ಶಾಲೆಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ; ಸುಪ್ರೀಂನಲ್ಲಿ ಅರ್ಜಿ ವಜಾ
Team Udayavani, Aug 8, 2017, 2:02 PM IST
ನವದೆಹಲಿ:ದೇಶಾದ್ಯಂತ 1ರಿಂದ 8ನೇ ತರಗತಿವರೆಗೆ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಶಾಲೆಯಲ್ಲಿ ಏನು ಕಲಿಸಬೇಕೆಂಬುದನ್ನು ಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲ, ಇಂತಹ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಮಾತ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ.
ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಕಡ್ಡಾಯಗೊಳಿಸಬೇಕೆಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ನ ಜಸ್ಟೀಸ್ ಎಂಬಿ ಲೋಕುರ್ ನೇತೃತ್ವದ ಪೀಠ ವಜಾಗೊಳಿಸಿದೆ. ಶಾಲೆಗಳಲ್ಲಿ ಯಾವ ವಿಷಯವನ್ನು ಬೋಧಿಸಬೇಕೆಂದು ನಾವ್ಯಾರು ಹೇಳಲು ಸಾಧ್ಯವಿಲ್ಲ. ಇದು ನಮ್ಮ ಕೆಲಸವಲ್ಲ.ಹಾಗಾಗಿ ನಾವು ಹೇಗೆ ನಿರ್ದೇಶನ ನೀಡಲು ಸಾಧ್ಯ ಎಂದು ಪೀಠ ಪ್ರಶ್ನಿಸಿದೆ.