ಪಲಿಮಾರು ಶ್ರೀಗಳಿಗೆ ಗೌರವಾರ್ಪಣೆ

Team Udayavani, Sep 28, 2017, 3:34 PM IST

27-Mum02b.jpg

ಮುಂಬಯಿ: ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ  ಮುಂದಿನ ಪರ್ಯಾಯ ಸ್ವೀಕರಿಸಲಿದ್ದು, ಈ ಸಂದರ್ಭವಾಗಿ ಒಂದು ತಿಂಗಳ ಕಾಲ ಮುಂಬಯಿ ನಗರದಲ್ಲಿ ಮೊಕ್ಕಾಂ ಹೂಡಿರುವ ಶ್ರೀಗಳನ್ನು ಪಲಿಮಾರು ಮೇಗಿನ ಮನೆ ಕುಟುಂಬಸ್ಥರು ಮತ್ತು ಮೂಲ್ಕಿ ಪಡುಮನೆ ಕುಟುಂಬಸ್ಥರು ಅಂಧೇರಿ ಪಶ್ಚಿಮದ ಕರಿಷ್ಮಾ ಕ್ಯಾಟರರ್ನ ಆಡಳಿತದಲ್ಲಿರುವ ಪಟಾರೆ ಪ್ರಭು ಟ್ರಸ್ಟ್‌ ಹಾಲ್‌ನಲ್ಲಿ ಗೌರವ ಪೂರ್ವಕವಾಗಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪೂಜ್ಯ ಶ್ರೀಗಳು, ಪಲಿಮಾರು ಎಂಬ ಹಳ್ಳಿಯಿಂದ ಈ ಮಹಾನಗರಕ್ಕೆ ವಲಸೆ ಬಂದು ಕಷ್ಟ, ಶ್ರದ್ಧೆಯಿಂದ ಬದುಕು ಕಟ್ಟಿ ಸಂಪಾದಿಸಿದ ಬಹುಪಾಲು ಊರಿನ ಅಭಿವೃದ್ಧಿಗೆ ಸೇರಿಕೊಂಡಿದೆ. 

ಪಲಿಮಾರಿನಲ್ಲಿರುವಷ್ಟು ದೇವಸ್ಥಾನ, ದೈವಸ್ಥಾನಗಳು ಜಿಲ್ಲೆಯಲ್ಲಿ ಎಲ್ಲೂ ಇಲ್ಲ. ಪ್ರೀತಿಯ ಭಾಷೆಗೆ ಮಹತ್ವವಿದೆ. ನನ್ನನ್ನು ಅಭಿಮಾನದಿಂದ ಆಹ್ವಾನಿಸಿ ಪ್ರೀತಿಯ ದ್ಯೋತಕವಾಗಿ ಸಮರ್ಪಿಸಿದ ಈ ಗೌರವ ಶ್ರೀ ಕೃಷ್ಣನಿಗೆ ಅರ್ಪಣೆ. ಬದುಕಿನಲ್ಲಿ ಯಾವುದೇ ವೃತ್ತಿ ಮಾಡಿದರೆ ಅದರಲ್ಲಿ ದೇವರನ್ನು ಕಾಣುವಂತಾಗಬೇಕು. ದೇವರ ಮೇಲೆ ನಂಬಿಕೆ ನಮ್ಮ ಪ್ರತಿಯೊಂದು ಕಾರ್ಯಕ್ಕೆ ರಕ್ಷಣೆಯಾಗುತ್ತದೆ. ನಂಬಿಕೆ, ವಿಶ್ವಾಸ ದೇವರ ಮೇಲೆ ಇದ್ದಾಗ ಅದು ದೇವರ ಚಿತ್ತಕ್ಕೆ ಬಂದಾಗ ಎಲ್ಲಾ ಕೆಲಸವು ಪೂರ್ಣವಾಗುತ್ತದೆ. ಪಲಿಮಾರು ಶ್ರೀಗಳ ಪರ್ಯಾಯವೆಂದರೆ ಅದು ಪಲಿಮಾರು ಊರಿಗೆ ಸಲ್ಲುವಂಥದ್ದು. ಪರ್ಯಾಯ ಸಂದರ್ಭದಲ್ಲಿ ಅಪಾರ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪಲಿಮಾರು ಮಠದ ಡಾ| ವಂಶಿಕೃಷ್ಣ ಆಚಾರ್ಯ ಪುರೋಹಿತರು ಪ್ರಾಸ್ತಾವಿಕ ಮಾತುಗಳನ್ನಾಡಿ, ಪಲಿಮಾರು ಶ್ರೀಗಳು ಶ್ರೀ ಕೃಷ್ಣನ ಗರ್ಭಗುಡಿಯ ಗೋಪುರಕ್ಕೆ ಬಂಗಾರದ ಕವಚ ಅರ್ಪಿಸುವ ಬಗ್ಗೆ ನೂರು ಕೆಜಿ ಚಿನ್ನ, ಸುಮಾರು 32 ಕೋ. ರೂ. ವೆಚ್ಚದ ಯೋಜನೆ ಹಾಗೂ ಸಹಸ್ರ ಕೋಟಿ ತುಳಸಿ ಅರ್ಚನೆ ಹಾಗೂ ಪ್ರಮುಖ ಯೋಜನೆಗಳನ್ನು ಭಕ್ತರ ಮುಂದೆ ತೆರೆದಿಟ್ಟರು.

