ಅಂತು ಇಂತು “ಕಾಲೇಜ್ ಕುಮಾರ್’ನ ಹವಾ ಶುರು: ಕಮರ್ಷಿಯಲ್ ಟ್ರೈಲರ್ ವೀಕ್ಷಿಸಿ
Team Udayavani, Oct 29, 2017, 2:23 PM IST
ಕೆಂಡಸಂಪಿಗೆ’ ಖ್ಯಾತಿಯ ವಿಕ್ಕಿ ಅಭಿನಯದ “ಕಾಲೇಜ್ ಕುಮಾರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕಾಲೇಜ್ ಕುಮಾರನ ತಂದೆಯಾಗಿ ನಟಿಸಿರುವ ರವಿಶಂಕರ್ ಲುಕ್ ಮತ್ತು ಅವರ ಅಭಿನಯ ಬೊಂಬಾಟ್ ಆಗಿದೆ. ಅಲ್ಲದೇ ಚಿತ್ರದ ಟ್ರೈಲರ್ ಕಮರ್ಶಿಯಲ್ ಫೀಲಿಂಗ್ ನೀಡುವುದರ ಮೂಲಕ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ. ಕಾಲೇಜ್ ಕುಮಾರನಿಗೆ ನಾಯಕಿಯಾಗಿ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೃತಿ, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ ಚಿತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಅಲೆಮಾರಿ ಸಂತು ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ಕಮರ್ಷಿಯಲ್ ಟ್ರೈಲರ್ ವೀಕ್ಷಿಸಿ.