ದಿ ವಿಲನ್ ಡಬಲ್ ಟೀಸರ್
Team Udayavani, Dec 5, 2017, 11:35 AM IST
ನಿರ್ದೇಶಕ ಪ್ರೇಮ್ “ದಿ ವಿಲನ್’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇನ್ನೂ ಚಿತ್ರೀಕರಣ ಮಾಡುತ್ತಲೇ ಇದ್ದಾರೆ. ಇನ್ನೂ ಸಾಕಷ್ಟು ಚಿತ್ರೀಕರಣ ಬಾಕಿ ಇದೆ. ಈಗಾಗಲೇ ಸುದೀಪ್ ಅವರ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ಪ್ರೇಮ್, ಈಗ ಶಿವರಾಜಕುಮಾರ್ ಅವರ ದೃಶ್ಯಗಳನ್ನು ಚಿತ್ರೀಕರಿಸಲು ಅಣಿಯಾಗುತ್ತಿದ್ದಾರೆ.
ಸದ್ಯ ಶಿವಣ್ಣ “ಕವಚ’ ಚಿತ್ರದಲ್ಲಿ ಬಿಝಿ. ಅದರ ಶೆಡ್ನೂಲ್ ಮುಗಿಸಿಕೊಂಡು “ದಿ ವಿಲನ್’ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶಿವಣ್ಣ ಹಾಗೂ ಸುದೀಪ್ ಕ್ಲೈಮ್ಯಾಕ್ಸ್ನಲ್ಲಿ ಜೊತೆಯಾಗಲಿದ್ದಾರೆ. ಆ ಭಾಗದ ಚಿತ್ರೀಕರಣ ಕೂಡಾ ಬಾಕಿ ಇದೆ. ಸಹಜವಾಗಿಯೇ ಅಭಿಮಾನಿಗಳು “ದಿ ವಿಲನ್’ ಬಗ್ಗೆ ಕುತೂಹಲದಿಂದಿದ್ದಾರೆ.
ಅತ್ತ ಕಡೆ ಸುದೀಪ್ ಅಭಿಮಾನಿಗಳು, ಇತ್ತ ಕಡೆ ಶಿವಣ್ಣ ಅಭಿಮಾನಿಗಳು ಪ್ರೇಮ್ ಅವರನ್ನು “ಏನ್ ಗುರು, ಏನಾಯ್ತು ಸಿನಿಮಾ’ ಎಂದು ಹೋದಲ್ಲೆಲ್ಲಾ ಕೇಳುತ್ತಿದ್ದಾರೆ. ಈಗ ಇವರಿಗೆ ಉತ್ತರ ಕೊಡಲು ಪ್ರೇಮ ನಿರ್ಧರಿಸಿದ್ದಾರೆ. ಅದು ಟೀಸರ್ ಮೂಲಕ. ಹೌದು, ಪ್ರೇಮ್ ಈಗ “ದಿ ವಿಲನ್’ ಚಿತ್ರದ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಟೀಸರ್ನ ವಿಶೇಷತೆ ಎಂದರೆ ಡಬಲ್ ಟೀಸರ್.
ಹೌದು, ಈ ಬಾರಿ ಪ್ರೇಮ್ ಎರಡೆರಡು ಟೀಸರ್ ಬಿಡುಗಡೆ ಮಾಡಲಿದ್ದಾರೆ. ಶಿವರಾಜಕುಮಾರ್ ಹಾಗೂ ಸುದೀಪ್ ಅವರ ಪ್ರತ್ಯೇಕ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಇಬ್ಬರು ನಟರ ಅಭಿಮಾನಿಗಳನ್ನು ತೃಪ್ತಿಪಡಿಸಲು ಪ್ರೇಮ್ ಹೊರಟಿದ್ದಾರೆ. ಈ ತಿಂಗಳಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, ಈಗಾಗಲೇ ಟೀಸರ್ ಸಿದ್ಧವಾಗಿದೆ. ಈ ಟೀಸರ್ “ದಿ ವಿಲನ್’ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