ಅಕ್ಷರ ದಾಸೋಹಕ್ಕೆ ಶಿವರಾತ್ರಿ ರಾಜೇಂದ್ರ ಶ್ರೀ ಮುನ್ನುಡಿ


Team Udayavani, Sep 19, 2017, 12:44 PM IST

mys6.jpg

ತಿ.ನರಸೀಪುರ: ಸರಳತೆ ಜೀವನವನ್ನು ನಡೆಸುತ್ತಾ ಸಾಮಾಜಿಕ ಸಮಸ್ಯೆಗಳನ್ನು ಅರಿತಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಸುತ್ತೂರು ಮಠದಲ್ಲಿ ಅಕ್ಷರ ದಾಸೋಹಕ್ಕೆ ಮುನ್ನುಡಿ ಬರೆದರು ಎಂದು  ವಾಟಾಳು ಮಠದ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ನಡೆದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 102ನೇ ವರ್ಷದ ಜಯಂತಿ ಉದ್ಘಾಟಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ತಾವೊಬ್ಬ ಧಾರ್ಮಿಕ ಗುರು ಎಂಬ ಭಾವನೆ ಹೊಂದಿರದ ಶಿವರಾತ್ರಿ ರಾಜೇಂದ್ರ ಶ್ರೀಗಳು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಸಾಮಾನ್ಯರಂತೆ ನಡೆದುಕೊಳ್ಳುತ್ತಿದ್ದರು. ದೀನ ದಲಿತರ ಕಷ್ಟಕರ ಬದುಕನ್ನು ಹತ್ತಿರದಿಂದ ಕಂಡಿದ್ದರಿಂದ ಸುತ್ತೂರು ಮಠದಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ತೆರೆದರು ಎಂದರು.

ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಂತಹ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಸರಳತೆ ಬದುಕು ಜನರಿಗೆ ಹೆಚ್ಚು ಇಷ್ಟವಾಗಿದ್ದರಿಂದ ಹೆಚ್ಚಿನ ಭಕ್ತ ಸಮೂಹವನ್ನು ಇಂದಿಗೂ ಹೊಂದಿದ್ದಾರೆ. ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳಿಗೆ ಭದ್ರಬುನಾದಿಯನ್ನು ಹಾಕಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ಕೊಟ್ಟು ಹಾಗೂ ಸಾವಿರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆಂದರು.

 ವಿಚಾರವಾದಿ ಕೆ.ಎನ್‌.ಪ್ರಭುಸ್ವಾಮಿ, ಯುದ್ಧದಲ್ಲಿ ಸರ್ವಶ್ವವನ್ನೂ ಕಳೆದುಕೊಂಡ ರಾಜನಿಗೆ ತಪಸ್ಸಿನಲ್ಲಿ ನಿರತರಾಗಿದ್ದ ಮಹರ್ಷಿಯೊಬ್ಬರು ವೃಕ್ಷವೊಂದರಿಂದ ಮತ್ತೆ ಎಲ್ಲವನ್ನೂ ಪಡೆಯಲು ಸೂಚನೆ ನೀಡಿದಂತೆ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ಬೃಹದಾಕಾರವಾಗಿ ವಿಶ್ವದೆಲ್ಲೆಡೆ ಬೆಳೆಯಲು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಅವಿರತವಾದ ತಪಸ್ಸಿನ ಶ್ರಮವಿದೆ.

ಸುತ್ತೂರಿನಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಗಳು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಲು ಪ್ರಥಮ ಬಾರಿಗೆ ಪ್ರವೇಶಾತಿ ನೀಡುವ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ಕಲ್ಪಿಸಿದರು ಎಂದು ತಿಳಿಸಿದರು. ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕ ಆರ್‌.ಮಂಜುನಾಥ್‌, ಸಂಯೋಜನಾಧಿಕಾರಿ ಜಿ.ಎನ್‌.ತ್ರಿಪುರಾಂತಕ ಶ್ರೀಗಳ ಜೀವನ ಕುರಿತು ವಿಸ್ತಾರವಾಗಿ ತಿಳಿಸಿಕೊಟ್ಟರು. 

ಮೇದನಿ ಮಠ ಶಿವಲಿಂಗಸ್ವಾಮಿ ಸ್ವಾಮೀಜಿ, ಎಂ.ಎಲ್‌.ಹುಂಡಿ ಮಠದ ಗೌರಿಶಂಕರ ಸ್ವಾಮೀಜಿ, ಮಾಡ್ರಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತಿರುಮಕೂಡಲು ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಹೊಸೂರುಹುಂಡಿ ಮಠದ ರಾಜಶೇಖರ ಸ್ವಾಮೀಜಿ, ಬೆನಕನಹಳ್ಳಿ ಮಠದ ಮಹದೇವಸ್ವಾಮಿ ಸ್ವಾಮೀಜಿ, ಪ್ರಗತಿಪರ ರೈತ ಮಾಡ್ರಳ್ಳಿ ಶಂಕರ್‌ಗುರು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ಎಸ್‌.ಶಿವಮೂರ್ತಿ, ವೀರಶೈವ ಮಹಾಸಭಾ ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ಶ್ರೀಮಹದೇಶ್ವರ ಭವನ ಮಾಲಿಕ ಹೊಟೇಲ್‌ ರಾಜಣ್ಣ(ಲಿಂಗರಾಜು) ಮತ್ತಿತರರಿದ್ದರು.

ಟಾಪ್ ನ್ಯೂಸ್

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

6-hunsur

Hunsur: ನಾಗರಹೊಳೆಯಲ್ಲಿ ಗುಂಡಿಕ್ಕಿ ಅಪರೂಪದ ಕೂರ ಭೇಟೆಯಾಡಿದ್ದ ಇಬ್ಬರ ಬಂಧನ; ಓರ್ವ ಪರಾರಿ

3-hunsur

Hunsur: ಅತಿಯಾದ ಮದ್ಯ ಸೇವನೆ; ಯುವಕ ಸಾವು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

1-eewewqe

Attack; ಹಾರ ಹಾಕುವ ನೆಪದಲ್ಲಿ ಕೈ ಅಭ್ಯರ್ಥಿ ಕನ್ಹಯ್ಯ ಮೇಲೆ ದಾಳಿ!

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.