ಶಿವಮೊಗ್ಗ:ಕಾರು ಪಲ್ಟಿಯಾಗಿ ಡಿಕೆಶಿ ಪಿಎ ಸೇರಿ ಇಬ್ಬರು ಬಲಿ
Team Udayavani, Nov 25, 2017, 4:50 PM IST
ಶಿವಮೊಗ್ಗ : ಕಾರು ಪಲ್ಟಿಯಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಸಹಾಯಕ ಲೋಕೇಶ್ (35) ಮತ್ತವರ ಪತ್ನಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂಸಿ ಬಳಿ ಶುಕ್ರವಾರ ನಡೆದಿದೆ.
ಲೋಕೇಶ್ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಪಿಎ ಎನ್ನುವುದು ಅವರ ಬಳಿಯಿದ್ದ ಐಡಿ ಕಾರ್ಡ್ನಿಂದ ಗುರುತಿಸಲಾಗಿದೆ. ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತರ ಶವಗಳನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.