ಐಸಿಜೆಗೆ ಮತ್ತೆ ನ್ಯಾ.ಭಂಡಾರಿ ನೇಮಕ?
Team Udayavani, Nov 11, 2017, 6:55 AM IST
ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ಕ್ಕೆ ನ್ಯಾಯಮೂರ್ತಿ ಹುದ್ದೆಗೆ ಭಾರತದ ದಲ್ವಿರ್ ಭಂಡಾರಿ ಮರು ಆಯ್ಕೆಯಾಗುವ ಸಾಧ್ಯತೆಯಿದೆ. ಸದ್ಯ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು ಭಂಡಾರಿಯವರನ್ನು ಆಯ್ಕೆ ಮಾಡಬೇಕೆ ಅಥವಾ ಬ್ರಿಟನ್ನ ಕ್ರಿಸ್ಟೋಫರ್ ಗ್ರೀನ್ವುಡ್ರನ್ನು ನೇಮಿಸಬೇಕೇ ಎಂಬ ನಿರ್ಧಾರವಾಗಲಿದೆ.