ಸಾಲು ಸಾಲು ಸಾಧನೆಗಳ ಐವತ್ತು ವರ್ಷಗಳು


Team Udayavani, Oct 22, 2017, 11:10 AM IST

nadoja.jpg

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಅರ್ಧ ಶತಮಾನ. ಅ. 24, ಮಂಗಳವಾರ ಧರ್ಮಸ್ಥಳದಲ್ಲಿ 50ನೆಯ ವರ್ಧಂತ್ಯುತ್ಸವ ಸ‌ಂಭ್ರಮ.

ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಕಳೆದ ಮೂರು ವಾರ ಅಯ್ದು ರಾಷ್ಟ್ರಗಳಲ್ಲಿ ಪ್ರವಾಸದಲ್ಲಿ¨ªೆ.  ಥಾಯ್‌ಲೆಂಡಿನ ರಾಜಧಾನಿ ಬ್ಯಾಂಕಾಕಿನ ಸಭಾಂಗಣದಲ್ಲಿ ಸೆಪ್ಟಂಬರ್‌ 23ರಂದು ನನ್ನ ಉಪನ್ಯಾಸ. ನೀರಜ್‌ ಎಂಬುವರು ನನ್ನ ಬಳಿ ಬಂದು ವೀರೇಂದ್ರ ಹೆಗ್ಗಡೆಯವರು ಭಾರತದ ರಾಷ್ಟ್ರಪತಿಯಾಗುವರೆಂದು ನಿರೀಕ್ಷೆಯಿತ್ತು ಎಂದಾಗ ಏಕಕಾಲದಲ್ಲಿ ಆಶ್ಚರ್ಯ, ಆನಂದ. ಇದು ಈ ಬಾರಿಯ ಸಂಚಾರದಲ್ಲಿ ಸಂತೋಷ ಉಕ್ಕಿಸಿ ಪುಳಕಗೊಳಿಸಿದ ಮೊದಲ ಅನುಭವ. ಅಕ್ಟೋಬರ್‌ ಏಳನೆಯ ದಿನಾಂಕ ಸಂಜೆ ಜಪಾನ್‌ ದೇಶದ ರಾಜಧಾನಿ ಟೋಕಿಯೋ ಮಹಾನಗರದಲ್ಲಿ ನನ್ನ 82ನೆಯ ವರ್ಷದ ವರ್ಧಂತಿ ಆಚರಣೆಯಿತ್ತು. ವಿಶಾಲ್‌ ಶ್ರೀಮಾಲಿ ಮೊದಲಾದವರು-  “”ವೀರೇಂದ್ರ ಹೆಗ್ಗಡೆಯವರು ರಾಷ್ಟ್ರಪತಿಯಾಗುವ ಸೂಚನೆಯಿತ್ತಂತೆ ಹೌದೆ?” ಎಂದು ಕೇಳಿದರು. ಮತ್ತೆ ಪರಮಾಶ್ಚರ್ಯ, ಪರಮಾನಂದ ! ಕರ್ನಾಟಕದ ಸುಪುತ್ರನ ಹೆಸರು ವಿದೇಶಗಳಲ್ಲಿ ಗೌರವ ಗಳಿಸಿರುವುದನ್ನು ತಿಳಿದು ಹೆಮ್ಮೆ ಪಟ್ಟೆ. ಶಿಷ್ಯರತ್ನನ ಕೀರ್ತಿಲತೆ ದೇಶ-ವಿದೇಶಗಳಲ್ಲಿ ಹಬ್ಬಿರುವುದನ್ನು ಕಣ್ಣಾರೆ ಕಾಣುವ, ಕಿವಿಯಾರೆ ಕೇಳುವ ಅಪೂರ್ವ ಅನುಭವ ನನಗಾಯಿತು. ದೇವತೆಗಳೂ ಬಯಸುವಂಥ ಈ ಯಶಸ್ಸು ಇರುಳು ಕಳೆದು ಬೆಳಗಾಗುವಷ್ಟರಲ್ಲಿ ಸಲೀಸಾಗಿ ಬಂದುದಲ್ಲ. ಇದು ದಣಿವರಿಯದ ನಿರಂತರ ಶ್ರದ್ಧೆ , ಶ್ರಮ ಮತ್ತು ಸಾಧನೆ ಹಾಗೂ ಧೀಶಕ್ತಿಯಿಂದ ಗಳಿಸಿದ್ದು. 

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಚಿಕ್ಕ ಹುಡುಗನಾಗಿದ್ದ ಕಾಲದಿಂದ ಬÇÉೆ. ನಾನು ಧರ್ಮಸ್ಥಳದ ಕಾರ್ತಿಕ ಮಾಸದ ವಾರ್ಷಿಕ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದು 1959ರಲ್ಲಿ. ವೀರೇಂದ್ರ, ಸುರೇಂದ್ರ, ಹಷೇìಂದ್ರರ ಆಟಪಾಠವಿನೋದ ಉÇÉಾಸಗಳನ್ನು ಕಂಡಿ¨ªೆ. ಮುಂದೆ ವೀರೇಂದ್ರರು ಬೆಂಗಳೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಯಾದರು. ಪದವಿ ತರಗತಿಯಲ್ಲಿ ಓದುತ್ತಿ ರುವಾಗ ತಂದೆ ರತ್ನವರ್ಮರ ಅಕಾಲಮರಣವಾಯಿತು. 18 ವರ್ಷದ ಚಿಗುರುಮೀಸೆಯ ವೀರೇಂದ್ರ, ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತನಾಗಿ ವೀರೇಂದ್ರ ಹೆಗ್ಗಡೆಯಾದರು. ಅಂದಿನಿಂದ ಇಂದಿನ ತನಕ ವೀರೇಂದ್ರರು ದಾಪುಗಾಲು ಹಾಕುತ್ತ ಸಾಗಿಬಂದ ಕೀರ್ತಿಪಥ ನನಗೆ ಕರತಲಾಮಲಕ. ಸರ್ವಋತುಗಳಲ್ಲಿಯೂ ಜುಳುಜುಳು ನಿನಾದದಿಂದ ಬಾಗುತ್ತ ಬಳುಕುತ್ತ ಹರಿಯುವ ನದಿ ನೇತ್ರಾವತಿ. ಅದರ ಬದಿಯಲ್ಲಿ, ನಿಸರ್ಗದ ಮಡಿಲಲ್ಲಿ,  ಆಸ್ತಿಕರ ಕಣ್ಮಣಿಯಾಗಿ ವಿರಾಜಮಾನವಾಗಿರುವ ಸುರಸುಂದರ ದೇಗುಲಗಳ ಸಮುಚ್ಚಯವೇ ಧರ್ಮಸ್ಥಳ. ಇದು ಎಲ್ಲ ಧರ್ಮಗಳ ಭಕ್ತರ ಆರಾಧ್ಯದೈವ ಮಂಜುನಾಥಸ್ವಾಮಿಯ ದೇವಳ ಕಂಗೊಳಿಸುತ್ತಿರುವ ಪವಿತ್ರ ತಾಣ. ಎಂಟುನೂರು ವರುಷಗಳ ಈ ಚರಿತ್ರಾರ್ಹ ತಪೋಭೂಮಿಗೆ ಕಳೆದ ಶತಮಾನದಲ್ಲಿ ಮಾತನಾಡುವ ಮಂಜುನಾಥರೆನಿಸಿದ ಮಂಜಯ್ಯಹೆಗ್ಗಡೆಯವರ ಅಮೃತಸ್ಪರ್ಶವಾಯಿತು. ತರುವಾಯ ರತ್ನವರ್ಮ ಹೆಗ್ಗಡೆಯವರು ಈ ಪುರಾತನ ಕ್ಷೇತ್ರವನ್ನು ಆಧುನಿಕ ಯುಗಕ್ಕೆ ತಕ್ಕಂತೆ ವೇದಿಕೆ ಸಜ್ಜುಗೊಳಿಸಿ ದರು. ಸಹಸ್ರಾರು ಜನರು ಉಳಿದುಕೊಂಡು ದೇವರಸೇವೆಯನ್ನು ನಿರಾತಂಕವಾಗಿ ಕೈಗೊಳ್ಳಲು ಅಗತ್ಯವಾದ ಸೌಧ ಸಂಕೀರ್ಣ ಸಮುಚ್ಚಯಗಳನ್ನು ಕಟ್ಟಿಸಿದರು. ಸಾಹಿತ್ಯ, ಧರ್ಮ, ಜನಪದ ಕಲೆಗಳ ಸಂರಕ್ಷಣೆ ಸಂವರ್ಧನೆಗೆ ಪೂರಕ ಯೋಜನೆಗಳನ್ನು ಬೆಂಬಲಿಸಿದರು. ಬಾಲವಾಡಿಯಿಂದ ಸ್ನಾತಕೋತ್ತರ ತರಗತಿಗಳವರೆಗೆ ಶಿಕ್ಷಣ ಸೌಕರ್ಯ ಕಲ್ಪಿಸಿದರು. ಪರಂಪರೆಯ ಆಯುರ್ವೇದ ಕಾಲೇಜು, ಆಸ್ಪತ್ರೆಗಳನ್ನು ಸುಸಜ್ಜಿತ ರೀತಿಯಲ್ಲಿ ಸಂಯೋಜಿಸಿದರು. ನಾಡಿಗೆ ಮಾದರಿಯಾದ ಡೆಂಟಲ್‌ ಕಾಲೇಜು, ಇಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಿದರು. ಇವೇ ಮೊದಲಾದುವು ಶಿಕ್ಷಣ ಕ್ಷೇತ್ರದಲ್ಲಿ ಅವರಿಟ್ಟ ಮಹತ್ವದ ಹೆಜ್ಜೆಗಳು. 

ಹೀಗೆ ಮಾರ್ಪಾಟುಗೊಂಡ ಧರ್ಮಸ್ಥಳ ತನ್ನನ್ನು ಮತ್ತೂ ಬೃಹದಾಕಾರವಾಗಿ ದಿಗ್‌ದಿಗಂತವಾಗಿ ಜಗದಗಲ ವಿಸ್ತರಿಸಬಲ್ಲ ಒಬ್ಬ ಕಾರಣಪುರುಷನಿಗಾಗಿ ಹಂಬಲಿಸುತ್ತಿತ್ತು. ಭಕ್ತರ ಅಭೀಷ್ಟೆ ಫ‌ಲಿಸಿದಂತೆ, ಮಂಜುನಾಥಸ್ವಾಮಿ ಆಶೀರ್ವದಿಸಿ ಕವಚ ತೊಡಿಸಿ ಕಳಿಸಿದಂತೆ, ಏರುಜವ್ವನದ ವೀರೇಂದ್ರ ಹೆಗ್ಗಡೆ ಯವರು ಧರ್ಮಾಧಿಕಾರಿಯಾಗಿ ಗದ್ದುಗೆ ಹತ್ತಿದರು. ಪಟ್ಟವೇರಿದಾಗ ಸವಾಲುಗಳಿದ್ದುವು. ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ!  ವೈಚಾರಿಕ ಪ್ರಜ್ಞೆೆ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಮೈಗೂಡಿಸಿ ಹದಗೊಂಡ ವೀರೇಂದ್ರರು ನಿರೀಕ್ಷೆಗೂ ಮೀರಿ ತ್ರಿವಿಕ್ರಮನಂತೆ ಬೆಳೆದರು. ಸ್ಥಳದ ಕಟ್ಟಳೆ, ನಿಯಮ, ನಡಾವಳಿ, ಪರಂಪರೆ ಚಾಚೂತಪ್ಪದಂತೆ ಪಾಲಿಸಿದರು. ಆಹಾರದಾನ, ಅಭಯದಾನ, ಔಷಧದಾನ ಮತ್ತು ಶಾಸ್ತ್ರದಾನವೆಂಬ ಚತುರ್ವಿಧ ದಾನ ಮುಂದುವರಿಸಿದರು. ನಿತ್ಯೋತ್ಸವದಿಂದ ಧರ್ಮಸ್ಥಳದ ಘನತೆಯನ್ನು ನೂರ್ಮಡಿ ಹೆಚ್ಚಿಸಿ, ಶ್ರೀಕ್ಷೇತ್ರವನ್ನು ಕ್ಷಿತಿಜವಿಶ್ರಾಂತವಾಗಿ ಪ್ರಜ್ವಲಿಸಿದರು. 

