ಬೆಳ್ತಂಗಡಿ: ಪಶುವೈದ್ಯರ ಕೊರತೆ-ಹೈರಾಣಾಗಿರುವ ಹೈನುಗಾರರು


Team Udayavani, Aug 8, 2017, 8:35 AM IST

doctor.jpg

ಬೆಳ್ತಂಗಡಿ:  ಹೈನುಗಾರಿಕೆಗೆ ನಾನಾ ರೀತಿಯ ಪ್ರೋತ್ಸಾಹ ಕ್ರಮಗಳನ್ನು ಸರಕಾರಗಳು ಕೈಗೊಂಡಿವೆ. ಆದರೂ ಹೈನುಗಾರರು ಎದುರಿಸುತ್ತಿರುವ ಕೆಲವೊಂದು ಪ್ರಮುಖ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಇದರಲ್ಲಿ ಈಗೀಗ ಹೆಚ್ಚು ಕಾಡುತ್ತಿರುವ ತೊಂದರೆ ಎಂದರೆ ಅದು ಪಶುವೈದ್ಯರದ್ದು.

ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಜಾನುವಾರುಗಳನ್ನು ಕಳೆದುಕೊಂಡು ಆರ್ಥಿಕವಾಗಿ ನಷ್ಟ ಹೊಂದುತ್ತಿರುವ ಅನೇಕರ ರೈತರು ಹೈನುಗಾರಿಕೆಯಿಂದ ವಿಮುಖರಾಗಬೇಕೆಂದು ಚಿಂತಿಸಿದ್ದೂ ಇದೆ.   ಹಾಲು ಉತ್ಪಾದನೆ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಜಾನುವಾರಗಳ ಜೀವ ಉಳಿಸಿಕೊಳ್ಳಲು ಕೂಡ ಆಗದ ಸ್ಥಿತಿ ಕೆಲವೊಮ್ಮೆ ಬಂದೊದಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಹೈನುಗಾರರು.  ಬೆಳ್ತಂಗಡಿ ತಾಲೂಕಿನಲ್ಲಿ ಅಗತ್ಯಕ್ಕಿಂತ ತೀರ ಕಡಿಮೆ ಪ್ರಮಾಣದಲ್ಲಿರುವ ಪಶು ವೈದ್ಯರು ಸೂಕ್ತ ಸಮಯದಲ್ಲಿ ಕೈಗೆ ಸಿಗುತ್ತಿಲ್ಲ ಎಂಬ ದೂರು ಪ್ರತಿನಿತ್ಯ ಎಂಬಂತಾಗಿದೆ.

81 ಹಳ್ಳಿಗಳಿಗೆ ಐವರು ಪಶು ವೈದ್ಯರು
ಬೆಳ್ತಂಗಡಿ ತಾಲೂಕಿನಲ್ಲಿ 81 ಹಳ್ಳಿಗಳಿದ್ದು ತಾಲೂಕಿನಲ್ಲಿ ಅ ಧಿಕೃತವಾಗಿ ಕೇವಲ ಐವರು ಪಶು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳ್ತಂಗಡಿ, ಚಾರ್ಮಾಡಿ, ವೇಣೂರು, ನೆರಿಯಾ, ಉಜಿರೆಯಲ್ಲಿ  ಮಾತ್ರ ಪಶು ವೈದ್ಯರ ಸೇವೆ ಲಭ್ಯವಿರುತ್ತದೆ.

ಇಲ್ಲಿ ವೈದ್ಯರೇ ಇಲ್ಲ
ಧರ್ಮಸ್ಥಳ, ಮಡಂತ್ಯಾರು, ಬಾರ್ಯ, ನಾರಾವಿ, ಅಂಡಿಂಜೆಯಲ್ಲಿ ಪಶು ಆಸ್ಪತ್ರೆಗಳಿದೆಯಾದರೂ ಪಶು ವೈದ್ಯರುಗಳೇ ಇಲ್ಲ. ಇರುವ ವೈದ್ಯರುಗಳಿಗೆ ಹೆಚ್ಚುವರಿ ಹೊರೆ ಇರುವುದರಿಂದ ಈ ಭಾಗದ ಜನರಿಗೆ ಪಶು ವೈದ್ಯರ ಸೇವೆ ದೊರೆಯುವಾಗ ವಿಳಂಬವಾಗುತ್ತಿದೆ.

