ಮರಿಗಳ ಜತೆಗೂಡಿ ಪಿಜಾ ಮಳಿಗೆಗೆ ಕನ್ನ ಹಾಕಿದ ತಾಯಿ ಕರಡಿ
Team Udayavani, Oct 12, 2017, 8:14 AM IST
ಕರಡಿ ಜೇನು ತಿನ್ನುವುದು ಗೊತ್ತು. ಆದರೆ ಪಿಜಾ ತಿನ್ನುತ್ತದಾ? ಅಮೆರಿಕದಲ್ಲಿನ ಒಂದು ಕರಡಿ ಪಿಜಾ ಕೂಡ ತಿನ್ನುತ್ತದೆ. ಹೇಗೆನ್ನುತ್ತಿರಾ? ಅಮೆರಿಕದ ಕೊಲೆರಾಡೋದ ಲ್ಲಿರುವ ಪಿಜಾ ಮಳಿಗೆಯೊಂದಕ್ಕೆ ಕರಡಿಯೊಂದು ಮರಿಗಳ ಜತೆ ಹೋಗಿ, ಅದನ್ನು ತಿಂದಿದೆ. ಈ ಘಟನೆ ಮಳಿಗೆಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ.
ಮಧ್ಯರಾತ್ರಿ ಮಳಿಗೆಗೆ ಲಗ್ಗೆ ಹಾಕಿದ ಅವುಗಳು, ಮಳಿಗೆಯ ಗಾಜಿನ ಕಿಟಕಿ ಮುರಿದು ಸೀದಾ ಅಲ್ಲಿಯ ಅಡುಗೆ ಮನೆಗೆ ಹೋಗಿ ಕೆಲ ಟ್ರೇಗಳಲ್ಲಿದ್ದ ಪಿಜಾ ಹಿಟ್ಟನ್ನು ತಿಂದಿವೆ. ಈ ವಿಡಿಯೋವನ್ನು ಅಂಗಡಿ ಮಾಲೀಕರು ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸಾರ್ವಜನಿಕರಿಗೆ ಸಂದೇಶವೊಂದನ್ನು ನೀಡಿದ್ದಾರೆ. ಕಾಡನ್ನು ಒತ್ತುವರಿ ಮಾಡುತ್ತಿರುವುದು ಹೆಚ್ಚಾಗಿರುವ ಕಾರಣ ಕರಡಿಗಳು ಊರಿನ ಒಳಗೆ ಬರುತ್ತಿವೆ. ನಾಳೆ ದಿನ ನಿಮ್ಮ ಮನೆ, ಕಚೇರಿಯಲ್ಲಿ
ಕಾಣಿಸಿಕೊಂಡರೆ ದಯವಿಟ್ಟು ಗುಂಡಿಕ್ಕಿ ಕೊಲ್ಲಬೇಡಿ ಎಂದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
IPL; ಬೌಲರ್ಗಳನ್ನು ಕಾಪಾಡಿ: ಅಶ್ವಿನ್ ವಿನಂತಿ!
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