terrorists

 • ಒಳನುಸುಳುತ್ತಿದ್ದ 7 ಉಗ್ರರ ಸದೆಬಡಿದ ಸೇನೆ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಕೆರನ್‌ನಲ್ಲಿ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದ ಉಗ್ರರನ್ನು ಗಡಿ ಭದ್ರತಾ ಪಡೆಗಳು ಸದೆ ಬಡಿದಿವೆ. ಪಾಕಿಸ್ಥಾನದ ಬಾರ್ಡರ್‌ ಆಕ್ಷನ್‌ ಟೀಂ (ಬ್ಯಾಟ್‌)ಗೆ ಸೇರಿದವರು ಇವರಾಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಭಾರತ-ಪಾಕ್‌ ಮಧ್ಯೆ ಭಾರೀ ಗುಂಡಿನ…

 • ಪಾಕ್‌ ಸಂಚು ವಿಫ‌ಲ

  ನವದೆಹಲಿ: ಶಾಂತಿಯುತವಾಗಿ ಸಾಗುತ್ತಿದ್ದ ಅಮರನಾಥ ಯಾತ್ರೆಯ ಮೇಲೆ ಮತ್ತೆ ಉಗ್ರರ ಕೆಂಗಣ್ಣು ಬಿದ್ದಿದೆ. ಯಾತ್ರಿಕ ರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರರು ಸಂಚು ರೂಪಿಸಿದ್ದ ಆಘಾತಕಾರಿ ವಿಚಾರವು ಬಹಿರಂಗಗೊಂಡಿದೆ. ಆದರೆ, ಭದ್ರತಾ ಪಡೆಗಳ ಸಮಯಪ್ರಜ್ಞೆ ಹಾಗೂ…

 • 40 ಸಾವಿರ ಉಗ್ರರ ನೆಲೆಯಾಗಿದೆ ಪಾಕ್‌

  ವಾಷಿಂಗ್ಟನ್‌: ”ಪಾಕಿಸ್ತಾನದಲ್ಲಿ ಈಗಲೂ 30,000ದಿಂದ 40,000 ಉಗ್ರವಾದಿಗಳಿದ್ದು, ಅವರೆಲ್ಲರೂ ಅಫ್ಘಾನಿಸ್ತಾನ ಹಾಗೂ ಕಾಶ್ಮೀರದಲ್ಲಿ ಹೋರಾಡುವ ತರಬೇತಿ ಪಡೆದವರು” ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ, ಅಮೆರಿಕ ಸಂಸದರ ಚಿಂತಕರ ಚಾವಡಿ ‘ಯು.ಎಸ್‌. ಇನ್ಸ್ಟಿಟ್ಯೂಟ್ ಆಫ್ ಪೀಸ್‌’ನಲ್ಲಿ…

 • ಉಗ್ರರು ಭ್ರಷ್ಟ ರಾಜಕಾರಣಿಗಳನ್ನು ಗುಂಡಿಟ್ಟು ಕೊಲ್ಲಬೇಕು;ಜಮ್ಮು-ಕಾಶ್ಮೀರ್ ರಾಜ್ಯಪಾಲ

  ಶ್ರೀನಗರ್:ಅಮಾಯಕ ಜನರು ಮತ್ತು ಯೋಧರನ್ನು ಹೊರತುಪಡಿಸಿ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳನ್ನು ಭಯೋತ್ಪಾದಕರು ಕೊಂದು ಬಿಡಬೇಕು ಎಂಬ ಜಮ್ಮು-ಕಾಶ್ಮೀರ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲಿಕ್ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. “ತಮ್ಮ ಕೈಗೆ ಬಂದೂಕನ್ನು ಎತ್ತಿಕೊಂಡಿರುವ ಈ…

 • ಬಾಲಕೋಟ್ ದಾಳಿ ಬಳಿಕ ಉಗ್ರರು ಆಫ‌್ಗನ್‌ಗೆ ಶಿಫ್ಟ್!

  ನವದೆಹಲಿ: ಭಾರತೀಯ ವಾಯುಪಡೆಯು ಬಾಲಕೋಟ್‌ನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಸರ್ಜಿಕಲ್ ದಾಳಿ ನಡೆಸಿದರೂ ಪಾಕಿಸ್ತಾನ ತನ್ನ ‘ಉಗ್ರ ಪೋಷಣೆ’ಯ ಕೆಲಸವನ್ನು ಮಾತ್ರ ನಿಲ್ಲಿಸಿಲ್ಲ. ಬಾಲಕೋಟ್ ದಾಳಿಯ ಬಳಿಕ ಪಾಕಿಸ್ತಾನಿ ಉಗ್ರರು ತಮ್ಮ ಕಾರ್ಯಸ್ಥಳವನ್ನು ಬದಲಿಸಿದ್ದು, ಅಫ್ಘಾನಿಸ್ತಾನಕ್ಕೆ ತೆರಲಿ ಅಲ್ಲಿ…

 • ಕಾಶ್ಮೀರ : ಸೇನಾ ಪಡೆಗಳ ಮೇಲೆ ಉಗ್ರರ ಐಇಡಿ ದಾಳಿ ಯತ್ನ ವಿಫ‌ಲ

  ಶ್ರೀನಗರ: ಬದ್ಗಾಮ್‌ನ ಕಾಕಿಪೋರಾ ಪ್ರದೇಶದಲ್ಲಿ ಸೇನಾ ಪಡೆಗಳ ಮೇಲೆ ಉಗ್ರರ ಐಇಡಿ ದಾಳಿ ಯತ್ನವನ್ನು ಶುಕ್ರವಾರ ಬೆಳಗ್ಗೆ ಭದ್ರತಾ ಪಡೆಗಳು ವಿಫ‌ಲಗೊಳಿಸಿದ್ದಾರೆ. ಶ್ರೀನಗರದಿಂದ 3 ಕಿ.ಮೀ ದೂರವಿರುವ ಬೈಪಾಸ್‌ ರಸ್ತೆಯಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದ ಸೇನಾಪಡೆಗಳ…

 • ಶೋಪಿಯಾನ್‌ನಲ್ಲಿ ಬೆಳ್ಳಂಬೆಳಗ್ಗೆ ನಾಲ್ವರು ಉಗ್ರರು ಫಿನಿಶ್‌

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ದಾರಮ್‌ದೋರಾ ಪ್ರದೇಶದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಭಾರಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನಾ ಪಡೆಗಳು ನಸುಕಿನ ವೇಳೆ  ಜಂಟಿ…

 • ಬಾರಾಮುಲ್ಲಾದಲ್ಲಿ ಉಗ್ರರಿಬ್ಬರ ಹತ್ಯೆ: ಮುಂದುವರಿದ ಕಾರ್ಯಾಚರಣೆ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಬಾರಾಮುಲ್ಲಾದ ಬಜ್‌ತಾಲಾನ್‌ ಎಂಬಲ್ಲಿ ಶನಿವಾರ ಬೆಳಗ್ಗೆ ಸೇನಾ ಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಉಗ್ರರ ಇರುವಿಕೆಯ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ…

 • ಶೋಪಿಯಾನ್‌ನಲ್ಲಿ ಉಗ್ರರಿಬ್ಬರ ಹತ್ಯೆ; ಐಇಡಿ ನಿಷ್ಕ್ರಿಯ

  ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ವಯ ಸೇನಾ ಪಡೆಗಳು ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದು ಮಂಗಳವಾರ ಬೆಳಗ್ಗೆ ಅವ್‌ನೀರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ…

 • ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಗುಂಡಿನ ದಾಳಿಗೆ ಮಹಿಳೆ ಬಲಿ; ಕಲ್ಲು ತೂರಾಟ

  ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗೆ ಈದ್ ಪ್ರಾರ್ಥನೆ ಮುಗಿದ ಬಳಿಕ ಯುವಕರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಶ್ರೀನಗರ್, ಪುಲ್ವಾಮಾ, ಸೋಪೋರೆ, ಬಾರಾಮುಲ್ಲಾ ಸೇರಿದಂತೆ ಕಣಿವೆ ಪ್ರದೇಶದಲ್ಲಿ ಪ್ರತ್ಯೇಕತಾವಾದಿಗಳ ಗುಂಪು ಭದ್ರತಾ ಪಡೆಗಳ ಮೇಲೆ…

 • ಉಗ್ರರ ನುಸುಳುವಿಕೆ : ಕೇರಳಾದ್ಯಂತ ಮತ್ತೆ ಕಟ್ಟೆಚ್ಚರಕ್ಕೆ ಆದೇಶ

  ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ ಉಗ್ರರು ಕೇರಳ ಮತ್ತು ಲಕ್ಷದ್ವೀಪವನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಕೇಂದ್ರ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ಲಕ್ಷದ್ವೀಪದಲ್ಲಿ ತೀವ್ರ ಕಟ್ಟೆಚ್ಚರಕ್ಕೆ…

 • ಕೇರಳ ಕರಾವಳಿಗೆ ಹೈಅಲರ್ಟ್‌

  ತಿರುವನಂತಪುರಂ: ಶ್ರೀಲಂಕಾದಲ್ಲಿ ಕಳೆದ ತಿಂಗಳು ಈಸ್ಟರ್‌ ಹಬ್ಬದಂದು ಸ್ಫೋಟ ನಡೆಸಿದ ಅನಂತರ ಇಡೀ ದೇಶದಲ್ಲಿ ಐಸಿಸ್‌ ಉಗ್ರರ ನಿರ್ನಾಮ ನಡೆಯುತ್ತಿದ್ದರೆ, ಅಲ್ಲಿಂದ 15 ಉಗ್ರರು ಲಕ್ಷದ್ವೀಪದ ಕಡೆಗೆ ಬೋಟ್‌ನಲ್ಲಿ ಹೊರಟಿದ್ದಾರೆ ಎಂಬ ಗುಪ್ತಚರ ಮಾಹಿತಿ ಈಗ ಭಾರತದ ಕರಾವಳಿಯನ್ನು…

 • ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ ಗೆ ಇಬ್ಬರು ಹಿಜ್ಬುಲ್ ಉಗ್ರರು ಬಲಿ

  ಗೋಪಾಲ್ ಪೋರಾ: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಯ ಎನ್ ಕೌಂಟರ್ ಗೆ ಇಬ್ಬರು ಉಗ್ರರು ಬಲಿಯಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಗೋಪಾಲ್ ಪೋರಾ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಭದ್ರತಾಪಡೆ…

 • ಜಮ್ಮು-ಕಾಶ್ಮೀರದಲ್ಲಿ ನಿಲ್ಲದ ಬೇಟೆ; ಭದ್ರತಾ ಪಡೆ ಎನ್ ಕೌಂಟರ್ ಗೆ ಇಬ್ಬರು ಉಗ್ರರು ಬಲಿ

  ಜಮ್ಮು-ಕಾಶ್ಮೀರ:ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಬೇಟೆ ಮುಂದುವರಿದಿದ್ದು, ಶನಿವಾರ ಬೆಳಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. 130 ಬೆಟಾಲಿಯನ್ ಟ್ರೂಪ್ಸ್, ಸಿಆರ್ ಪಿಎಫ್, 55…

 • ಯೋಧ ಹುತಾತ್ಮ: ಮೂವರು ಉಗ್ರರು ಫಿನಿಶ್‌; ಪುಲ್ವಾಮಾದಲ್ಲಿ ಕರ್ಫ್ಯೂ

  ಶ್ರೀನಗರ : ಜಮ್ಮು ಮತ್ತುಕಾಶ್ಮೀರದ ಪುಲ್ವಾಮಾ ದಲ್ಲಿ ಗುರುವಾರ ಬೆಳಗ್ಗೆ ಉಗ್ರರೊಂದಿಗೆ ಸೇನಾಪಡೆಗಳು ಭೀಕರ ಗುಂಡಿನ ಕಾಳಗ ನಡೆಸಿವೆ. ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ದಾಲಿ ಪೋರಾ…

 • ಉಗ್ರರನ್ನು ಹೊಡೆಯಲೂ ನಮ್ಮ ಯೋಧರು ಆಯೋಗದ ಅನುಮತಿ ಕೇಳಬೇಕಾ?

  ಖುಷಿನಗರ: ‘ನಮ್ಮ ಯೋಧರು ವೈರಿಗಳನ್ನು ಎನ್ ಕೌಂಟರ್ ಮಾಡಲು ಚುನಾವಣಾ ಆಯೋಗದ ಅನುಮತಿ ಕೇಳಬೇಕಾ ? ವಿಪಕ್ಷಗಳು ಏನು ನಾಟಕ ಮಾಡುತ್ತಿವೆ ?’ ಇದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪರಿ. ಉತ್ತರ…

 • ಪೊಲೀಸರ ಮೇಲೆ ದಾಳಿ ನಡೆಸಿದ್ದ ಮೂವರು ಜೈಶ್‌ ಉಗ್ರರು ಅರೆಸ್ಟ್‌

  ಶ್ರೀನಗರ : ಬದ್‌ಗಾಮ್‌ನ ವಾಥೋರಾದಲ್ಲಿ ಮೂವರು ಜೈಶ್‌ ಇ ಮೊಹಮದ್‌ ಉಗ್ರರನ್ನುಜಮ್ಮುಮತ್ತು ಕಾಶ್ಮೀರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಶ್ರೀನಗರದ ಎಸ್‌ಎಸ್‌ಪಿ ಡಾ ಹಸೀಬ್‌ ಮುಘಲ್‌ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆವಿವರಗಳನ್ನು ನೀಡಿದರು. ಬಂಧಿತರು ಶುಕ್ರವಾರ ಛಾನ್‌ಪೋರಾ ಎಂಬಲ್ಲಿ…

 • ಶ್ರೀನಗರ : ನಸುಕಿನ ವೇಳೆ ಇಬ್ಬರು ಉಗ್ರರು ಫಿನಿಶ್‌

  ಶ್ರೀನಗರ : ದಕ್ಷಿಣ ಕಾಶ್ಮೀರದಅನಂತ್‌ನಾಗ್‌ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಗುರುವಾರ ನಸುಕಿನ ವೇಳೆ ಸೇನಾ ಪಡೆಗಳು ಭಾರೀ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿವೆ. ಗುಪ್ತಚರ ಮಾಹಿತಿಗಳನ್ನಾಧರಿಸಿ ಸೇನಾ ಪಡೆಗಳು ಕಾರ್ಯಚರಣೆಗಿಳಿದಿದ್ದು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸಿ ಇಬ್ಬರನ್ನು ಹತ್ಯೆಗೈದಿದ್ದಾರೆ….

 • ಪಾಕ್‌ ಮೂಲದ ಕಾಶ್ಮೀರಿ ಉಗ್ರರಿಂದ ಎಲ್‌.ಒ.ಸಿ. ವ್ಯಾಪಾರ ಮಾರ್ಗ ದುರ್ಬಳಕೆ

  ಶ್ರೀನಗರ : ಜಮ್ಮು ಕಾಶ್ಮೀರ ಭಾಗದ ಒಂಭತ್ತು ಜನ ಉಗ್ರಗಾಮಿಗಳು ಭಾರತ ಪಾಕಿಸ್ಥಾನ ಗಡಿ ನಿಯಂತ್ರಣ ರೇಖೆಯ ವ್ಯಾಪಾರ ಮಾರ್ಗದ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯೊಂದನ್ನು ಭದ್ರತಾ ಅಧಿಕಾರಿಗಳು ಹೊರಗೆಡಹಿದ್ದಾರೆ. ಪ್ರಸ್ತುತ ಈ ಉಗ್ರಗಾಮಿಗಳು ಪಾಕಿಸ್ಥಾನದಲ್ಲಿದ್ದು…

 • 14 ಪ್ರಯಾಣಿಕರ ಗುಂಡಿಕ್ಕಿ ಕೊಂದ ಉಗ್ರರು

  ಕರಾಚಿ: ಪಾಕಿಸ್ಥಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಸ್ಸುಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು, ನೌಕಾ ಪಡೆಯ ಸಿಬಂದಿ ಸೇರಿ 14 ಪ್ರಯಾಣಿಕರನ್ನು ಹತ್ಯೆಗೈದಿದ್ದಾರೆ. ಗುರುವಾರ ಬೆಳಗ್ಗೆ ಕರಾಚಿಯಿಂದ ಗ್ವಾದಾರ್‌ಗೆ ತೆರಳುತ್ತಿದ್ದ 6 ಬಸ್ಸುಗಳನ್ನು ಹೆದ್ದಾರಿ ಮಧ್ಯೆ ತಡೆದ 15ರಿಂದ 20…

ಹೊಸ ಸೇರ್ಪಡೆ