ಫೆಡರರ್‌ಗೆ ದಾಖಲೆ ವಿಂಬಲ್ಡನ್‌ ಪ್ರಶಸ್ತಿ


Team Udayavani, Jul 17, 2017, 3:50 AM IST

federer.jpg

ಲಂಡನ್‌: ಸ್ವಿಸ್‌ನ ಸೂಪರ್‌ ತಾರೆ ರೋಜರ್‌ ಫೆಡರರ್‌ ದಾಖಲೆ ಎಂಟನೇ ವಿಂಬಲ್ಡನ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರಲ್ಲದೇ ಈ ಪ್ರಶಸ್ತಿ ಗೆದ್ದ ಅತೀ ಹಿರಿಯ ಆಟಗಾರ ಎಂದೆನಿಸಿಕೊಂಡಿದ್ದಾರೆ. 

ರವಿವಾರ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಫೈನಲ್‌ ಹೋರಾಟದಲ್ಲಿ ಫೆಡರರ್‌ ಅವರು ಗಾಯಗೊಂಡಿದ್ದ ಮರಿನ್‌ ಸಿಲಿಕ್‌ ಅವರನ್ನು 6-3, 6-1, 6-4 ಸೆಟ್‌ಗಳಿಂದ ಉರುಳಿಸಿದರು. ಇದು ಫೆಡರರ್‌ ಅವರ 19ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ. 35ರ ಹರೆಯದ ಫೆಡರರ್‌ ವಿಂಬಲ್ಡನ್‌ ಪ್ರಶಸ್ತಿ ಗೆದ್ದ ಅತೀ ಹಿರಿಯ ಪುರುಷ ಆಟಗಾರರಾಗಿದ್ದಾರೆ. 32ರ ಹರೆಯದ ಆರ್ಥರ್‌ ಆ್ಯಶೆ ಈ ಹಿಂದೆ 1976ರಲ್ಲಿ ಪ್ರಶಸ್ತಿ ಜಯಿಸಿದ್ದರು.

11ನೇ ವಿಂಬಲ್ಡನ್‌ ಫೈನಲ್‌ನಲ್ಲಿ ಆಡಿದ ಫೆಡರರ್‌ ಅವರು 29ನೇ ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಫೈನಲ್‌ನಲ್ಲಿ ಆಡಿದರು. ದ್ವಿತೀಯ ಸೆಟ್‌ನಲ್ಲಿ ಫೆಡರರ್‌ 3-0 ಮುನ್ನಡೆ ಸಾಧಿಸುತ್ತಲೇ ಸಿಲಿಕ್‌ ಅವರ ಕಣ್ಣಲ್ಲಿ ನೀರು ಬಂದಿತ್ತು. 2014ರ ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದ ಏಳನೇ ಶ್ರೇಯಾಂಕದ ಸಿಲಿಕ್‌ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಗುವ ಕಾರಣ ಟವಲ್‌ನಲ್ಲಿ ಮುಖವನ್ನು ಮುಚ್ಚಿ ತನ್ನ ಬೇಸರವನ್ನು ತೋರ್ಪಡಿಸಿದರು. ದ್ವಿತೀಯ ಸೆಟ್‌ನ ಅಂತ್ಯದಲ್ಲಿ ಗಾಯದಿಂದಾಗಿ ಎಡ ಪಾದಕ್ಕೆ ಬ್ಯಾಂಡೇಜ್‌ ಹಾಕಿದ್ದರು. 

ಈ ಬಾರಿಯ ವಿಂಬಲ್ಡನ್‌ ಕೂಟದಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಳ್ಳದೇ ಪ್ರಶಸ್ತಿ ಗೆದ್ದ ಸಾಧನೆಯನ್ನು ಫೆಡರರ್‌ ಮಾಡಿದರು. 1976ರಲ್ಲಿ ಬೋರ್ನ್ ಬೋರ್ಗ್‌ ಈ ಸಾಧನೆ ಮಾಡಿದ್ದರು. 

ವಿಂಬಲ್ಡನ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ
8ನೇ ಬಾರಿಗೆ ಚಾಂಪಿಯನ್‌ ಆಗುವ ಮೂಲಕ ವಿಂಬಲ್ಡನ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ ಫೆಡರರ್‌ 2012ರಲ್ಲಿ ಚಾಂಪಿಯನ್‌ ಆಗುವ ಮೂಲಕ 7ನೇ ಬಾರಿಗೆ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಪಡೆದಿದ್ದರು. ಈ ಮೂಲಕ ಇಂಗ್ಲೆಂಡ್‌ನ‌ ವಿಲಿಯಮ್‌ ರ್ಯಾನ್‌ ಶೋ, ಅಮೆರಿಕದ ಪೀಟ್‌ ಸಾಂಪ್ರಾಸ್‌ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ರವಿವಾರ 8ನೇ ಬಾರಿಗೆ ವಿಂಬಲ್ಡನ್‌ ಗೆಲ್ಲುವ ಮೂಲಕ ವಿಂಬಲ್ಡನ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿ ದಾಖಲೆ ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

1-qweewqe

Prajwal Case; ತಮ್ಮ ಹೆಸರು ಬಳಸದಂತೆ ಕೋರ್ಟ್ ತಡೆ ತಂದ ಎಚ್ ಡಿಡಿ, ಎಚ್ ಡಿಕೆ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Harbhajan Singh slams Mahendra singh Dhoni

IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ

T20 World Cup; Cricket mega event threatened by Pakistani militants

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ ಪುರುಷರ ರಿಲೇ ತಂಡ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.