ಡೇ-ನೈಟ್ ವನಿತಾ ಟೆಸ್ಟ್: ಆಸೀಸ್ ತಂಡ ಆಯ್ಕೆ
Team Udayavani, Nov 8, 2017, 9:10 AM IST
ಸಿಡ್ನಿ: ಐತಿಹಾಸಿಕ ವನಿತಾ ಆ್ಯಶಸ್ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಇಂಗ್ಲೆಂಡ್ ಎದುರಿನ ಈ ಪಂದ್ಯ ಗುರುವಾರದಿಂದ “ನಾರ್ತ್ ಸಿಡ್ನಿ ಓವಲ್’ನಲ್ಲಿ ಆರಂಭ ವಾಗಲಿದೆ. ಇದು ವನಿತಾ ಆ್ಯಶಸ್ ಇತಿಹಾಸದ ಪ್ರಪ್ರಥಮ ಡೇ-ನೈಟ್ ಟೆಸ್ಟ್ ಪಂದ್ಯವೆಂಬುದು ವಿಶೇಷ.
ತಂಡದಲ್ಲಿ 5 ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದ್ದು, ಲೆಗ್ ಸ್ಪಿನ್ನರ್ ಕ್ರಿಸ್ಟನ್ ಬೀಮ್ಸ್ ಹಾಗೂ ವೇಗಿ ಬೆಲಿಂಡಾ ವಕರೆವಾ ಅವರನ್ನು ಕೈಬಿಡಲಾಗಿದೆ. ಆ್ಯಶ್ಲೀ ಗಾಡ್ನರ್, ತಾಲಿಯಾ ಮೆಕ್ಗ್ರಾತ್ ಮತ್ತು ಅಮಂಡಾ ಜೇಡ್ ವೆಲ್ಲಿಂಗ್ಟನ್ ಹೊಸಬರಲ್ಲಿ ಪ್ರಮುಖರು. ರಶೆಲ್ ಹೇನ್ಸ್ ನಾಯಕಿ.
“ಬೆಲಿಂಡಾ ಭರವಸೆಯ ವೇಗಿಯಾಗಿದ್ದು, ಭವಿಷ್ಯದ ಆಟಗಾರ್ತಿಯಾಗಿದ್ದಾರೆ. ಅವರು ಬೇಸರಪಡುವ ಅಗತ್ಯವಿಲ್ಲ. ಸಾಕಷ್ಟು ಮಂದಿ ವೇಗಿಗಳು ಸ್ಪರ್ಧೆ ಯಲ್ಲಿದ್ದುದರಿಂದ ಆಯ್ಕೆ ಜಟಿಲಗೊಂಡಿತ್ತು. ಕ್ರಿಸ್ಟನ್ಗೂ ಆಯ್ಕೆಯ ಅದೃಷ್ಟ ಇರಲಿಲ್ಲ…’ ಎಂದು ಆಯ್ಕೆ ಸಮಿತಿಯ ಶಾನ್ ಫ್ಲೆಗ್ಲರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