್ವೇತಭವನದ ವಿವಿಧ ಭಾಗಗಳನ್ನು ಸಂದರ್ಶಿಸುವ ವೇಳೆ ಹಾಸ್ಯ ಚಟಾಕಿಗಳು…

ಇಲ್ಲಿ ಹೇಳಲು ಹೊರಟಿರುವುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್‌ ಸೋಮವಾರ ಶ್ವೇತಭವನದಲ್ಲಿ ಭೇಟಿಯಾದ ಸಂದರ್ಭದ ಆಪ್ತ ಕ್ಷಣಗಳು. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಹೊರಭಾಗದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಸಂದರ್ಭದಲ್ಲಿ ಎರಡೂ ಕೈಗಳನ್ನು ಚಾಚಿ ಟ್ರಂಪ್‌ರನ್ನು ಆಲಂಗಿಸಿದರು. ಅಮೆರಿಕ ಅಧ್ಯಕ್ಷರಿಗಂತೂ ಅದು ಹೊಸದು. ಆದರೂ ಅವರು ಆತ್ಮೀಯತೆ ಪ್ರದರ್ಶಿಸಿದರು.  

ರೋಸ್‌ ಗಾರ್ಡನ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಇಬ್ಬರು ನಾಯಕರು ಆತ್ಮೀಯವಾಗಿ ಆಲಂಗಿಸಿದರು. ಕೆಲವೇ ಸೆಕೆಂಡುಗಳ ಕಾಲ ಆ ಕ್ಷಣವಿತ್ತು. ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್‌ ತಮ್ಮ ಗೌರವಾರ್ಥ ಆಯೋಜಿಸಿದ್ದ ಔತಣಕೂಟದ ಬಳಿಕ ವಿದಾಯದ ಸೂಚಕವಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಆಲಂಗಿಸಿಕೊಂಡರು. ಈ ಸಂದರ್ಭದಲ್ಲಿ ಮೋದಿ ತಮ್ಮ ತಲೆಯನ್ನು ಟ್ರಂಪ್‌ರ ಎಡಹೆಗಲಿನ ಮೇಲಿಟ್ಟಿದ್ದರು. ಬಳಿಕ ಬಲ ಹೆಗಲಿನ ಮೇಲೆ ತಲೆಯಿಟ್ಟರು. ನಂತರ ಪ್ರಧಾನಿಯ ಹೆಗಲ ಮೇಲೆ ಅಮೆರಿಕ ಅಧ್ಯಕ್ಷ ಆತ್ಮೀಯವಾಗಿ ಕೈಹಾಕಿದರು. 

ವಿದೇಶಿ ಗಣ್ಯರ ಜತೆಗೆ ಪ್ರಧಾನಿ ಮೋದಿ ಆತ್ಮೀಯವಾಗಿ ಆಲಂಗಿಸಿಕೊಳ್ಳುವುದು ಹೊಸತೇನೂ ಅಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, ಜಪಾನ್‌ ಪ್ರಧಾನಿ ಶಿಂಜೋ ಅಬೆ, ಚೀನಾ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್‌ ಸೇರಿದಂತೆ ಹಲವು ಪ್ರಮುಖ ಗಣ್ಯರನ್ನು ಆತ್ಮೀಯವಾಗಿ ಆಲಂಗಿಸಿಕೊಂಡಿದ್ದಾರೆ. 

ಚೀನಾ ಆರ್ಥಿಕ ಕಾರಿಡಾರ್‌ಗೆ ಟೀಕೆ
ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸರ್ಕಾರ ನಿರ್ಮಿಸಲು ಮುಂದಾಗಿರುವ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ)ಗೆ ಅಮೆರಿಕ ಆಕ್ಷೇಪಿಸಿದೆ. ಪ್ರಾದೇಶಿಕ ವಾಗಿ ಆರ್ಥಿಕ ಮೇಲುಗೈ ಸಾಧಿಸಬೇಕಾದರೂ, ಆಯಾ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಅಧ್ಯಕ್ಷ ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ. ಶಾಂಘೈನಲ್ಲಿ ಪ್ರಧಾನಿ ಈ ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 