ಪಶು ವೈದ್ಯ ಪರೀಕ್ಷರ ಕೊರತೆ
ಪಶು ಆಸ್ಪತ್ರೆ, ಪ್ರಾಥಮಿಕ ಪಶ ಚಿಕಿತ್ಸಾ ಕೇಂದ್ರ ಸೇರಿದಂತೆ ಒಟ್ಟು 20 ಪಶು ವೈದ್ಯ ಸಂಸ್ಥೆಗಳಿವೆ. ಈ ಎಲ್ಲ ಸಂಸ್ಥೆಗಳಲ್ಲೂ ಸಿಬಂದಿಗಳ ಕೊರತೆ ಇದೆ. ತುರ್ತು ವೈದ್ಯರು ಅಲಭ್ಯರಾದ ಸಂದರ್ಭದಲ್ಲಿ ಪಶು ವೈದ್ಯ ಪರೀಕ್ಷರ ನೆರವು ಅಗತ್ಯವಿದೆ.ಆದರೆ ತಾಲೂಕಿನಲ್ಲಿ ಪಶು ವೈದ್ಯ ಪರೀಕ್ಷರಿಗೂ ಮೂರು ನಾಲ್ಕು ಹಳ್ಳಿಗಳ ಜವಾಬ್ದಾರಿ ನೀಡಲಾಗಿದ್ದು ಜನರ ಮೊರೆಗೆ ಶೀಘ್ರ ಸ್ಪಂದನೆಗೆ ಕಷ್ಟದಾಯಕವಾಗಿದೆ.

ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಪಶು ಪರೀಕ್ಷಕರೂ ಇಲ್ಲ. ತಾಲೂಕಿನೆಲ್ಲೆಡೆ ಒಟ್ಟು 80 ಜನ ಸಿಬ್ಬಂದಿ ಅಗತ್ಯ ಇದೆ. ಪ್ರಸ್ತುತ 21 ಮಂದಿ ಸಿಬ್ಬಂದಿ ಮಾತ್ರ ಇದ್ದಾರೆ. ತುರ್ತು ಸಂದರ್ಭದಲ್ಲಿ ಪಶು ವೈದ್ಯ ಪರೀಕ್ಷರ ನೆರವು ಅಗತ್ಯವಿದ್ದು ಕ್ಲಪ್ತ ಸಮಯಕ್ಕೆ ಯಾರೂ ಕೈಗೆಟುದಿರುವುದು ಖೇದಕರ.

