ತಾರಾ ಹಿಂಗ್ ಕಾಣ್ತಾರಾ
Team Udayavani, Nov 9, 2017, 5:16 PM IST
“ತಾರಾ ಮೇಡಮ್, ನೀವು ಅಂತ ಗೊತ್ತೇ ಆಗ್ಲಿಲ್ಲ …’ ಹಾಗಂತ ಎಷ್ಟೋ ಜನ ಹೇಳಿದರಂತೆ. ತಮ್ಮ ಬಗ್ಗೆ ಎಲ್ಲರೂ ಹೇಳುತ್ತಿರುವ ಈ ಕಾಂಪ್ಲಿಮೆಂಟ್ ಕೇಳಿ ತಾರಾ ಅವರಿಗೆ ಬಹಳ ಖುಷಿಯಾಗಿತ್ತು. ಅಂದಹಾಗೆ, ತಾರಾಗೆ ಈ ಕಾಂಪ್ಲಿಮೆಂಟ್ ಸಿಕ್ಕಿದ್ದು, “ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ’ ಚಿತ್ರದ ಮುಹೂರ್ತ ಸಮಾರಂಭದಲ್ಲಿ. ದೇವರಾಜ್, ಶ್ರುತಿ ಮುಂತಾದವರು ನಟಿಸುತ್ತಿರುವ ಈ ಚಿತ್ರದಲ್ಲಿ ತಾರಾ ಅವರಿಗೆ ಒಂದು ವಿಭಿನ್ನ ಪಾತ್ರವಷ್ಟೇ ಅಲ್ಲ, ವಿಭಿನ್ನವಾದ ಗೆಟಪ್ ಸಹ ಇದೆ ಎನ್ನುವುದು ವಿಶೇಷ. ಈ ಚಿತ್ರಕ್ಕಾಗಿಯೇ ತಾರಾ ವಿಶೇಷ ವಿಗ್ ತೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರ ಕಾಸ್ಟೂéಮ್ಗಳು ಸಹ ವಿಭಿನ್ನವಾಗಿವೆ.
“ಇತ್ತೀಚೆಗೆ ಮೂರು ವಿಭಿನ್ನ ಪಾತ್ರಗಳು ಸಿಕ್ಕಿವೆ. ಒಂದು ಕಡೆ “ಸಾವಿತ್ರಿ ಬಾಯಿ ಫುಲೆ’ ಪಾತ್ರ ಸಿಕ್ಕಿತು. ಇನ್ನೊಂದು ಕಡೆ “ಹೆಬ್ಬೆಟ್ ರಾಮಕ್ಕ’ ಚಿತ್ರದಲ್ಲಿನ ರಾಮಕ್ಕ ಪಾತ್ರ ಸಿಕ್ಕಿತು. ಈಗ ಈ ಚಿತ್ರದಲ್ಲಿ ವಿಭಿನ್ನ ಪಾತ್ರವಿದೆ. ಕಥೆ ಕೇಳಿದಾಗ, ಈಗ ಈ ತರಹ ಕಾಸ್ಟೂéಮ್ಗಳು ಬೇಕಾ ಎಂದನಿಸಿತು. ಆದರೆ, ನಿರ್ದೇಶಕರ ಬದ್ಧತೆ ನೋಡಿ ಖುಷಿಯಾಯಿತು. ಅವರು ಬಹಳ ಹೋಂವರ್ಕ್ ಮಾಡಿದ್ದು, ಇದೇ ತರಹ ಬೇಕು ಎಂದು ತೀರ್ಮಾನಿಸಿದ್ದರು. ಜೊತೆಗೆ ಪಾತ್ರವೂ ಚೆನ್ನಾಗಿದೆ, ಚಿತ್ರದ ಕೊನೆಯ ತನಕವೂ ಪಾತ್ರವಿದೆ. ಅದೇ ಕಾರಣಕ್ಕೆ ಒಪ್ಪಿಕೊಂಡು ಈ ಚಿತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.
ಎಲ್ಲಾ ಸರಿ, ಮೇಕಪ್ಗೆ ಎಷ್ಟು ಸಮಯ ಬೇಕಾಯಿತು ಎಂದರೆ, ಕೇವಲ ಅರ್ಧ ಗಂಟೆ ಎಂಬ ಉತ್ತರ ಅವರಿಂದ ಬರುತ್ತದೆ. “ಮುಂಬೈನಿಂದ ಹೇರ್ ಡ್ರೆಸ್ಸರ್ ಎಲ್ಲಾ ಬಂದಿದ್ದಾರೆ. ನನ್ನ ಗೆಟಪ್ಗೆ ಎಷ್ಟು ಹೊತ್ತು ಬೇಕಾಗುತ್ತದೋ ಎಂಬ ಭಯ ನನಗೂ ಇತ್ತು. ವಿಗ್ ಎಲ್ಲಾ ರೆಡಿ ಮಾಡಿಕೊಂಡೇ ಬಂದಿದ್ದಾರೆ. ಕೇವಲ ಅರ್ಧ ಗಂಟೆಯಲ್ಲಿ ನನ್ನ ಮೇಕಪ್ ಮುಗಿಯಿತು’ ಎಂದರು ತಾರಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