ಬಾರಾಮುಲ್ಲಾ: ಎಕೆ 47 ಸಮೇತ ಸೈನಿಕ ಪರಾರಿ! ಉಗ್ರನಾದನೆ?
Team Udayavani, Jul 6, 2017, 11:31 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಸೇನೆಗೆ ಸೇರಿತ ಯೋಧನೊಬ್ಬ ಎಕೆ 47 ಗನ್, 3 ಮ್ಯಾಗಜೀನ್ಗಳ ಸೇಮತ ಪರಾರಿಯಾಗಿದ್ದು ಉಗ್ರರ ಜೊತೆಗೂಡಿರುವ ಶಂಕೆ ವ್ಯಕ್ತವಾಗಿದೆ.
173 ನೇ ಬೆಟಾಲಿಯನ್ನ ಇಂಜಿನಿಯರಿಂಗ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಪುಲ್ವಾಮ ಮೂಲದ ಜಹೂರ್ ಅಹಮದ್ ಠಾಕೂರ್ ಎಂಬ ಸೈನಿಕ ಬುಧವಾರ ರಾತ್ರಿ ಪರಾರಿಯಾಗಿದ್ದು ಇದೀಗ ಪೊಲೀಸರು ಭದ್ರತಾ ಪಡೆಗಳು ಭಾರೀ ಹುಡುಕಾಟ ನಡೆಸುತ್ತಿದ್ದಾರೆ.