ಗೋ ಕಳ್ಳತನ
ಈ ಮಧ್ಯೆಯೇ ತಾಲೂಕಿನ ವಿವಿಧೆಡೆ ಅವ್ಯಾಹತವಾಗಿ ನಡೆಯುತ್ತಿರುವ ಗೋ ಕಳ್ಳತನ ಕೂಡಾ ಹೆ„ನುಗಾರರನ್ನು ಹೆ„ರಾಣಾಗಿಸಿದೆ. ಪ್ರಗತಿಪರ ಕೃಷಿಕ, 60ಕ್ಕೂ ಹೆಚ್ಚು ತಳಿಯ ಭತ್ತದ ಸಂರಕ್ಷಕ, ರಾಷ್ಟ್ರಪ್ರಶಸ್ತಿ ವಿಜೇತ ಕಿಲ್ಲೂರಿನ ಬಿ.ಕೆ. ದೇವರಾವ್‌ ಅವರ ಮನೆಯಿಂದಲೂ ಗೋ ಕಳ್ಳತನ ನಡೆದಿದೆ. ಪೊಲೀಸ್‌ ಠಾಣೆಗೆ ದೂರು ನೀಡಲು ಹೋದರೆ ಎರಡು ತಾಸಿಗೂ ಹೆಚ್ಚು ಕಾಲ ಅವರನ್ನು ಕುಳ್ಳಿರಿಸಿ ದೂರು ಸ್ವೀಕಾರಕ್ಕೆ ಬೇಕೋಬೇಡವೋ ಎಂದು ಉದಾಸೀನ ತೋರಿಸಿದ ಘಟನೆಯೂ ನಡೆದಿದೆ. ಚಾರ್ಮಾಡಿ ಮೂಲಕ ಘಟ್ಟದಿಂದ ಸದಾ ಕಳ್ಳತನವಾದ ಗೋವುಗಳ ಸಆಗಾಟ ನಡೆಯುತ್ತಲೇ ಇರುತ್ತದೆ. ನಗರದ ರಸ್ತೆಗಳಲ್ಲಿ ಬೀಡಾಡಿಯಾಗಿ ತಿರುಗುತ್ತಿದ್ದ ಹಸುಗಳಿಗೆ ಮಾತ್ರ ಎರವಾಗುತ್ತಿದ್ದ ಕಂಟಕ ಈಗ ಹಳ್ಳಿ ಹಳ್ಳಿಗಳ ಹಟ್ಟಿಗೆ ನುಗ್ಗಿದೆ. ಮಾರಕಾಸ್ತ್ರ ಹಿಡಿದು ಬೆದರಿಸಿ ಮನೆಯವರು ಇದ್ದಾಗಲೇ ಹಸುಗಳನ್ನು ಕದಿಯುವ ಘಟನೆಗಳೂ ಹೆಚ್ಚಾಗಿದೆ. ಕಡಿವಾಣ ಹಾಕಬೇಕಾದವರು ಮೌನಕ್ಕೆ ಶರಣಾದರೆ ಅನಾಹುತ ಕಟ್ಟಿಟ್ಟ ಬುತ್ತಿ. ಪಶುವೈದ್ಯರ ಕೊರತೆ ನೀಗಿದರೆ ಹೈನುಗಾರರು ಮುಖ್ಯ ತೊಂದರೆಯಿಂದ ಮುಕ್ತರಾಗಬಹುದು. ಸರಕಾರ ತುರ್ತು ಗಮನಹರಿಸಲಿ.
ಚಂದ್ರಶೇಖರ್‌ ಎಸ್‌. ಅಂತರ

ಬೆಳ್ತಂಗಡಿಗೆ ನೇಮಕಾತಿಯಾಗಿಲ್ಲ
ಬಂಟ್ವಾಳ, ಮಂಗಳೂರು ಮತ್ತಿತರ ಕಡೆಗಳಿಗೆ ವೈದ್ಯರ ನೇಮಕಾತಿಯಾಗುತ್ತಿದೆ. ಆದರೆ ಬೆಳ್ತಂಗಡಿಗೆ ಮಾತ್ರ ನೇಮಕಾತಿಯಾಗಿಲ್ಲ. ಇದೊಂದು ದೊಡ್ಡ ತಾಲೂಕಾಗಿದ್ದು ಕನಿಷ್ಠ 10 ಜನರು ಅ ಧಿಕೃತ ವೈದ್ಯರಾದರೂ ಬೇಕು. ಈ ಬಗ್ಗೆ ತುರ್ತಾಗಿ ಇಲಾಖೆ ಸ್ಪಂದಿಸಬೇಕಿದೆ.
– ಡಾ| ರತ್ನಾಕರ  ಮಲ್ಯ, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಬೆಳ್ತಂಗಡಿ

ಟಾಪ್ ನ್ಯೂಸ್

2-sslc

SSLC Result: ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

2-sslc

SSLC Result: ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.