ಉತ್ತರಪ್ರದೇಶದ ಶಾಲೆಯಲ್ಲಿ ಬಾಲಕಿಯರಿಗೆ ಹಿಜಾಬ್ ನಿಷೇಧ!
Team Udayavani, Nov 25, 2017, 9:31 AM IST
ಬಾರಾಬಂಕಿ: ಉತ್ತರಪ್ರದೇಶದ ರೈಲಿನಲ್ಲಿ ಮೂವರು ಮೌಲ್ವಿಗಳನ್ನು ಥಳಿಸಿರುವ ಘಟನೆ ನಡೆದ ಬೆನ್ನಲ್ಲೇ ಇಲ್ಲಿನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಲೆಗೆ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ.
ಶಾಲೆಯ ವಸ್ತ್ರ ಸಂಹಿತೆ ಜತೆ ಹಿಜಾಬ್ ಸರಿಹೊಂದುವು ದಿಲ್ಲ ಎಂದು ಆನಂದ್ ಭವನ್ ಶಾಲಾ ಮಂಡಳಿ ಹೇಳಿದೆ. ತನ್ನ ಮಗಳಿಗೆ ಹಿಜಾಬ್ ಧರಿಸಿ ಶಾಲೆಗೆ ಬರಲು ಅನುಮತಿ ನೀಡಬೇಕೆಂದು ವಿದ್ಯಾರ್ಥಿನಿಯೊಬ್ಬಳ ತಂದೆ ಶಾಲೆಯ ಮಂಡಳಿಗೆ ಲಿಖೀತ ಮನವಿ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಮಂಡಳಿ, “ಕೆಲವು ಮಕ್ಕಳಿಗಾಗಿ ಶಾಲೆಯ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ನಿರ್ಧಾರದಿಂದ ಶಾಲೆ ಹಿಂದೆ ಸರಿಯುವುದಿಲ್ಲ’ ಎಂದಿದೆ. ಇದೀಗ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.