ಧನಾತ್ಮಕ ವಿದ್ಯಮಾನಗಳ ಬಲ: ಮುಂಬಯಿ ಶೇರು 355 ಅಂಕಗಳ ಭರ್ಜರಿ ಏರಿಕೆ
Team Udayavani, Jul 10, 2017, 5:19 PM IST
ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ಉತ್ಸಾಹ, ದೇಶಾದ್ಯಂತ ಉತ್ತಮ ಮುಂಗಾರು ಮಳೆಯಾಗುವ ಭರವಸೆ, ಮೂರನೇ ತ್ತೈಮಾಸಿಕದ ಸಾಂಸ್ಥಿಕ ಫಲಿತಾಂಶ ಉತ್ತಮವಿರುವ ನಿರೀಕ್ಷೆ – ಮುಂತಾಗಿ ಹಲವಾರು ಧನಾತ್ಮಕ ಕಾರಣಗಳ ಬಲದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 355.01 ಅಂಕಗಳ ಭರ್ಜರಿ ಏರಿಕೆಯೊಂದಿಗೆ 31,715.64 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 105.25 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 9,771.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಎಫ್ಎಂಸಿಜಿ, ಟೆಕ್ ಮತ್ತು ಐಟಿ ರಂಗದ ಶೇರುಗಳು ಉತ್ತಮ ಖರೀದಿ ಬೆಂಬಲವನ್ನು ಪಡೆದವು. ಟಿಸಿಎಸ್ ಶೇರು, ಜು.13ರ ಫಲಿತಾಂಶಕ್ಕೆ ಮುನ್ನ ಶೇ.4.6ರಷ್ಟು ಏರಿ ಗಮನ ಸೆಳೆಯಿತು.
ಇಂದು ಒಟ್ಟು 3,015 ಶೇರುಗಳು ವಹಿವಾಟಿಗೆ ಒಳಪಟ್ಟವು; 1,654 ಶೇರುಗಳು ಮುನ್ನಡೆ ಸಾಧಿಸಿದವು; 1,200 ಶೇರುಗಳು ಹಿನ್ನಡೆಗೆ ಗುರಯಾದವು; 161 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್