ಮುಂಬಯಿ ಶೇರು ಪೇಟೆ ನಿಸ್ತೇಜ: 45 ಅಂಕ ಏರಿಕೆಗೆ ತೃಪ್ತ
Team Udayavani, Nov 6, 2017, 4:46 PM IST
ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆ ಇಂದು ಸೋಮವಾರ ನಿಸ್ತೇಜವಾಗಿತ್ತು. ಏಶ್ಯನ್ ಶೇರು ಪೇಟೆಗಳಲ್ಲಿನ ನಿರುತ್ಸಾಹದ ಛಾಯೆ ಮುಂಬಯಿ ಶೇರು ಪೇಟೆಯಲ್ಲೂ ದಿನದ ಉದ್ದಕ್ಕೂ ಕಂಡು ಬಂತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 45.63 ಅಂಕಗಳ ಮುನ್ನಡೆಯನ್ನು ಗಳಿಸುವ ಮೂಲಕ ದಿನದ ವಹಿವಾಟನ್ನು ಹೊಸ ಎತ್ತರದ ರೂಪದಲ್ಲಿ 33,731.19 ಅಂಕಗಳ ದಾಖಲೆ ಮಟ್ಟದಲ್ಲಿ ಕೊನೆಗೊಳಿಸಿತು.
ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.70 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,451.80 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,458 ಶೇರುಗಳು ಮುನ್ನಡೆ ಸಾಧಿಸಿದರೆ 1,379 ಶೇರುಗಳು ಹಿನ್ನಡೆಗೆ ಗುರಿಯಾದವು.
ಇಂದಿನ ಟಾಪ್ ಗೇನರ್ಗಳು : ಒಎನ್ಜಿಸಿ, ಟಾಟಾ ಮೋಟರ್, ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಇನ್ಫ್ರಾಟೆಲ್, ಸಿಪ್ಲಾ.
ಟಾಪ್ ಲೂಸರ್ಗಳು : ಐಡಿಯಾ ಸೆಲ್ಯುಲರ್, ಎಚ್ಪಿಸಿಎಲ್, ಎಸ್ ಬ್ಯಾಂಕ್ ಸನ್ ಫಾರ್ಮಾ, ಯುಪಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್