300 ಹಲ್ಲುಗಳ ಮೀನು!
Team Udayavani, Nov 14, 2017, 6:05 AM IST
ಅಲ್ಗರ್ವ್: ತಿಮಿಂಗಿಲಕ್ಕೆ ಹೋಲುವ ಭಾರಿ ಗಾತ್ರದ ಮೀನೊಂದು ಇತ್ತೀಚೆಗೆ ಪೊರ್ಚುಗಲ್ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಅಚ್ಚರಿಯ ಸಂಗತಿ ಏನೆಂದರೆ ಈ ತಿಮಿಂಗಿಲ ಗಾತ್ರದ ಮೀನಿನ ತಲೆ ಭಾಗ ಮಾತ್ರ ಹೆಚ್ಚಾಕಡಿಮೆ ಡೈನೋಸಾರ್ಗೆ ಹೋಲುವಂತಿದೆ!
ಅಚ್ಚರಿಯಾದರೂ ಇದು ಸತ್ಯ. ಪೊರ್ಚುಗೀಸ್ ಸಮುದ್ರ ಹಾಗೂ ವಾತಾವರಣ ಅಧ್ಯಯನ ಸಂಸ್ಥೆ ಇಂಥದ್ದೊಂದು ಜೀವಿ ಇನ್ನೂ ಸಮುದ್ರದಲ್ಲಿ ಬದುಕುಳಿದಿರುವುದಾಗಿ ಹೇಳಿದೆ. ಟೈರನೋಸಾರಸ್ ರೆಕ್ಸ್ ಗಣಕ್ಕೆ ಸೇರಿದ ದೈತ್ಯಾಕಾರದ ಮೀನು ಇದಾಗಿದೆ ಎಂದಿದೆ. ವಿಜ್ಞಾನಿಗಳ ಪ್ರಕಾರ ಈ ಜೀವಿ ಹೆಚ್ಚಾಕಡಿಮೆ 80 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ವಿರಳ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಿಮಿಂಗಿಲದ ಸಾಮ್ಯತೆ ಹೊಂದಿರುವ ಈ ಸಮುದ್ರ ಜೀವಿ 300ಕ್ಕೂ ಹೆಚ್ಚು ದವಡೆ ಹಲ್ಲುಗಳನ್ನು ಹೊಂದಿದೆ. ಅದರ ದೇಹ ಹಾವಿಗೆ ಹೋಲುವಂತಿದೆ. ಪೊರ್ಚುಗಲ್ನ ಕರಾವಳಿ ಪ್ರದೇಶ ಅಲ್ಗರ್ವ್ ಎಂಬಲ್ಲಿ ಯುರೋಪಿಯನ್ ಯೂನಿಯನ್ ವಿಜ್ಞಾನಿಗಳು ಈ ಜೀವಿಯನ್ನು ಪತ್ತೆ ಮಾಡಿದ್ದಾರೆ. 701 ಮೀಟರ್ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಶಾರ್ಕ್ ಜಾತಿಯ ಇದು ಚಾಲಮಿಡಾಸ್ಲಾಚಸ್ ಆ್ಯಂಗ್ಯುನಿಯಸ್ (Chlamydoselachus anguineus) ಪ್ರಭೇದಕ್ಕೆ ಸೇರಿದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು