ಯುಎಸ್‌ ಸಾಮ್ರಾಜ್ಯಕ್ಕೆ ನಡಾಲ್‌ ಸಾಮ್ರಾಟ್‌

Team Udayavani, Sep 12, 2017, 6:20 AM IST

Rafael-Nadal,-US-Open-Champ.jpg

ನ್ಯೂಯಾರ್ಕ್‌: ವಿಶ್ವದ ನಂಬರ್‌ ವನ್‌ ಟೆನಿಸಿಗ, ಸ್ಪೇನಿನ ರಫೆಲ್‌ ನಡಾಲ್‌ ನ್ಯೂಯಾರ್ಕ್‌ನಲ್ಲಿ “ಯುಎಸ್‌ ಓಪನ್‌ ಚಾಂಪಿಯನ್‌’ ನಗುವನ್ನು ಹೊಮ್ಮಿಸಿದ್ದಾರೆ. ರವಿವಾರ ಪ್ರಶಸ್ತಿ ಕಾಳಗದಲ್ಲಿ, ಇದೇ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲಿಗೆ ಬಂದ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ಅವರನ್ನು ನಡಾಲ್‌ 6 3, 6 3, 6 4 ನೇರ ಸೆಟ್‌ಗಳಿಂದ ಸುಲಭದಲ್ಲಿ ಹಿಮ್ಮೆಟ್ಟಿಸಿದರು.

ಇದು ರಫೆಲ್‌ ನಡಾಲ್‌ ಗೆದ್ದ 3ನೇ ಯುಎಸ್‌ ಓಪನ್‌ ಪ್ರಶಸ್ತಿಯಾದರೆ, ಒಟ್ಟಾರೆಯಾಗಿ ಏರಿಸಿಕೊಂಡ 16ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ. ಈ ಲೆಕ್ಕಾಚಾರದಲ್ಲಿ, ಪುರುಷರ ವಿಭಾಗದಲ್ಲಿ ನಡಾಲ್‌ಗಿಂತ ಮುಂದಿರುವ ಏಕೈಕ ಆಟಗಾರನೆಂದರೆ ರೋಜರ್‌ ಫೆಡರರ್‌ (19).

2017ರಲ್ಲೇ ಮರಳಿ ನಂ.1 ಪಟ್ಟ ಅಲಂಕರಿಸಿದ ರಫೆಲ್‌ ನಡಾಲ್‌ ಈ ವರ್ಷ ಗೆದ್ದ 2ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಇದಾಗಿದೆ. ಫ್ರೆಂಚ್‌ ಓಪನ್‌ನಲ್ಲಿ ಸ್ಟಾನಿಸ್ಲಾಸ್‌ ವಾವ್ರಿಂಕ ಅವರನ್ನು ಮಣಿಸುವ ಮೂಲಕ ದಾಖಲೆ 10ನೇ ಸಲ “ರೊಲ್ಯಾಂಡ್‌ ಗ್ಯಾರಸ್‌ ಕಿಂಗ್‌’ ಆಗಿ ಮೂಡಿಬಂದಿದ್ದರು.

ಹಿಂದಿನ ಎದುರಾಳಿ ಜೊಕೋ
ರಫೆಲ್‌ ನಡಾಲ್‌ ಇದಕ್ಕೂ ಮುನ್ನ 2010 ಮತ್ತು 2013ರಲ್ಲಿ ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದರು. ಹಿಂದಿನೆರಡೂ ಸಲ ಅವರು ಫೈನಲ್‌ನಲ್ಲಿ ನೊವಾಕ್‌ ಜೊಕೋವಿಕ್‌ ಅವರನ್ನು 4 ಸೆಟ್‌ಗಳ ಕಾದಾಟದಲ್ಲಿ ಮಣಿಸಿದ್ದರು. ಈವರೆಗೆ ಒಟ್ಟು 23 ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ್ದು, 7 ಸಲ ಪ್ರಶಸ್ತಿ ವಂಚಿತರಾಗಿದ್ದಾರೆ.