ಅವರು ಜನಪರ ಕಾಳಜಿಯಿಂದ ಸಮಾಜಮುಖೀ ಚಟುವಟಿಕೆಗಳನ್ನು ಹಮ್ಮಿಕೊಂಡು ಶ್ರೀಸಾಮಾನ್ಯರ ದುಃಖ-ದುಮ್ಮಾನಗಳಿಗೆ ಧನಾತ್ಮಕ ವಾಗಿ ಸ್ಪಂದಿಸಿದರು. ದುಶ್ಚಟಗಳಿಂದ ಬೆಂದ ಕುಟುಂಬಗಳಿಗೆ ಆರೋಗ್ಯಭಾಗ್ಯ ಕರುಣಿಸಿದರು. ಗ್ರಾಮಗಳ ಪುನರುಜ್ಜೀವನಕ್ಕೆ ದಾರಿ ತೋರಿದರು.

ನಮ್ಮದು ಬಹುಸಂಸ್ಕೃತಿಯ ನಾಡು ಎಂಬ ಅರಿವಿನಿಂದ ಸಮನ್ವಯದ ಹರಿಕಾರರಾಗಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿದರು. ಧಾರ್ಮಿಕ ಸಾಮರಸ್ಯವನ್ನು ಕಾಪಾಡುವುದರ ಜತೆಜತೆಯÇÉೇ ಭಾಷಾಸೌಹಾರ್ದವನ್ನೂ ಪೋಷಿಸಿದರು. ಮನೆ ಮಾತು ತುಳು, ದೇಶಭಾಷೆ ಕನ್ನಡ – ಇವೆರಡನ್ನೂ ಸಮನಾಗಿ ಪುರಸ್ಕರಿಸಿದರು. ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವರು, ವಿಶ್ವತುಳು ಸಮ್ಮೇಳನವನ್ನೂ ನಡೆಸುವರು. ಆದರ್ಶಗಳನ್ನು ಬಿತ್ತುತ್ತ, ಮಾದರಿಗಳನ್ನು ನಿರ್ಮಿಸುತ್ತ ಅವರು ನಡೆದದ್ದೇ ಹೆ¨ªಾರಿಯಾಯಿತು. ತಾಯಿತಂದೆಯ ಬಳುವಳಿಯಾಗಿ ಬಂದ ಧಾರ್ಮಿಕತೆಗೆ ಆಮ್ಲಜನಕ ತುಂಬಿದರು. ಲಕ್ಷ್ಮಣ, ಭರತ, ಶತ್ರುಘ್ನರಂಥ ಸುರೇಂದ್ರ- ಹಷೇìಂದ್ರ-ರಾಜೇಂದ್ರ ತಮ್ಮಂದಿರು ಇರುವ ಅವಿಭಕ್ತ ಕುಟುಂಬದ ಮಹಿಮೆ ತೋರಿದರು. ಪತಿಗೆ ತಕ್ಕ ಸತಿ ಸೌಭಾಗ್ಯವತಿ ಹೇಮಾವತಿ. ನಾಡು ಕೊಂಡಾಡುವಂತೆ ಸ್ತ್ರೀಶಕ್ತಿಯ ಆವಿಷ್ಕಾರಕ್ಕೆ ಗಟ್ಟಿ ತಳಪಾಯ ಕಟ್ಟಿದ ಹಿರಿಮೆಯ ಹೂವನ್ನು ಮುಡಿದವರು.

