ಲಾಭ ನಗದಿಕರಣ: ಮುಂಬಯಿ ಶೇರು 97 ಅಂಕ ಕುಸಿತ
Team Udayavani, Nov 6, 2017, 10:45 AM IST
ಮುಂಬಯಿ: ವಹಿವಾಟುದಾರರು ಮತ್ತು ಹೂಡಿಕೆದಾರರು ಈಚಿನ ಲಾಭವನ್ನು ನಗದೀಕರಿಸಲು ಭರಾಟೆಯ ಮಾರಾಟಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 97 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು 19.48 ಅಂಕಗಳ ನಷ್ಟದೊಂದಿಗೆ 33,666.08 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 12.10 ಅಂಕಗಳ ನಷ್ಟದೊಂದಿಗೆ 10,440.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 14 ಪೈಸೆಗಳ ಕುಸಿತವನ್ನು ಕಂಡು 64.69 ರೂ. ವಿನಿಮಯ ದರಕ್ಕೆ ನಿಗದಿಗೊಂಡಿತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಟಾಟಾ ಮೋಟರ್, ಎಸ್ಬಿಐ, ಭಾರ್ತಿ ಏರ್ಟೆಲ್, ಎಕ್ಸಿಸ್ ಬ್ಯಾಂಕ್ ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್ಗಳು : ಮಹೀಂದ್ರ ಮಹೀಂದ್ರ, ಭಾರ್ತಿ ಇನ್ಫ್ರಾಟೆಲ್, ಟಾಟಾ ಮೋಟರ್, ಒಎನ್ಜಿಸಿ, ಟಾಟಾ ಪವರ್.
ಟಾಪ್ ಲೂಸರ್ಗಳು : ಐಡಿಯಾಸೆಲ್ಯುಲರ್, ಎಚ್ಪಿಸಿಎಲ್. ಬಿಪಿಸಿಎಲ್, ಭಾರ್ತಿ ಏರ್ಟೆಲ್, ಹಿಂಡಾಲ್ಕೋ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್