ಚರ್ಚೆಗೆ ಬಾರದ ಎಚ್‌-1ಬಿ ವೀಸಾ
ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಎಚ್‌-1 ಬಿ ವೀಸಾ ನಿಯಂತ್ರಕ್ಕೆ ಅಮೆರಿಕ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಈ ಬಗ್ಗೆ ಮೋದಿ, ಟ್ರಂಪ್‌ ಜತೆಗೆ ಪ್ರಸ್ತಾಪಿಸಿ ಚರ್ಚಿಸಬೇಕೆಂಬ ಒತ್ತಾಯ ಭಾರತೀಯ ಐಟಿ ಕಂಪನಿ ಗಳಿಂದ ವ್ಯಕ್ತವಾಗಿತ್ತು. ಆದರೆ ಅದು ಪ್ರಧಾನವಾಗಿ ಪ್ರಸ್ತಾಪ ವಾಗಲಿಲ್ಲ. ಈ ವಿಚಾರವನ್ನು ಅಮೆರಿಕ ಸರ್ಕಾರ ಇನ್ನೂ ಪರಿ ಶೀಲನೆಯ ಹಂತದಲ್ಲಿದೆ ಎಂದು ಹೇಳಿರುವು ದರಿಂದ ಚರ್ಚೆ ಬಗ್ಗೆ ಕೇಂದ್ರ ಒತ್ತಾಯಿಸಲಿಲ್ಲ ಎಂದು ಹೇಳಲಾಗಿದೆ. 

ಉಗ್ರನಲ್ಲ, ಸ್ವಾತಂತ್ರ್ಯ ಹೋರಾಟಗಾರ!
ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಸಂಸ್ಥಾಪಕ ಸಯ್ಯದ್‌ ಸಲಾವುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಣೆ ಮಾಡಿದ್ದಕ್ಕೆ ಪಾಕಿಸ್ತಾನ ಆಕ್ಷೇಪ ಮಾಡಿದೆ. ಕಾಶ್ಮೀರದ ನಾಗರಿಕರಿಗೆ ನೈತಿಕ, ರಾಜಕೀಯ, ರಾಜತಾಂತ್ರಿಕ ಬೆಂಬಲ ನೀಡುವುದಾಗಿ ಪಾಕ್‌ ಹೇಳಿದೆ. “ಕಾಶ್ಮೀರಿಗರ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕ ಎಂದು ಬಿಂಬಿಸುವುದು ಸರಿ ುಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಹೇಳಿದ್ದಾರೆ.

ಭಾರತಕ್ಕೆ ಸಿಕ್ಕಿತು 22 ಪ್ರಿಡೇಟರ್‌ ಡ್ರೋನ್‌
ದೇಶದ ನೌಕಾ ಪಡೆಗೆ ಅಗತ್ಯವಾಗಿರುವ 22 ಪ್ರಿಡೇಟರ್‌ ಡ್ರೋನ್‌ ಅನ್ನು ನೀಡಲು ಅಮೆರಿಕ ಸರ್ಕಾರ ಒಪ್ಪಿಕೊಂಡಿದೆ. ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರದಲ್ಲಿ ಇದೊಂದು ಉತ್ತಮ ಬೆಳವಣಿಗೆ ಎಂದು ಬಣ್ಣಿಸಲಾಗುತ್ತಿದೆ. ಅದರ ದ್ಯೋತಕವಾಗಿಯೇ ಟ್ರಂಪ್‌ ಸರ್ಕಾರ ಈ ಕೊಡುಗೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಎರಡೂ ದೇಶಗಳ ಬಾಂಧವ್ಯ ಮತ್ತಷ್ಟು ದೃಢವಾದಲ್ಲಿ ಭಾರತಕ್ಕೆ ಎಫ್-16 ಮತ್ತು ಎಫ್/ಎ18 ಯುದ್ಧ ವಿಮಾನಗಳನ್ನು ಕೊಡುಗೆಯಾಗಿ ನೀಡುವ ಬಗ್ಗೆಯೂ ಯೋಚಿಸಬಹುದು ಎಂದು ಶ್ವೇತ ಭವನದ ಹೇಳಿಕೆ ತಿಳಿಸಿದೆ.

ಲಿಂಕನ್‌ ಸ್ಟಾಂಪ್‌, ಬ್ರೇಸ್‌ಲೆಟ್‌ ಉಡುಗೊರೆ
ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಮ್ಮ ಭೇಟಿಯ ನೆನಪಿಗಾಗಿ 1965ರಲ್ಲಿ ಬಿಡುಗಡೆಯಾದ ಅಬ್ರಾಹಾಂ ಲಿಂಕನ್‌ ಚಿತ್ರ ಇರುವ ಅಂಚೆ ಚೀಟಿ. ಇದರ ಜತೆಗೆ ಹೋಶಿಯಾರ್‌ಪುರದಲ್ಲಿ ನಿರ್ಮಾಣ ಮಾಡಿರುವ ಆಕರ್ಷಕ ಮರದ ಪೆಟ್ಟಿಗೆಯನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಅಮೆರಿಕದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್‌ಗೆ ಹಿಮಾಚಲ ಪ್ರದೇಶದ ಕುಸುರಿ ಕೆತ್ತನೆಗಳಿರುವ ಬೆಳ್ಳಿಯ ಬ್ರೇಸ್‌ಲೆಟ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಮೋದಿ. ಇದರ ಜತೆಗೆ ಕಾಂಗ್ರಾ ಕಾಡುಗಳಿಂದ ಸಂಗ್ರಹಿಸಲಾಗಿರುವ ಜೇನು ಮತ್ತು ಚಹಾ ಪುಡಿ, ಕಾಶ್ಮೀರದ ಶಾಲು ನೀಡಿದ್ದಾರೆ.