ಮಹಿಳೆಯರು ಬೆವರು ಸುರಿಸಿ ಗಳಿಸಿದ ಹಣವನ್ನು ಹೇಗೆ ಪುನರುತ್ಪಾದಕ ಯೋಜನೆಗಳಲ್ಲಿ ತೊಡಗಿಸಿ ಸ್ವಾವಲಂಬಿಗಳಾಗಬಹುದೆಂಬುದನ್ನು ತಿಳಿಸಿ ಸಬಲೆಯರನ್ನಾಗಿಸಿದವರು ಹೇಮಾವತಿ ಹೆಗ್ಗಡೆಯವರು.

ಈ ಬಗೆಯಲ್ಲಿ ಹೆಗ್ಗಡೆಯವರ ಅಪಾರ ಸಿದ್ಧಿಸಾಧನೆಗಳು ನಾಡಿನ ಉದ್ದಗಲಗಳಲ್ಲಿ ಅನುರಣಿಸುತ್ತಿವೆ. ಅವರ ಕೊರಳಲ್ಲಿ ಪ್ರಶಸ್ತಿಗಳ ಮಣಿಮಾಲೆ, ಎದೆಯಲ್ಲಿ ಕರ್ನಾಟಕರತ್ನ ಪ್ರಶಸ್ತಿ ಕೌಸ್ತುಭ! ಹಂಪಿಯ ಕನ್ನಡ ವಿಶ್ವವಿದ್ಯಾಲಯ ನೀಡಿದ ನಾಡೋಜ ಡಾಕ್ಟರೇಟ್‌, ಭಾರತ ಸರ್ಕಾರವಿತ್ತ ಪದ್ಮಭೂಷಣ, ಈಟಿವಿಯವರು ಸಾರ್ವಜನಿಕ  ಅಭಿಪ್ರಾಯ ಸಂಗ್ರಹಿಸಿ ನೀಡಿದ ವಾಟಿಕಾ ಪ್ರಶಸ್ತಿ, ವಿದೇಶದ ವಿಶ್ವವಿದ್ಯಾಸಂಸ್ಥೆಗ‌ಳಿತ್ತ ಗೌರವ ಡಾಕ್ಟರೇಟ…-  ಮೊದಲಾದುವು ಲೋಕಮನ್ನಣೆಯ ದಾಖಲೆಗಳು.

ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿ ಅರ್ಧಶತಮಾನ ಪೂರೈಸಿ ಎಲ್ಲರ ಕಣ್ಮಣಿಯಾಗಿ ಶೋಭಿಸುತ್ತಿರುವ ಈ ಶುಭಾವಸರದಲ್ಲಿ ವೀರೇಂದ್ರ ಹೆಗ್ಗಡೆಯವರನ್ನು ಹೃತೂ³ರ್ವಕವಾಗಿ ಅಭಿನಂದಿಸೋಣ. ಆಯುರಾರೋಗ್ಯಭಾಗ್ಯದಿಂದ ನಲಿಯುತ್ತಿರಲೆಂದು ಹಾರೈಸೋಣ. ಸಾಲು ಸಾಲು ಹೊಚ್ಚಹೊಸ ಸಾಧನೆಗಳ ಸರದಾರನಿಗೆ ಸಾವಿರ ಸಲಾಂ !

– ನಾಡೋಜ ಹಂ. ಪ. ನಾಗರಾಜಯ್ಯ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.