ಶಬರಿಮಲೆ ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ
Team Udayavani, Aug 8, 2017, 6:00 AM IST
ತಿರುವನಂತಪುರ: ಕೇರಳ ಸರಕಾರದ ಮಹತ್ವಾಕಾಂಕ್ಷೆಯ ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿ ಒಂದು ಹೆಜ್ಜೆ ಮುಂದಿಟ್ಟಿರುವ ಸರಕಾರ, ಈ ಕುರಿತ ಸಾಧ್ಯಾಸಾಧ್ಯತೆ ಅಧ್ಯಯನಕ್ಕೆ ತಂಡವೊಂದನ್ನು ರಚಿಸಿದೆ.
ಶಬರಿಮಲೆಯಿಂದ 48 ಕಿಮೀ ದೂರದ ಚೆರುವಲ್ಲಿ ಎಸ್ಟೇಟ್ನ 2,263 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಗ್ರೀನ್ಫೀಲ್ಡ್ ನಿರ್ಮಿಸಲು ಸಾಧ್ಯವೇ ಎಂದು ಈ ತಂಡ ಪರಿಶೀಲಿಸಲಿದೆ. ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ಸಹಯೋಗ ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.