ಹೊಸಬರ ಜೊತೆ ಭಟ್ರ ಸಿನಿಮಾ
Team Udayavani, Dec 5, 2017, 11:35 AM IST
ಯೋಗರಾಜ್ ಭಟ್ ನಿರ್ದೇಶನದ “ಮುಗುಳು ನಗೆ’ ಚಿತ್ರ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಆ ಚಿತ್ರ ಬಿಡುಗಡೆಯಾಗಿ ಮೂರು ತಿಂಗಳಾಗುತ್ತಾ ಬಂದರೂ ಯೋಗರಾಜ್ ಭಟ್ಟರ ಕಡೆಯಿಂದ ಯಾವುದೇ ಹೊಸ ಸಿನಿಮಾದ ಸುದ್ದಿ ಬಂದಿರಲಿಲ್ಲ.
ಹಾಗಾಗಿ, ಮುಂದೆ ಯಾವ ಸಿನಿಮಾ ಮಾಡುತ್ತಾರೆಂಬ ಪ್ರಶ್ನೆ ಸಹಜವಾಗಿಯೇ ಇತ್ತು. ಈಗ ಭಟ್ಟರ ಹೊಸ ಸಿನಿಮಾದ ಸುದ್ದಿ ಹೊರಬಿದ್ದಿದೆ. ಹೌದು, ಯೋಗರಾಜ್ ಭಟ್ಟರ ಹೊಸ ಸಿನಿಮಾದ ಕೆಲಸ ಆರಂಭವಾಗಿದ್ದು, ಡಿಸೆಂಬರ್ 6 ಎಂದು ಚಿತ್ರದ ಸ್ಕ್ರಿಪ್ಟ್ ಪೂಜೆ ಹಾಗೂ ಹಾಡುಗಳ ಧ್ವನಿಮುದ್ರಣ ಕಾರ್ಯ ಆರಂಭವಾಗಲಿದೆ. ಚಿತ್ರೀಕರಣ ಡಿಸೆಂಬರ್ 20 ರಿಂದ ಆರಂಭವಾಗಲಿದೆ.
ಎಲ್ಲಾ ಓಕೆ, ಈ ಬಾರಿ ಭಟ್ಟರ ಚಿತ್ರದಲ್ಲಿ ಯಾರು ನಟಿಸುತ್ತಿದ್ದಾರೆಂದು ನೀವು ಕೇಳಿದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಭಟ್ಟರು ಇನ್ನೂ ಕಲಾವಿದರ ಆಯ್ಕೆಯಲ್ಲಿದ್ದಾರೆ. ಮೂಲಗಳ ಪ್ರಕಾರ, ಈ ಬಾರಿ ಬಹುತೇಕ ಹೊಸಬರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಾಗಾಗಿ, ನಟ-ನಟಿಯರನ್ನು ಕೂಡಾ ಆಡಿಷನ್ ಮೂಲಕ ಆಯ್ಕೆ ಮಾಡುವ ಉದ್ದೇಶ ಅವರಿಗಿದೆ.
ಜೊತೆಗೆ ಕೆಲವು ಪರಿಚಿತ ಮುಖಗಳು ಕೂಡಾ ಚಿತ್ರದಲ್ಲಿದ್ದು, ಈಗಾಗಲೇ ಕೆಲವರ ಜೊತೆ ಮಾತುಕತೆ ಕೂಡಾ ನಡೆಸಿದ್ದಾರೆ. ಈ ಚಿತ್ರ ಯೋಗರಾಜ್ ಭಟ್ಟರ ಯೋಗರಾಜ್ ಮೂವೀಸ್ನಲ್ಲಿ ತಯಾರಾಗುತ್ತಿದ್ದು, ಬೇರೊಬ್ಬ ನಿರ್ಮಾಪಕರು ಇದನ್ನು ನಿರ್ಮಿಸುತ್ತಿದ್ದಾರೆನ್ನಲಾಗಿದೆ. ಚಿತ್ರಕ್ಕೆ ಎಂದಿನಂತೆ ಹರಿಕೃಷ್ಣ ಸಂಗೀತ, ಸುಜ್ಞಾನ್ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