ಕಾರ್ಕಳ ಮಹಾಲಿಂಗೇಶ್ವರ ದೇಗುಲದಲ್ಲಿ ಅವ್ಯವಹಾರ:ತಹಶೀಲ್ದಾರ್‌ ಪರಿಶೀಲನೆ


Team Udayavani, Jul 25, 2017, 7:15 AM IST

2407KAR12.gif

ಕಾರ್ಕಳ: ಧಾರ್ಮಿಕ ದತ್ತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪೆರ್ವಾಜೆ ಮಹಾಲಿಂಗೇಶ್ವರ ದೇಗುಲದಲ್ಲಿ ಸಾರ್ವಜನಿಕರಿಗೆ ಸೇರಿದ ಹಣವನ್ನು ಪೋಲು ಮಾಡಲಾಗಿದೆ ದೇಗುಲದಲ್ಲಿ ಅವ್ಯವಹಾರವಾಗಿದೆ ಎಂದು ಸಾರ್ವಜನಿಕರು ನೀಡಿದ ಮನವಿ ಹಾಗೂ ದೂರನ್ನು ಸಮಗ್ರವಾಗಿ ಪರಿಶೀಲಿಸುವ ನಿಟ್ಟಿನಲ್ಲಿ  ಕಾರ್ಕಳ ತಹಶೀಲ್ದಾರ್‌ ಟಿ.ಜಿ.ಗುರುಪ್ರಸಾದ್‌ ಸೋಮವಾರ ದೇಗುಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 
ಈ ಸಂದರ್ಭ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ಹಣವನ್ನು  ದೇಗುಲದ ಒಳಗಿನವರೇ ಪೋಲು ಮಾಡಿ ಅವ್ಯವಹಾರದಲ್ಲಿ ತೊಡಗಿದ್ದಾರೆ ಎನ್ನುವುದು ಸಾಬೀತಾದರೆ ಈ ಕುರಿತು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು.ಸಾರ್ವಜನಿಕರು ದೇವರ ಕೆಲಸಕ್ಕೆ ನೀಡಿದ ಹಣವನ್ನು ಈ ರೀತಿ ದುರ್ಬಳಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದರು.

ಏನು ದೂರು: ದೇಗುಲದಲ್ಲಿ ಸಂಗ್ರಹ ವಾದ ಹಣಗಳ ಬಗ್ಗೆ ಸಾರ್ವ ಜನಿಕರು ಮತ್ತು ಭಕ್ತಾದಿಗಳನ್ನು ಕತ್ತಲೆಯಲ್ಲಿಟ್ಟು ಅವ್ಯವಹಾರಗಳು ನಡೆಯುತ್ತಿವೆ. ಕಾಣಿಕೆ ಡಬ್ಬಿಗಳು ಕಾಣೆಯಾಗಿವೆ. ದೇವಸ್ಥಾನದ ಆಡಳಿತಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಂದ ಸಂಗ್ರಹವಾದ ಹಣಗಳಿಗೆ ರಶೀದಿ ನೀಡುವ ಪದ್ಧತಿ ಇಲ್ಲ, ಇಲ್ಲಿ ಸಿಸಿ ಕೆಮರಾವನ್ನು ಸ್ಥಗಿತಗೊಳಿಸಿ ಹಣ ತೆಗೆಯಲಾಗುತ್ತಿದೆ. ಭಕ್ತರಿಗೆ ಧಮ್ಕಿ ಹಾಕುವ ಸಂಪ್ರದಾಯ ನಡೆಯುತ್ತಿದೆ, ಸಭಾಭವನದ ಬಾಡಿಗೆ ಬಂದ ಮೊತ್ತದ ಯಾವುದೇ ದಾಖಲೆಗಳು ಇಲ್ಲ. ಸರಕಾರಕ್ಕೆ ತಪ್ಪು ಲೆಕ್ಕ ಪತ್ರ ಹಾಗೂ ದಾಖಲೆಗಳನ್ನು ನೀಡಲಾಗಿದೆ. ಆಡಳಿತ ದುರುಪಯೋಗ ನಡೆಯುತ್ತಿದೆ ಎಂದು ಸಾರ್ವಜನಿಕರು ತಹಶೀಲ್ದಾರ್‌ ಅವರಿಗೆ ದೂರು ನೀಡಿದ್ದರು.

ಕಾಣಿಕೆ ಡಬ್ಬಿ ಪತ್ತೆ ?
ದೇಗುಲವನ್ನು ಪರಿಶೀಲನೆ ನಡೆಸುವ ಸಂದರ್ಭದಲ್ಲಿ  ನಾಲ್ಕು ಕಾಣಿಕೆ ಡಬ್ಬಿಗಳು ಪತ್ತೆಯಾಗಿದ್ದು ಸಾರ್ವಜನಿಕರು ದೇಗುಲಕ್ಕೆ ಕಾಣಿಕೆ ರೂಪದಲ್ಲಿ ಸಲ್ಲಿಸಿದ ಹಣವನ್ನು ಅಡಗಿಸಿಟ್ಟ ಡಬ್ಬಿಗಳು ಇವೆಂದು ಹೇಳಲಾಗಿದೆ. 

ದೇಗುಲದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ದೂರಿನ ಆಧಾರದ ಮೇಲೆ ಸಮಗ್ರ ತನಿಖೆಯನ್ನು ಕೈಗೊಂಡಿದ್ದೇವೆ. ತನಿಖೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.
-ಟಿ.ಜಿ. ಗುರುಪ್ರಸಾದ್‌,  ಕಾರ್ಕಳ ತಹಶೀಲ್ದಾರ್‌

ಟಾಪ್ ನ್ಯೂಸ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

Minchu

Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.