ಟ್ರಂಪ್‌ ಹೇಳಿದ್ದೇನು?
ಪಾಕಿಸ್ತಾನ ಉಗ್ರ ಸಂಘಟನೆಗಳಾದ ಜೈಶ್‌ ಮತ್ತು ಲಷ್ಕರ್‌, ಡಿ ಕಂಪನಿ  ವಿರುದ್ಧ ಕ್ರಮ ಕೈಗೊಳ್ಳಬೇಕು. ಇಸ್ಲಾಮಿಕ್‌ ಉಗ್ರವಾದದ ವಿರುದ್ಧ ಮೃದು ಧೋರಣೆ ಬೇಡವೇ ಬೇಡ. ಜತೆಗೆ ಎರಡೂ ರಾಷ್ಟ್ರಗಳು ಅಲ್‌-ಖೈದಾ, ಐಸಿಸ್‌ಗಳ ವಿರುದ್ಧ ಹೋರಾಟ ನಡೆಸಲಿವೆ.

ಮುಂಬೈ, ಪಠಾಣ್‌ಕೋಟ್‌ನಲ್ಲಿ ನಡೆಸಿದ ಕುಕೃತ್ಯಗಳಿಗೆ ಸಂಬಂಧಿಸಿದಂತೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು. 
ಎರಡೂ ರಾಷ್ಟ್ರಗಳು ಭದ್ರತೆ ನಿಟ್ಟಿನಲ್ಲಿ ಹೋರಾ ಡುತ್ತಿವೆ. ಇಸ್ಲಾಮಿಕ್‌ ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗಳ ನಾಶಕ್ಕೆ ಪಣತೊಟ್ಟಿವೆ.

ಎರಡು ದೇಶಗಳೂ ಪರಸ್ಪರ ಹೊಸ ತಂತ್ರಜ್ಞಾನ, ಆರ್ಥಿಕ ಸಹಕಾರ ಹೊಂದಲು ಬಯಸುತ್ತವೆ. 
ಇನ್ನು 2 ವಾರಗಳಲ್ಲಿ ಭಾರತ ತೆರಿಗೆ ವ್ಯವಸ್ಥೆಯಲ್ಲಿ (ಜಿಎಸ್‌ಟಿ) ಸಂಪೂರ್ಣ ಬದಲಾವಣೆ ತರಲಿದೆ. ಈ ಪ್ರಯತ್ನಕ್ಕೆ ಶುಭವಾಗಲಿ.

ನಾನು ಮತ್ತು ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ವಿಶ್ವನಾಯಕರಾಗಿದ್ದೇವೆ. ಇಂಥ ಮಾಹಿತಿಯನ್ನು ಅಮೆರಿಕದ ಮತ್ತು ಜಗತ್ತಿನ ನಾಗರಿಕರಿಗೆ ನೀಡಲು ಸಂತೋಷಪಡುತ್ತೇನೆ.

ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ನಾನು ಗೆದ್ದರೆ ಭಾರತ, ಅಮೆರಿಕದ ಉತ್ತಮ ಸ್ನೇಹಿತನಾಗಲಿದೆ ಎಂದು ಮಾತುಕೊಟ್ಟಿದ್ದೆ. ಅದನ್ನು ನಡೆಸಿಕೊಟ್ಟಿದ್ದೇನೆ. ಅಮೆರಿಕ ಮತ್ತು ಭಾರತದ ನಡುವಿನ ಮಿತ್ರತ್ವ ಪ್ರಜಾಪ್ರಭುತ್ವ ಮತ್ತು ಸಮಾನ ಹಿತಾಸಕ್ತಿಗಳದ್ದಾಗಿದೆ.

ಭಾರತ ಈ ವರ್ಷ ಸ್ವಾತಂತ್ರೊéàತ್ಸವದ 70ನೇ ವರ್ಷ ಆಚರಿಸಲಿದೆ. ಅದಕ್ಕೆ ಶುಭವಾಗಲಿ. 
ಉತ್ತರ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಭಾರತ ಕೈಗೊಂಡ ನಿಲುವು ಸರಿಯಾಗಿದೆ. ಅದಕ್ಕಾಗಿ ಭಾರತವನ್ನು ಅಭಿನಂದಿಸುತ್ತೇನೆ. 
ಎರಡೂ ದೇಶಗಳ ಸೇನೆ ಶೀಘ್ರದಲ್ಲೇ ಜಪಾನ್‌ ಸೇನೆಯ ಜತೆ ನಡೆಯುವ ಮಿಲಿಟರಿ ಅಭ್ಯಾಸದಲ್ಲಿ ಭಾಗವಹಿಸಲಿವೆ.

