ಬಸ್ನಲ್ಲಿ 10 ರೂ. ನಾಣ್ಯ ಸ್ವೀಕಾರ್ಹ ಕಡ್ಡಾಯ
Team Udayavani, Aug 30, 2017, 8:40 AM IST
ಮಂಗಳೂರು: ನಗರದ ಸಿಟಿ/ಸರ್ವಿಸ್ ಬಸ್ಸುಗಳಲ್ಲಿ ನಿರ್ವಾಹಕರು 10 ರೂ. ನಾಣ್ಯವನ್ನು ನಿರಾಕರಿಸುತ್ತಿರುವುದು ಪ್ರಯಾಣಿಕರಿಂದ ಆರ್ಟಿಓ ಕಚೇರಿಗೆ ದೂರು ಬಂದ ಹಿನ್ನಲೆಯಲ್ಲಿ ನಗರದ ಸಿಟಿ/ಸರ್ವಿಸ್ ಬಸ್ಸಿನ ನಿರ್ವಾಹಕರು 10 ರೂ. ನಾಣ್ಯವನ್ನು ಸ್ವೀಕರಿಸಬೇಕು ಎಂದು ಉಪ ಸಾರಿಗೆ ಆಯುಕ್ತರು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, (ಪ್ರಭಾರ), ಮಂಗಳೂರು ದ.ಕ. ಇವರ ಪ್ರಕಟನೆ ತಿಳಿಸಿದೆ.