ಈ ಸಂದರ್ಭದಲ್ಲಿ ಪಲಿಮಾರು ಮೇಗಿನ ಮನೆ ಕುಟುಂಬಸ್ಥರಾದ ಸುಧಾಕರ ಶೆಟ್ಟಿ ಬಂಜಾರ, ದಿವಾಕರ ಶೆಟ್ಟಿ, ಸುಕುಮಾರ ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ ವರ್ಲಿ, ಮೂಲ್ಕಿ ಪಡುಮನೆ ಕುಟುಂಬಸ್ಥರ ಪರವಾಗಿ ಸುಧೀರ್‌ ಶೆಟ್ಟಿ ಚರಿಷ್ಮಾ ಬಿಲ್ಡರ್‌ ಅವರು ಶ್ರೀಗಳನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಉದ್ಯಮಿ ಅನಿಲ್‌ ಶೆಟ್ಟಿ ಏಳಿಂಜೆ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ರವಿ ಶೆಟ್ಟಿ ಸಾಯಿಪ್ಯಾಲೇಸ್‌, ವಸಂತ್‌ ಶೆಟ್ಟಿ ಪಲಿಮಾರು, ಶಂಕರ ಶೆಟ್ಟಿ ರೋನಕ್‌, ಶಿರ್ವನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಸುರೇಂದ್ರ ಕುಮಾರ್‌ ಹೆಗ್ಡೆ, ಸಿಎ ಸುಧೀರ್‌ ಆರ್‌. ಎಲ್‌. ಶೆಟ್ಟಿ, ಪರ್ಯಾಯ ಸಮಿತಿ ಮುಂಬಯಿ ಗೌರವಾಧ್ಯಕ್ಷ ಡಾ| ಎಂ. ನರೇಂದ್ರ ರಾವ್‌ ಉಪಸ್ಥಿತರಿದ್ದರು. ಪಲಿಮಾರು ಶ್ರೀಗಳು ಮುಂಬಯಿ ಪರ್ಯಾಯ ಸಮಿತಿಯ ಗೌರವಾಧ್ಯಕ್ಷ ಡಾ| ಎಂ. ಎಸ್‌. ಆಳ್ವ ಅವರು ಶ್ರೀಗಳ ಮುಂಬಯಿ ಮೊಕ್ಕಾಂ ವಿವರಗಳನ್ನು ನೀಡಿ ವಂದಿಸಿದರು.
 
ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.