ಮೋದಿ ಹೇಳಿದ್ದೇನು?
ಭಯೋತ್ಪಾದನೆ, ತೀವ್ರವಾದ ಮತ್ತು ಮೂಲಭೂತವಾದದ ವಿರುದ್ಧ ಹೋರಾಟ ನಡೆಸುವಲ್ಲಿ ಇಬ್ಬರು ನಾಯಕರು ಒಪ್ಪಿಕೊಂಡಿದ್ದೇವೆ. ಉಗ್ರರ ಸ್ವರ್ಗವಾಗಿರುವ ಸ್ಥಳಗಳ ವಿರುದ್ಧ ಮತ್ತು ಅವುಗಳಿಗೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕ್ರಮವೇ ಆದ್ಯತೆ.

ಭಯೋತ್ಪಾದನೆ ಎನ್ನುವುದೇ ಎರಡೂ ರಾಷ್ಟ್ರಗಳಿಗೆ ಪ್ರಧಾನ ಸವಾಲು. ಅದಕ್ಕಾಗಿ ಗುಪ್ತಚರ ಮಾಹಿತಿ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದೇವೆ. 

ಆಫ್ಘಾನಿಸ್ತಾನದ ಬೆಳವಣಿಗೆ ಬಗ್ಗೆ ಇಬ್ಬರೂ ಚರ್ಚಿ ಸಿದ್ದೇವೆ. ಅದರ ಪುನರ್‌ ನಿರ್ಮಾಣದಲ್ಲಿ ಭಾರತ ಮತ್ತು ಅಮೆರಿಕ ಸಮಾನ ಪಾತ್ರ ವಹಿಸಿವೆ. 

ಎರಡೂ ದೇಶಗಳು ಜಗತ್ತಿನ ಅಭಿವೃದ್ಧಿಯ ಎಂಜಿನ್‌ಗಳು ಎಂದು ಪರಿಗಣಿತವಾದ್ದರಿಂದ ನಮ್ಮ ಗುರಿಗಳು ಒಂದೇ ಆಗಿರುತ್ತವೆ. ಹೀಗಾಗಿ ಎರಡೂ ರಾಷ್ಟ್ರಗಳ ನಡುವಿನ ಸಹಕಾರ, ಸಹಭಾಗಿತ್ವ ಉನ್ನತ ಮಟ್ಟದಲ್ಲಿಯೇ ಇರುತ್ತದೆ.
ವ್ಯೂಹಾತ್ಮಕ ಸಂಬಂಧದ ಕ್ಷೇತ್ರದಲ್ಲಿ ನಮ್ಮಿಬ್ಬರ ಪಾಲುದಾರಿಕೆಯ ಬಾಂಧವ್ಯ ಗಟ್ಟಿಯಾಗಿರಬೇ ಕೆಂದು ನಾವು ಚರ್ಚಿಸಿದ್ದೇವೆ. 

ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ದಾರಿಯಲ್ಲಿ ಅಮೆರಿಕಕ್ಕೆ ಪ್ರಥಮ ಆದ್ಯತೆ ಇದೆ. ಉದ್ಯೋಗ ಸೃಷ್ಟಿ, ಉತ್ಪಾದಕತೆ, ಮಹತ್ವದ ತಾಂತ್ರಿಕ ಶೋಧನೆಗಳಲ್ಲಿಯೂ ಎರಡೂ ದೇಶಗಳು ಮುಂದಿವೆ. 
ವ್ಯಾಪಾರ, ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಯಲ್ಲಿ ನಮಗೆ ಸಮಾನ ಹಿತಾಸಕ್ತಿಗಳಿವೆ. 
ಭಾರತ ಮತ್ತು ಅಮೆರಿಕ ಏಕಾಏಕಿ ಸ್ನೇಹಿತರಾ ದದ್ದಲ್ಲ. ಹಾಲಿ ಮತ್ತು ಮುಂದಿನ ಸವಾಲುಗಳನ್ನು ಯೋಚಿಸಿಯೇ ಕೈಜೋಡಿಸಿಕೊಂಡಿವೆ. 

ರಕ್ಷಣಾ ವಿಭಾಗದಲ್ಲಿಯೂ ಇರುವ ಸಹಕಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದೇವೆ. 
ಅಧ್ಯಕ್ಷ ಟ್ರಂಪ್‌ ಅವರೇ, ನೀವು ಮತ್ತು ನಿಮ್ಮ ಕುಟುಂಬ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡುತ್ತಿದ್ದೇನೆ.

ಟಾಪ್ ನ್ಯೂಸ್

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.