ತೆಂಡುಲ್ಕರ್ ಪುತ್ರಿಯ ಟ್ವೀಟರ್ನಿಂದ ಶರದ್ ಪವಾರ್ಗೆ ಬೈಗುಳ!
Team Udayavani, Oct 18, 2017, 3:58 PM IST
ಮುಂಬೈ: ನಕಲಿ ಟ್ವೀಟರ್ ಖಾತೆಗಳ ಹಾವಳಿ ಸಾಮಾನ್ಯ. ತಾರೆಯರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ಟ್ವೀಟ್ ಮಾಡಿದ್ದು ಹಲವಾರು ಬಾರಿ ವಿವಾದಕ್ಕೆ ಕಾರಣವಾಗಿದೆ. ಆದ್ದರಿಂದ ಟ್ವೀಟರ್ನಲ್ಲಿ ತಾರೆಯರ ಅಧಿಕೃತ ಖಾತೆಗಳನ್ನು ಟ್ವೀಟರ್ ಶುರು ಮಾಡಿದೆ. ಆದರೂ ನಕಲಿ ಖಾತೆಗಳ ಹಾವಳಿ ನಿಂತಿಲ್ಲ. ಅದಕ್ಕೀಗ ಹೊಸ ಬಲಿಪಶು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್.
ಅವರ ಹೆಸರಿನಲ್ಲಿರುವ ಖಾತೆಯೊಂದರಿಂದ ಟ್ವೀಟೊಂದು ಪ್ರಕಟವಾಗಿದೆ. ಅದರಲ್ಲಿ ಕೇಂದ್ರದ ಮಾಜಿ ಮಂತ್ರಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಟೀಕಿಸಲಾಗಿದೆ.
ಟ್ವೀಟ್ ಹೀಗಿದೆ: ಎನ್ಸಿಪಿ ನಾಯಕ ಶರದ್ ಪವಾರ್ ಮಹಾರಾಷ್ಟ್ರ ಲೂಟಿ ಮಾಡಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ಎಲ್ಲೋ ಕೆಲವರಿಗೆ ಗೊತ್ತಿರುವ ಸಂಗತಿಯೆಂದರೆ ಅವರು ಕೇಂದ್ರವನ್ನೂ ಲೂಟಿ ಮಾಡಲು ಯತ್ನಿಸಿದ್ದರೆನ್ನುವುದು…
ಈ ಟ್ವೀಟ್ ಪ್ರಕಟವಾಗುತ್ತಿದ್ದಂತೆ ವಿವಾದಕ್ಕೆ ಕಾರಣವಾಗಿದೆ. ಇದು ಸಚಿನ್ ಗಮನಕ್ಕೆ ಬರುತ್ತಿದ್ದಂತೆ ಅವರು ಟ್ವೀಟರ್ಗೆ ಮನವಿ ಮಾಡಿ, ಪುತ್ರಿ ಸಾರಾ ಮತ್ತು ಪುತ್ರ ಅರ್ಜುನ್ ಹೆಸರಲ್ಲಿರುವ ಎಲ್ಲ ನಕಲಿ ಖಾತೆಗಳನ್ನು ರದ್ದು ಮಾಡಬೇಕೆಂದು ಕೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