ಜೊಕೋವಿಕ್‌, ಮರ್ರೆ, ವಾವ್ರಿಂಕ ಮೊದಲಾದ ಸ್ಟಾರ್‌ ಟೆನಿಸಿಗರು ಗಾಯಾಳಾಗಿ ಈ ಬಾರಿಯ ಯುಎಸ್‌ ಓಪನ್‌ನಿಂದ ಹಿಂದೆ ಸರಿದುದರಿಂದ ರೋಜರ್‌ ಫೆಡರರ್‌ ಮತ್ತು ರಫೆಲ್‌ ನಡಾಲ್‌ ನೆಚ್ಚಿನ ಆಟಗಾರರಾಗಿದ್ದರು. ಆದರೆ ಫೆಡರರ್‌ ಕ್ವಾರ್ಟರ್‌ ಫೈನಲ್‌ನಲ್ಲೇ ಹೊರಬಿದ್ದರು. ಕೆವಿನ್‌ ಆ್ಯಂಡರ್ಸನ್‌ ಅಚ್ಚರಿಯೆಂಬಂತೆ ಫೈನಲಿಗೆ ಏರಿ ಬಂದರು. ಇವರೆದುರು ನಡಾಲ್‌ ಸೊಲುವ ಪ್ರಶ್ನೆಯೇ ಇಲ್ಲ ಎಂಬ ಟೆನಿಸ್‌ ಪಂಡಿತರ ಲೆಕ್ಕಾಚಾರ ಸುಳ್ಳಾಗಲಿಲ್ಲ!
“ವೈಯಕ್ತಿಕವಾಗಿ ಹೇಳುವುದಾದರೆ ಈ ವರ್ಷದಲ್ಲಿ ಏನು ಸಂಭವಿಸಿತೋ ಅದನ್ನು ನಾನು ನಂಬುವ ಸ್ಥಿತಿಯಲ್ಲಿಲ್ಲ. 2 ವರ್ಷಗಳ ಗಾಯದ ಸಮಸ್ಯೆಯಿಂದಾಗಿ ನನಗೆ ಅಷ್ಟೇನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೂ 2 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ನನ್ನ ಪಾಲಾಯಿತು…’ ಎಂಬುದಾಗಿ ರಫೆಲ್‌ ನಡಾಲ್‌ ಪ್ರತಿಕ್ರಿಯಿಸಿದ್ದಾರೆ.

“ನಡಾಲ್‌ ನನ್ನ ಐಡಲ್‌’
32ರಷ್ಟು ಕೆಳ ರ್‍ಯಾಂಕಿಂಗಿನ ಕೆವಿನ್‌ ಆ್ಯಂಡರ್ಸನ್‌ ಈವರೆಗೆ ಗ್ರ್ಯಾನ್‌ಸ್ಲಾಮ್‌ನಲ್ಲಿ ಕ್ವಾರ್ಟರ್‌ ಫೈನಲ್‌ ದಾಟಿದವರಲ್ಲ. ಅವರು ಫೈನಲ್‌ ತಲುಪಲು 34 ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಗಳ ತನಕ ಕಾಯಬೇಕಾಯಿತು.
“ನಡಾಲ್‌, ನೀವು ನನ್ನ ಪಾಲಿನ ನಿಜವಾದ ಐಡಲ್‌. ನಿಮ್ಮೆದುರು ಆಡುವುದು ಅತ್ಯಂತ ಕಷ್ಟ. ಅದು ಈ ರಾತ್ರಿ ಸಾಬೀತಾಯಿತು. ನಾವಿಬ್ಬರೂ ಒಂದೇ ವಯಸ್ಸಿನವರು. ಆದರೆ ಜೀವಮಾನವಿಡೀ ನಿಮ್ಮ ಆಟವನ್ನು ಆಸ್ವಾದಿಸುತ್ತಲೇ ಬಂದಂತೆ ನನಗನಿಸುತ್ತದೆ…’ ಎಂಬುದು ಗ್ರ್ಯಾನ್‌ಸ್ಲಾಮ್‌ ಚರಿತ್ರೆಯಲ್ಲೇ ಫೈನಲ್‌ ತಲುಪಿದ ಅತ್ಯಂತ ಎತ್ತರದ ಆಟಗಾರನಾದ (6 ಅಡಿ, 8 ಇಂಚು) ಕೆವಿನ್‌ ಆ್ಯಂಡರ್ಸನ್‌ ಪ್ರತಿಕ್ರಿಯೆ.

ಟಾಪ್ ನ್ಯೂಸ್

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.