ಕುತೂಹಲದ ನಡುವೆ “3 ಗಂಟೆ 30 ದಿನ 30 ಸೆಕೆಂಡ್’: ಸೂಪರ್ ಟ್ರೈಲರ್ ವೀಕ್ಷಿಸಿ
Team Udayavani, Nov 24, 2017, 3:49 PM IST
ವಿಭಿನ್ನ ಶೀರ್ಷಿಕೆಯಿಂದ ಕುತೂಹಲ ಮೂಡಿಸಿರುವ ಚಿತ್ರ “3 ಗಂಟೆ 30 ದಿನ 30 ಸೆಕೆಂಡ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಂದ್ರಶೇಖರ್ ಆರ್. ಪದ್ಮಶಾಲಿ ನಿರ್ಮಾಣದ ಈ ಚಿತ್ರವನ್ನು ಮಧುಸೂಧನ್ ನಿರ್ದೇಶಿಸಿದ್ದಾರೆ. ಇನ್ನು ಕನ್ನಡದ ಮಟ್ಟಿಗೆ ಬೇರೆ ರೀತಿಯ ಪ್ರಯತ್ನ ಮತ್ತು ಪ್ರಯೋಗ ಮಾಡಿರುವ ನಿರ್ದೇಶಕರು, ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಹಾಡನ್ನೂ ಬರೆದಿದ್ದಾರೆ. ಅವರ ಗೆಳೆಯರು ಬ್ರೈನ್ ಶೇರ್ ಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಪ್ರತಿ ಹಂತದಲ್ಲೂ ಕುತೂಹಲ ಮೂಡಿಸುವ ಈ ಚಿತ್ರದಲ್ಲಿ ಪ್ರೀತಿ, ಸೆಂಟಿಮೆಂಟ್ ಹಾಗು ಭಾವನಾತ್ಮಕ ಅಂಶಗಳಿವೆ. ಚಿತ್ರಕ್ಕೆ ಅರುಣ್ ಗೌಡ ನಾಯಕ. ಅವರಿಗೆ ಕಾವ್ಯಾಶೆಟ್ಟಿ ನಾಯಕಿ. ಉಳಿದಂತೆ ದೇವರಾಜ್, ಸುಧಾರಾಣಿ ಇತರರು ಇದ್ದಾರೆ. ಶ್ರೀಧರ್ ವಿ.ಸಂಭ್ರಮ್ ಸಂಗೀತವಿದೆ. ಮಧುಸೂದನ್, ಜಯಂತ್ ಕಾಯ್ಕಿಣಿ ಗೀತೆ ರಚಿಸಿದ್ದಾರೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ.