ಇವರು ಯಾರು ಬಲ್ಲಿರೇನು..?
Team Udayavani, Nov 28, 2017, 11:07 AM IST
ಈ ಫೋಟೋ ನೋಡಿ, ಇದರಲ್ಲಿರುವ ಮಹಿಳೆ ಯಾರಿರಬಹುದು ಎಂದು ಹುಳ ಬಿಟ್ಕೊಂಡಿದ್ದೀರಾ? ಸ್ವಲ್ಪ ಜೂಮ್ ಮಾಡಿ ನೋಡಿ. ಚಿತ್ರದಲ್ಲಿ ಇರುವುದು ಯಾರು ಎಂದು ಗೊತ್ತಾಗುತ್ತದೆ. ಹಾಗೂ ಗೊತ್ತಾಗದಿದ್ದರೆ, ಉತ್ತರ ಹೇಳ್ಳೋಕೆ ನಾವಿದ್ದೀವಿ. ಗೊತ್ತಾಗದಿದ್ದರೆ ಇಲ್ಲಿ ಕೇಳಿ, ಈ ಫೋಟೋದಲ್ಲಿರುವವರು ನಟ ಉಪೇಂದ್ರ. ಇದು ಅವರೇ ಟ್ವೀಟ್ ಮಾಡಿಕೊಂಡಿರುವ ತಮ್ಮ ಹೊಸ ಚಿತ್ರದ ಫೋಟೋ.
ಹೌದು, ಇತ್ತೀಚಿನ ದಿನಗಳಲ್ಲಿ ಉಪೇಂದ್ರ ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರಜಾಕೀಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಟ್ವೀಟ್ ಮಾಡುತ್ತಿದ್ದರು, ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಬಹಳ ದಿನಗಳ ನಂತರ ಸೋಮವಾರ, ಉಪೇಂದ್ರ ತಮ್ಮ ಹೊಸ ಚಿತ್ರದ ಈ ಫೋಟೋವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಲೇಡಿ ಗೆಟಪ್ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು,
ಮುಖ ಕಾಣಿಸಬಾರದು ಎಂದು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ. ಆದರೆ, ಆ ಕಣ್ಣುಗಳನ್ನು ನೋಡಿದರೆ ಥಟ್ಟನೆ ಹೇಳಬಹುದು, ಇದು ಉಪೇಂದ್ರರ ಫೋಟೋ ಅಂತ. ಅಂದ ಹಾಗೆ, ಇದು ಉಪೇಂದ್ರ ಅಭಿನಯದ “ಹೋಮ್ ಮಿನಿಸ್ಟರ್’ ಚಿತ್ರದ ಫೋಟೋ. ಈ ಚಿತ್ರದಲ್ಲಿ ಉಪೇಂದ್ರ ಮತ್ತು ವೇದಿಕಾ ಜೊತೆಯಾಗಿ ನಟಿಸುತ್ತಿದ್ದು, ಚಿತ್ರವನ್ನು ಆಂಧ್ರದ ನಿರ್ಮಾಪಕರೊಬ್ಬರು ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!