ಜಪಾನ್ನಲ್ಲಿ ರಸಪ್ರಶ್ನೆ ಸ್ಪರ್ಧೆ: KMC ವಿದ್ಯಾರ್ಥಿಗಳಿಗೆ ಪ್ರಶಸ್ತಿ
Team Udayavani, Oct 31, 2017, 10:00 AM IST
ಮಂಗಳೂರು: ಜಪಾನ್ನ ಟೋಕಿಯೊದಲ್ಲಿ ಅ. 22ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ಫುಜಿಯೋಕಪ್ ರಸಪ್ರಶ್ನೆ-2017 ಸ್ಪರ್ಧೆಯಲ್ಲಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ತೃತೀಯ ಎಂಬಿಬಿಎಸ್ ವಿದ್ಯಾರ್ಥಿಗಳಾದ ಅನಿರುದ್ಧ್ ಪೈ ಹಾಗೂ ಸಿದ್ಧಾರ್ಥ ಶಂಕರ್ ಅವರ ತಂಡ ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಫುಜಿಯೋಕಪ್ ಪ್ರಶಸ್ತಿ ಗಳಿಸಿದೆ.
ಆತಿಥೇಯ ಜಪಾನ್, ಭಾರತ, ವಿಯೆಟ್ನಾಂ ಹಾಗೂ ಇಂಡೋನೇಶಿಯಾ ದೇಶಗಳ ವಿವಿಧ ವೃತ್ತಿಪರ ಕಾಲೇಜುಗಳ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಒಟ್ಟು 24 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜಪಾನಿನ ವೈದ್ಯಕೀಯ ತಜ್ಞ ಡಾ| ಫುಜಿಯೋಟಕಯಾಮ ಅವರ ಹೆಸರಿನಲ್ಲಿ ಈ ಪ್ರತಿಷ್ಠಿತ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪರ್ಧಾ ಸಂಘಟಕರಾದ ಡಾ| ಹಿಟೋಶಿ ಒಕೊಚಿ, ಪ್ರೊ| ಗ್ಯಾರಿ ಲೆವಿ, ಪ್ರೊ| ಜುರ್ಗನ್ ಹೆಶರ್ ಹಾಗೂ ಪ್ರೊ| ಟಕಹಿರೊಒಚಿಯಾ ಮುಂತಾದವರು ಉಪಸ್ಥಿತರಿದ್ದರು. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ| ವೆಂಕಟ್ರಾಯ ಪ್ರಭು ಅವರು ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು