ಸ್ಟಿಂಗ್ನಲ್ಲಿ ಸಿಕ್ಕಿಬಿದ್ದ ಪಿಚ್ ಕ್ಯುರೇಟರ್ ಸಸ್ಪೆಂಡ್!
Team Udayavani, Oct 25, 2017, 1:25 PM IST
ಪುಣೆ: ಬುಕ್ಕಿಗಳಿಗೆ ಪಿಚ್ ರಹಸ್ಯ ಬಿಚ್ಚಿಟ್ಟು ಇಂಡಿಯಾ ಟುಡೇ ನಡೆಸಿದ ಸ್ಟಿಂಗ್ ಆಪರೇಷನ್ನಲ್ಲಿ ಸಿಕ್ಕಿಬಿದ್ದ ಮಹಾರಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನ ಪಿಚ್ ಕ್ಯುರೇಟರ್ ಪಾಂಡುರಂಗ ಸಲ್ಗಾಂವ್ಕರ್ ಅವರನ್ನು ಬಿಸಿಸಿಐ ಬುಧವಾರ ವಜಾ ಮಾಡಿದೆ. ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯದ ಮುನ್ನಾ ದಿನ ಈ ವಿದ್ಯಮಾನ ನಡೆದಿದೆ.
ಸಲ್ಗಾಂವ್ಕರ್ ಬುಕ್ಕಿಗಳಿಗೆ ಪಿಚ್ನ ಸ್ವಭಾವ ಮತ್ತು ವಿಕೆಟ್ ಪಡೆಯುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿರುವುದು ಸ್ಟಿಂಗ್ ಆಪರೇಷನ್ನಲ್ಲಿ ಬಯಲಾಗಿತ್ತು. ಸಲ್ಗಾಂವ್ಕರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರು ತಿಳಿಸಿದ್ದಾರೆ.
3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ಗೆ ಭಾರತ ಶರಣಾಗಿತ್ತು. ಇದೇ ವಿಚಾರ ಮುಂದಿಟ್ಟು ಕೆಲ ಮಾಧ್ಯಮಗಳು ಪಂದ್ಯ ಫಿಕ್ಸ್ ಆಗಿತ್ತು ಎಂದೂ ವರದಿ ಮಾಡಿದ್ದವು.