ಕೆಎಸ್‌ಆರ್‌ಟಿಸಿ ಅರ್ಧದಷ್ಟೂ ಸಿಬ್ಬಂದಿಗೆ ವರ್ಗಾವಣೆ ಅನುಮಾನ!


Team Udayavani, Aug 3, 2017, 8:55 AM IST

ksrtc.jpg

ಬೆಂಗಳೂರು: ಸಾವಿರಾರು ಸಾರಿಗೆ ನೌಕರರು ಎದುರು ನೋಡುತ್ತಿರುವ ರಸ್ತೆ ಸಾರಿಗೆ ಅಂತರ ನಿಗಮಗಳ ವರ್ಗಾವಣೆಗೆ
ಸಂಬಂಧಿಸಿದ ಪ್ರಕ್ರಿಯೆಯ ಪ್ರಾಥಮಿಕ ಹಂತ ಪೂರ್ಣಗೊಂಡಿದ್ದು, ಒಟ್ಟಾರೆ ಆಕಾಂಕ್ಷಿಗಳ ಪೈಕಿ ಅರ್ಧದಷ್ಟೂ ಸಿಬ್ಬಂದಿಗೆ ಈ ಬಾರಿ ವರ್ಗಾವಣೆ ಭಾಗ್ಯ ಸಿಗುವುದು ಅನುಮಾನವಾಗಿದೆ.

ಅಂತರ ನಿಗಮಗಳ ವರ್ಗಾವಣೆ ಬಯಸಿ 18,978 ಅರ್ಜಿಗಳು ಬಂದಿದ್ದು, ಅವುಗಳ ವಿಂಗಡಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳೂ ಸೇರಿ ಅಬ್ಬಬ್ಟಾ ಎಂದರೆ 6ರಿಂದ 7 ಸಾವಿರ
ನೌಕರರಿಗೆ ಮಾತ್ರ ಈ ಬಾರಿ ವರ್ಗಾವಣೆ ಭಾಗ್ಯ ಸಿಗುವ ಸಾಧ್ಯತೆಯಿದೆ. ಉಳಿದವರು ಈ “ಭಾಗ್ಯ’ಕ್ಕಾಗಿ ಮತ್ತೆ ಹಲವು ವರ್ಷ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಮೊದಲ ಹಂತದಲ್ಲಿ ವರ್ಗಾವಣೆ ಸಿಗದವರ ಕತೆ ಏನು ಎಂಬುದಕ್ಕೆ ಸ್ವತಃ ಸಾರಿಗೆ ನಿಗಮ ಅಥವಾ ಸರ್ಕಾರದ ಬಳಿಯೂ ಉತ್ತರವಿಲ್ಲ. ಮತ್ತೆ ಮುಂದಿನ ವರ್ಷ ಈ ವರ್ಗಾವಣೆ ಮಾಡಬಹುದು. ಆದರೆ, ನಿರೀಕ್ಷಿತ ಪ್ರಮಾಣದ
ಹುದ್ದೆಗಳು ಲಭ್ಯ ಇರುವುದಿಲ್ಲ. ಇನ್ನು ಪ್ರತಿ ವರ್ಷ ನಿವೃತ್ತಿ ಹೊಂದುವವರ ಪ್ರಮಾಣ ಕೆಎಸ್‌ಆರ್‌ಟಿಸಿಯಲ್ಲಿ ಕೇವಲ ಶೇ. 2ರಿಂದ 3ರಷ್ಟಿದೆ. ಉಳಿದ ನಿಗಮಗಳಲ್ಲಿ ಇದಕ್ಕಿಂತ ಕಡಿಮೆ. ಹೀಗಿರುವಾಗ, ಮುಂದಿನ ಎರಡು-ಮೂರು ವರ್ಷಗಳಂತೂ
ವಂಚಿತರಿಗೆ ವರ್ಗಾವಣೆ ಸಿಗುವುದು ಕಷ್ಟಸಾಧ್ಯ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

700 ಅರ್ಜಿ ಅಸಿಂಧು: 18,978 ಅರ್ಜಿಗಳಲ್ಲಿ ಅಂದಾಜು 700 ಅರ್ಜಿಗಳು ಅಸಿಂಧುಗೊಂಡಿದ್ದು, ಇದರಲ್ಲಿ ಶೇ.80ರಷ್ಟು ತರಬೇತಿ (ಟ್ರೈನಿ) ಹಂತದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ. ಹಾಗಾಗಿ, ನಿಯಮದ ಪ್ರಕಾರ ಅವರಿಗೆ ಈ ಅಂತರ ನಿಗಮಗಳ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಉಳಿದ ಶೇ.20ರಷ್ಟು ಅರ್ಜಿಗಳು ಪುನರಾವರ್ತನೆಗೊಂಡವು ಆಗಿವೆ. ಅರ್ಜಿ ಹಾಕಿದವರೆಲ್ಲರಿಗೂ ಏಕಕಾಲದಲ್ಲಿ ವರ್ಗಾವಣೆ ಸಾಧ್ಯವಿಲ್ಲ. ಯಾಕೆಂದರೆ, ವರ್ಗಾವಣೆ ಬಯಸಿದವರಲ್ಲಿ 16 ಸಾವಿರ ಅರ್ಜಿಗಳು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದಲೇ ಬಂದಿವೆ. ಉಳಿದ 3 ಸಾವಿರ ಅರ್ಜಿಗಳು ಈಶಾನ್ಯ ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮಗಳಿಂದ ಬಂದಿವೆ.

ಅಂದರೆ ಎರಡು ಸಾರಿಗೆ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗಲು ಬಯಸಿದ್ದರಿಂದ ಅಲ್ಲಿ ಇಷ್ಟೊಂದು ಹುದ್ದೆಗಳು ಖಾಲಿಯಿಲ್ಲ. ಹಾಗಾಗಿ, ಆ ಕಡೆಯಿಂದ (ಈಶಾನ್ಯ ಮತ್ತು ವಾಯವ್ಯ ನಿಗಮಗಳು) ಬರಲು ಬಯಸಿದ 2,500-3,000
ಸಿಬ್ಬಂದಿ ಮತ್ತು ಖಾಲಿ ಇರುವ ಹುದ್ದೆಗಳು ಸೇರಿ 6ರಿಂದ 7 ಸಾವಿರ ಸಿಬ್ಬಂದಿ ವರ್ಗಾವಣೆ ಆಗಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ “ಉದಯವಾಣಿ’ಗೆ ತಿಳಿಸಿದರು.

ಬಿಎಂಟಿಸಿಯಿಂದ ಕೆಲವರು ಕೆಎಸ್‌ಆರ್‌ಟಿಸಿಗೂ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ನಗರದಲ್ಲಿ ಜೀವನ ವೆಚ್ಚ ದುಬಾರಿ. ಸಂಚಾರದಟ್ಟಣೆಯಲ್ಲಿ ಚಾಲಕ-ನಿರ್ವಾಹಕರು ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಾರೆ. ಕೊನೇಪಕ್ಷ ಕೆಎಸ್‌ಆರ್‌ಟಿಸಿಗೆ ವರ್ಗಾವಣೆಗೊಂಡರೆ, ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಬಹುದು ಎಂಬುದು ಸಿಬ್ಬಂದಿ ಲೆಕ್ಕಾಚಾರ.
ತಗ್ಗಲಿದೆ ಆರ್ಥಿಕ ಹೊರೆ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ನಿಗಮಗಳಿಗೆ ವರ್ಗಾವಣೆ ಆಗುತ್ತಿರುವುದರಿಂದ ಈ ಎರಡೂ ನಿಗಮಗಳಿಗೆ ಆರ್ಥಿಕ ಹೊರೆ ಕೂಡ ತಗ್ಗಲಿದೆ ಎಂದು ಲೆಕ್ಕಪತ್ರ ವಿಭಾಗದ
ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಅಂತರ ನಿಗಮಗಳ ವರ್ಗಾವಣೆಯಲ್ಲಿ ಸೇವಾ ಹಿರಿತನ ಇರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಾಗಾಗಿ, ಸಾಮಾನ್ಯವಾಗಿ ವರ್ಗಾವಣೆ ಹೊಂದುವವರ ಮಾಸಿಕ ವೇತನ ಹೆಚ್ಚು-ಕಡಿಮೆ 40 ಸಾವಿರ ರೂ. ಇರುತ್ತದೆ. ಈಗ
ಅದೇ ಮೊತ್ತದಲ್ಲಿ ಇಬ್ಬರು ನೌಕರರು ಬರುತ್ತಾರೆ. ಈ ನಿಟ್ಟಿನಲ್ಲಿ ತುಸು ಆರ್ಥಿಕ ಹೊರೆ ತಗ್ಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಟಾಪ್ ನ್ಯೂಸ್

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

ಶಿವರಾಮೇಗೌಡ

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.